ಮತ್ತೆ ಕಲ್ಯಾಣ ವಿದ್ಯಾರ್ಥಿಗಳೊಂದಿಗೆ ಸಂವಾದ

ಆಗಸ್ಟ್ 27 , ಕೊಪ್ಪಳ , ಇಲ್ಲಿನ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತೆ ಕಲ್ಯಾಣ ‘ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಕೊಳಲ ದನಿಗೆ ಸರ್ವ ತಲೆದೂಗುವಂತೆ ಮನುಷ್ಯ ಸಹ ಒಳ್ಳೆಯ ವಿಚಾರಗಳನ್ನು ಕೇಳಿದ ಕೂಡಲೇ ತಲೆದೂಗುತ್ತಾನೆ . ಆದರೆ ಅದೇ ಒಳ್ಳೆಯ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಮಾತ್ರ ಮುಂದಾಗುವುದಿಲ್ಲ . ಇದಕ್ಕೆ ಕಾರಣ ಬದ್ಧತೆಯ ಕೊರತೆ , ಮನಸ್ಸಿನ ಚಂಚಲತೆ , ಶಿಕ್ಷಣದ ಮೂಲ ಉದ್ದೇಶವೇ ಮನಸ್ಸನ್ನು ಏಕಾಗ್ರತೆಗೊಳಿಸುವುದು . ಮನುಷ್ಯನ ಮನಸ್ಸನ್ನು ಮಂಗನಿಗೆ ಹೋಲಿಸುವರು . ಮನುಷ್ಯ ಮಂಗನಂತಾಗದೆ 
ಮಹಾದೇವನಂತಾಗಬೇಕು . ನಾವು ಹೊರಗಡೆ ಸುಖಿಗಳಂತೆ ನಟಿಸುತ್ತೇವೆ . ಆದರೆ ಅಂತರ್ಯದಲ್ಲಿ ದುಃಖ , ದುಮ್ಮಾನ , ಸಂಕಟಗಳು ಇದ್ದೇ ಇರುತ್ತವೆ . ಯಾರು ತನ್ನೊಳಗೇ ಸಂಪತ್ತನ್ನು ಕಂಡುಕೊಳ್ಳುತ್ತಾರೋ ಅವರು ಪರಮಸುಖಿಗಳು . ಸುಖವೆಂಬುದು ಮನಸ್ಸಿಗೆ ಸಂಬಂಧಿಸಿದ್ದು ಎನ್ನುವುದನ್ನು ಮರೆತು ಹೊರಗಿನ ಸುಖಗಳ ಭ್ರಮೆಯಲ್ಲಿದ್ದೇವೆ . ಶರಣರು ಯಾವುದೇ ಶಾಲಾ ಕಾಲೇಜಿಗೆ ಹೋದವರಲ್ಲ . ಕಾಯಕದ ಮೂಲಕ ಜ್ಞಾನದ ಬೆಳಕನ್ನು ಕಂಡುಕೊಂಡವರು . ಆತ್ಮಜ್ಞಾನದ ಮೂಲಕ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣವನ್ನು ಮಾಡಿಕೊಂಡರು , ಅಜ್ಞಾನದಿಂದ ಅಹಂಕಾರ – ಮಮಕಾರ , ಮನಚಂಚಲ , ಇಂದ್ರಿಯ ಉದ್ರೇಕ , ದೇಹಮೋಹ , ಅತಿ ಆಕಾಂಕ್ಷೆ , ರಾಗದ್ವೇಷಗಳು ಹುಟ್ಟುವವು . ಶರಣರು ಇಷ್ಟಲಿಂಗಧಾರಣೆಯ ಮೂಲಕ ಅಂತರ್ ಮುಖಿಗಳಾಗಿ ತನ್ನೊಳಗನ್ನು ತಾನೇ ಕಂಡುಕೊಂಡರು ಗುಡಿಗಂಡಾರಗಳನ್ನು ತಿರಸ್ಕರಿಸಿ ನನಗೆ ನಾನೇ ದೇವನಾಗುವುದನ್ನು ಕಲಿಸಿದರು . ದೇಹವನ್ನೇ ದೇವಾಲಯ ಮಾಡಿಕೊಂಡರು . ಸುಜ್ಞಾನಿಗಳಾದವರು ಪಾಪ , ದ್ರೋಹ , ವಂಚನ ಮಾಡುವುದಿಲ್ಲ , ಹೃದಯವೈಶಾಲ್ಯತೆ ಅವರಲ್ಲಿರುತ್ತದೆ . ಇಂತಹ ಗುಣಗಳನ್ನು ನಾವೂ ಬೆಳೆಸಿಕೊಳ್ಳಬೇಕಾದರೆ ಶರಣರ ವಚನಗಳನ್ನು ಓದಿ ಅರ್ಥೈಸಿಕೊಂಡು ಆಚರಣೆಗೆ ತರಬೇಕು . ಶರಣರ ವಚನಗಳು ಬೆಳಕಿನ ಪುಂಜಗಳು . ವಚನ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಂಥದ್ದೇ ಸಂವಾದದ ಆಶಯ . ವಿದ್ಯಾರ್ಥಿಗಳು ತಮ್ಮ ಒಳಗಿನ ಭಾವನೆಗಳನ್ನು , ಗೊಂದಲಗಳನ್ನು , ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕಾದರೆ ಮೊದಲು ಪ್ರಶ್ನೆ ಮಾಡುವ ಮನೋಗುಣ ಬೆಳೆಸಿಕೊಳ್ಳಬೇಕು , ದೇವರ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತರು , ಪುಜಾರಿ ಪುರೋಹಿತರು ಪ್ರಾಣಿ ಬಲಿಕೊಡುತ್ತಾರೆ . ಯಾರು ಆರ್ಥಿಕವಾಗಿ , ಸಾಮಾಜಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಮೀಸಲಾತಿ ಬೇಕು ನಮ್ಮನ್ನು ಮೌಢಕ್ಕೆ ತಳ್ಳಿ ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕೆ ಜ್ಯೋತಿಷ್ಯ ಹುಟ್ಟಿಕೊಂಡಿತು . ಶರಣರು ಕರ್ಮ ಸಿದ್ಧಾಂತಗಳನ್ನು ಒಪ್ಪಲಿಲ್ಲ . ಇನ್ನೊಬ್ಬರಿಗೆ ನೋವವನ್ನು ಕೊಡದಿರುವುದೇ ದಯೆ , ಜಂಗಮ ಅಂದರೆ ಜಾತಿ ಅಲ್ಲ ; ಧರ್ಮ ಅಲ್ಲ . ಯಾರಿಗೆ ಅರಿವು ಆಚಾರವಿರುತ್ತದೆಯೋ ಅವನೇ ನಿಜ ಜಂಗಮ , ಅವರ ಮೂಲಕ ಮನೆಯೇ ಅನುಭವ ಮಂಟಪವಾಗಲಿ ಎನ್ನುವ ಕಾರಣಕ್ಕಾಗಿ ಜಂಗಮರನ್ನು ಮನೆಗೆ ಕರೆಸುವ ಪದ್ಧತಿ ಇದೆ . ಸಂವಾದಕ ಸಿದ್ದನಗೌಡ ಪಾಟೀಲ್ ಮಾತನಾಡಿ ಏನು ? ಎಲ್ಲಿ ? ಹೇಗೆ ? ಏಕೆ ? ಎನ್ನುವ ಪ್ರಶ್ನೆಗಳನ್ನು ಕೇಳದೆ ಎಲ್ಲವನ್ನೂ ಒಪ್ಪಿಕೊಳ್ಳುವುದೇ ಮೂಢನಂಬಿಕೆ , ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಅಭ್ಯಾಸ ಮಾಡದೇ ದೇವರಿಗೆ ಕೈ ಮುಗಿದರೆ ಪಾಸಾಗುವುದಿಲ್ಲ . ಸತತ ಅಭ್ಯಾಸದಿಂದ ಪಾಸಾಗುವುದು . ಕೈಮುಗಿಯುವುದರಿಂದಲೇ ನಾನು ಪಾಸಾಗುತ್ತೇನೆ ಎನ್ನುವುದು ಮೂಢನಂಬಿಕೆ . ಇದು ಎಲ್ಲರಲ್ಲೂ ಇದೆ . ಜಾತಿ ಎನ್ನುವುದೂ ಮೂಢನಂಬಿಕೆಯೇ . ಮೀಸಲಾತಿ ಹಿಂದುಳಿದವರು ಮುಂದುವರೆಯಬೇಕು ಎನ್ನುವ ಕಾರಣಕ್ಕಾಗಿ ನೀಡಿರುವಂಥ ತಾತ್ಕಾಲಿಕ ಕ್ರಮ . ಜಾತಿ ಮತ್ತು ಮೀಸಲಾತಿಗೆ ಪರಿಹಾರವೆಂದರೆ ಎಲ್ಲರಿಗೂ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಉಚಿತವಾಗಿ ಶಿಕ್ಷಣ ಕೊಡಬೇಕು . ಜ್ಯೋತಿಷ್ಯರ ಹೇಳುವವರು ಟಿವಿಯವರಿಗೆ ದುಡ್ಡು ಕೊಟ್ಟು ಟಿವಿಯಲ್ಲಿ ಬಂದು ಜ್ಯೋತಿಷ್ಯ ಹೇಳುತ್ತಾರೆ . ಅವರು ಹೇಳುವುದೆಲ್ಲ ಸುಳ್ಳು . ಟಿವಿಯಲ್ಲಿ ಬರುವ ಜ್ಯೋತಿಷ್ಯವನ್ನು ನಂಬಬೇಡಿ . ನಮ್ಮ ಅತ್ಮವಿಶ್ವಾಸವೇ ನಮ್ಮ ಭವಿಷ್ಯ ಜಾತಿಗಳು ಮಾನವ ನಿರ್ಮಿತ , ನಾಗರೀಕತೆಗಿಂತ ಪೂರ್ವದಲ್ಲಿ ಕೆಲಸ ಕಾರ್ಯಗಳನ್ನು ಹಂಚಿಕೊಳ್ಳಲು ಒಬ್ಬೊಬ್ಬರು ಒಂದೊಂದು ಕೆಲಸವನ್ನು ಮಾಡುತ್ತಿದ್ದರು . ಇದನ್ನೆ ವಚನಕಾರರು ‘ ಕಾಸಿ ಕಮ್ಮಾರನಾದ , ಬೀಸಿ ಮಡಿವಾಳನಾದ . ‘ ಎಂದುದು , ಮುಂದೆ ಇದೇ ಜಾತಿಯಾಗಿ ರೂಪಗೊಂಡಿತು , ಮನುಶಾಸ್ತ್ರ ಬರುವ ಹೊತ್ತಿಗೆ ಪುರೋಹಿತಶಾಹಿ ಮತ್ತು ರಾಜರ ಕುತಂತ್ರದಿಂದ ಜಾತಿ ಇನ್ನೂಷ್ಟು ಬಲಗೊಂಡಿತು , ನನ್ನ ಜಾತಿಯೇ ಶ್ರೇಷ್ಟ ಎನ್ನುವುದೇ ಜಾತಿ ವ್ಯವಸ್ಥೆಯ ಸಮಸ್ಯೆ . ಜಾತಿಯಿಂದ ಬುದ್ದಿವಂತಿಕೆಯನ್ನು ಅಳೆಯಲಾಗುವುದಿಲ್ಲ . ಹೀಗೆ ಜಾತಿ ಮಧ್ಯದಲ್ಲಿ 

ಬಂದದ್ದೇ ಹೊರತು ಹುಟ್ಟಿನಿಂದ ಬಂದದ್ದಲ್ಲ . ವ್ಯಕ್ತಿ ಯಾವುದೇ ಒಂದು ವಸ್ತುವನ್ನು ಸೃಷ್ಟಿಸಲು ಅಥವ ಒಂದು ವಸ್ತುವನ್ನು ಇನ್ನೊಂದು ವಸ್ತುವಾಗಿ ಬದಲಾಯಿಸಲು ಸಾಧ್ಯವಿಲ್ಲ . ಕಣ್ಮಟ್ಟು ವಿದ್ಯೆಯನ್ನು ನಂಬಬಾರದು , ಮಾಧ್ಯಮಗಳು ಉದ್ಯಮವಾಗಿವೆ . ಟಿ ಆರ್ ಪಿಗಾಗಿ ಸುಳ್ಳು ಸುಳ್ಳು ಸುದ್ದಿಯನ್ನು ಹಬ್ಬಿಸಿ ಜನರನ್ನು ದಿಕ್ಕು ತಪ್ಪಿಸುತ್ತಿವೆ , 12 ನೆಯ ಶತಮಾನದ ‘ ಅನುಭವ ಮಂಟಪ ‘ ವೂ ಒಂದು ಅಧಿವೇಶನ , ಬುದ್ಧ ಸಮಾಜದಿಂದ ಹೊರಗಿದ್ದು ಸಮಾಜವನ್ನು ಕಟ್ಟಿದರೆ ; ಶರಣರು ಸಮಾಜದ ಒಳಗಿದ್ದೇ ಸಮಾಜ ಕಟ್ಟಿದರು . ವರ್ತಮಾನದಲ್ಲಿದ್ದು ಇತಿಹಾಸವನ್ನು ನೋಡುವುದೇ ‘ ಮತ್ತೆ ಕಲ್ಯಾಣ ‘ , ಜಾತಿಯನ್ನು ಬಿಟ್ಟು ಧರ್ಮದ ಕಡೆಗೆ ಹೋಗಬೇಕು . ಕೊನೆಗೆ ಧರ್ಮವನ್ನೂ ಬಿಟ್ಟು ಮಾನವತಯ ಕಡೆ ಹೋಗಬೇಕು . ಯುವ ಜನಾಂಗ ಜಾಗೃತಿಯಾಗಬೇಕು . ಅನೇಕ ಕಡೆ ಭಕ್ತರು ಸ್ವಾಮೀಜಿಯವರ ಬಳಿ ಬರುವರು . ಇಲ್ಲಿ ಸ್ವಾಮೀಜಿಯವರೇ ಜನರ ಬಳಿ ಬಂದಿದ್ದಾರೆ . ಇದು ಇಂದು ಆಗಬೇಕಾದ ಕಾರ್ಯ , ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ಬಂದ ನನಪಿನಲ್ಲಿ ವಿದ್ಯಾರ್ಥಿಗಳು ವಿದೇಶೀ ವಸ್ತುಗಳನ್ನು ಬಹಿಷ್ಕಾರ ಮಾಡಿ ಸ್ವದೇಶಿ ವಸ್ತುಗಳನ್ನು ಬಳಸಿ ನಮ್ಮ ನಾಡಿನ ಆರ್ಥಿಕತೆಯನ್ನು ಹೆಚ್ಚಿಸುತ್ತೇವೆ . ಎನ್ನುವ ಸಂಕಲ್ಪ ಮಾಡಬೇಕು ಎಂದರು . ಇನ್ನೋರ್ವ ಚಿಂತಕಿ ಸಾವಿತ್ರಿ ಮಜುಂದಾರ ಮಾತನಾಡಿ ಮನುಷ್ಯನಲ್ಲಿ ಪರಿಪೂರ್ಣತ ಬರಲು ಶರಣರ ಧರ್ಮವೇ ರಹದಾರಿ . ಶರಣರು ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆದರು . ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಂಡು ಲೋಕವಿಮರ್ಶೆಗೆ ಒಳಗು ಮಾಡಿಕೊಳ್ಳಬೇಕು . ದೇವರು , ದೆವ್ವ ಮನುಷ್ಯನ ದೇಹದಲ್ಲಿ ಇರುವುದಿಲ್ಲ , ನಾವು ಯಾವುದೇ ಮೂಢನಂಬಿಕೆಗಳನ್ನು ನಂಬುವುದಕ್ಕಿಂತ ಮುಂಚೆ ವೈಜ್ಞಾನಿಕವಾಗಿ ಯೋಚಿಸಬೇಕು . ಆನೇಕ ಕೌಟುಂಬಿಕ ಕಲಹಗಳಿಗೆ ಲಿಂಗತಾರತಮ್ಯವೇ ಕಾರಣ , ಶರಣರು ಶ್ರೇಷ್ಠ – ಕನಿಷ್ಠಗಳೆಂಬ ಅನಿಷ್ಟಗಳನ್ನು ತೊಡೆದು ಹಾಕಿ ಸಮಸಮಾಜವನ್ನು ನಿರ್ಮಾಣ ಮಾಡಲು ಹೋರಾಡಿದರು , ವಿವಾಹ ವೈಯುಕ್ತಿಕ ಅಭಿಪ್ರಾಯವಾಗಬೇಕೇ ಹೊರತು ಬಲವಂತ ಆಗಬಾರದು , ಅಂತರ್ ಜಾತಿ ವಿವಾಹದಲ್ಲಿ ಇಬ್ಬರಿಗೂ ಒಮ್ಮತದ ಅಭಿಪ್ರಾಯವಿದ್ದು , ತಮ್ಮ ಕಾಲಮೇಲೆ ತಾವು ನಿಂತುಕೊಂಡು , ಪೋಷಕರ ಮನವೊಲಿಸಿ ವಿವಾಹವಾಗಬೇಕು . ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು : • ದೇವರನ್ನು ಒಲಿಸಲು ಪ್ರಾಣಿಬಲಿಯನ್ನು ಕೊಡುತ್ತಾರೆ . ಇದಕ್ಕೆ ಬಸವಣ್ಣನವರು ಏನು ಹೇಳುತ್ತಾರೆ ? . ಬಸವಣ್ಣನವರ ಪ್ರಕಾರ ಮಾನವನ ಬದುಕು ಯಾವ ಕಾರ್ಯಗಳಿಂದ ಪರಿಪೂರ್ಣಗೊಳ್ಳುತ್ತದೆ ? , 12ನೆಯ ಶತಮಾನದಲ್ಲಿ ಅಂತರ್ ಜಾತಿ ವಿವಾಹ ಮಾಡಿದರು , 21ನೆಯ ಶತಮಾನದಲ್ಲಿ ಅಂತರ್ ಜಾತಿ ವಿವಾಹಗಳು ಯಾಕೆ ಆಗುತ್ತಿಲ್ಲ ? , ಭೂಮಿಯ ಮೇಲೆ ದೈವೀಶಕ್ತಿ ಅಥವ ದುಷ್ಟ ಶಕ್ತಿಗಳಿವೆಯೇ ? ಹಣ್ಣಿಗೆ ಅರ್ಹತೆಯಿದ್ದರೂ ಮನೆಯಲ್ಲಿ ಮೂಢನಂಬಿಕೆಯಿಂದಾಗಿ ಅವಳನ್ನು ಅವಕಾಶದಿಂದ ವಂಚಿತಳನ್ನಾಗಿ ಮಾಡುತ್ತಿದ್ದಾರೆ . ಯಾಕೆ ? . ಶಿಕ್ಷಣದಲ್ಲಿ ಯಾವುದೇ ಸೌಲಭ್ಯ ಪಡೆಯಬೇಕಾದರೆ ಜಾತಿ ಕೇಳುತ್ತಾರೆ ? ಇದು ಎಷ್ಟರಮಟ್ಟಿಗೆ ಸರಿ ? – ಇಷ್ಟಲಿಂಗದ ಬದಲಾಗಿ ಕಲ್ಲು ಕೈಯಲ್ಲಿಟ್ಟುಕೊಂಡು ಪೂಜೆ ಮಾಡಬಹುದಲ್ಲವೇ ?

Please follow and like us:
error