ಮಣಿದ ಬಿಜೆಪಿ ಹೈಕಮಾಂಡ್ : ಬೆಂಗಳೂರಿಗೆ ಸಂಗಣ್ಣ ಕರಡಿ , ಸಂದಾನ ಯಶಸ್ವಿಯಾಗುತ್ತಾ?

ಕೊಪ್ಪಳದಲ್ಲಿ ಬಿಜೆಪಿ ಬಂಡಾಯ ಅಂತಿಮ ಘಟ್ಟ ತಲುಪಿದೆ. ಬಿಜೆಪಿಯ 2ನೇ ಅಭ್ಯರ್ಥಿ ಪಟ್ಟಿ ಇದೀಗ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ಕಣ್ಣೀಗೆ ಬೆಣ್ಣೆ, ಮತ್ತೊಂದು ಕಣ್ಣೀಗೆ ಸುಣ್ಣ ಹಚ್ತಿರೋ ಹೈಕಮಾಂಡ್ ವಿರುದ್ಧ ಇಂದು ಸಾವಿರಾರು ಕಾರ್ಯಕರ್ತರು ಸಂಸದರ ಮನೆ ಮುಂದೆ ಜಮಾಸಿಯಿದ್ರು. ಅಲ್ದೆ, ಸಂಸದರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ಗೆ ಆಗ್ರಹಿಸಿದ್ರು.

ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚುನಾವಣೆಗೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನ ರೀಲಿಸ್ ಮಾಡಿದ ಬಿಜೆಪಿ ಹೈಕಮಾಂಡ್ ಇದೀಗ ಟಿಕೆಟ್ ವಂಚಿತರ ಕೆಂಗಣ್ಣಿಗೆ ಗುರಿಯಾಗಿದೆ. ಟಿಕೆಟ್ ವಂಚಿತರು ಇದೀಗ ಹೈಕಮಾಂಡ್ ವಿರುದ್ಧ ಬಂಡಾಯ ಎದ್ದಿದ್ದಾರೆ. ಇದಕ್ಕೆ ಕೊಪ್ಪಳ ವಿಧಾನ ಸಭಾ ಕ್ಷೇತ್ರವೇ ಸಾಕ್ಷಿ

ಈ ಹಿಂದೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಹಾಗೂ ಶ್ರೀರಾಮುಲು ಹೊರತುಪಡಿಸಿ ಸಂಸದರಿಗೆ ಟಿಕೆಟ್ ನೀಡೋದಿಲ್ಲ ಎಂದು ಸ್ಪಷ್ಟಪಡಿಸಿದ್ರು. ಇದಕ್ಕೆ ಎಲ್ಲ ಸಂಸದರು ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿದ್ರು. ಆದ್ರೇ, ಇದೀಗ ಸ್ವತಃ ಹೈಕಮಾಂಡ್ ತನ್ನ ನಿರ್ಧಾರವನ್ನ ಸಡಿಲಿಸಿ ಸದ್ದಿಲ್ಲದೇ ಮೂರನೇ ಪಟ್ಟಿಯಲ್ಲಿ ಸಂಸದೆ ಶೋಭಾ ಕರಂದಾಜ್ಲೆಗೆ ಟಿಕೆಟ್ ನಿಡೋಕೆ ಮುಂದಾಗಿದೆಯಂತೆ. ಇದು ಇದೀಗ ಕೊಪ್ಪಳದ ಹಿರಿಯ ರಾಜಕಾರಣಿ ಹಾಗೂ ಪ್ರಬಲ ನಾಯಕರಾಗಿರೋ ಹಾಲಿ ಸಂಸದ ಕರಡಿ ಸಂಗಣ್ಣರನ್ನ ಕೆರಳಿಸಿದೆ. ಹೀಗಾಗಿ ಇಂದು ಸಂಸದರ ಮನೆ ಮುಂದೆ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿದ್ರು. ಇನ್ನು, ಸ್ವತಃ ಸಂಗಣ್ಣ ಕರಡಿಯವರು ಕೂಡ ಕೊಪ್ಪಳ ವಿಧಾನ ಸಭಾ ಕ್ಷೇತ್ರಕ್ಕೆ ಸಿ.ವಿ ಚಂದ್ರಶೇಖರ್ಗೆ ಟಿಕೆಟ್ ಘೋಷಣೆ ಮಾಡಿದಾಗಲೂ ಅಸಮಾಧಾನಗೊಂಡಿದ್ರು. ಆದ್ರೇ, ಅದನ್ನ ಅವರು ತೋರಿಸಿಕೊಂಡಿದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿದ್ರು. ಆದ್ರೀಗ ಶೋಭಾ ಕರಂದಾಜ್ಲೆಗೆ ಪಕ್ಷ ಟಿಕೆಟ್ ನೀಡೋಕೆ ಮುಂದಾಗುತ್ತಿದ್ದಂತೆ ಈ ಬಗ್ಗೆ ಹೈಕಮಾಂಡನ್ನು ಪ್ರಶ್ನಿಸಿದ್ರೆ, ಅವರು ಗೆಲ್ಲೋ ಅಭ್ಯರ್ಥಿ ಹೀಗಾಗಿ ಅವರಿಗೆ ಟಿಕೆಟ್ ನೀಡ್ತಿವಿ ಅಂತಾರಂತೆ, ಹಾಗಾದ್ರೆ ನಾವೂ ಇಲ್ಲಿ ಕೂಡ ಗೆಲ್ಲೋ ಅಭ್ಯರ್ಥಿ. ನಮಗೂ ನೀಡಿ ಅಂತಾ ಹೈಕಮಾಂಡ್ಗೆ ಹೇಳಿದ್ರು. ಅಲ್ದೇ, ಿ ತಮ್ಮ ಅಭಿಪ್ರಾಯವನ್ನ ತಿಳಿಸುವಂತೆ ಹೈಕಮಾಂಡ್ಗೆ ಗಡುವು ನೀಡಿದ್ದಾರೆ. ಒಂದು ವೇಳೆ ತಮ್ಮ ನಿರ್ಧಾರಕ್ಕೆ ಹೈಕಮಾಂಡ್ ಮಣಿಯದಿದ್ದರೇ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರಂತೆ.

ಶೋಭಾ ಕರಂದಾಜ್ಲೆಗೆ ಟಿಕೆಟ್ ನೀಡ್ತಿರೋ ಹೈಕಮಾಂಡ್ ನಿರ್ಧಾರಕ್ಕೆ ಇದೀಗ, ಕೊಪ್ಪಳದಲ್ಲಿ ಅಸಮಾಧಾನದ ಹೊಗೆ ಯಾಡ್ತಿದ್ದು, ಬಿಜೆಪಿಯ ಹಿರಿಯ ನಾಯಕರಾಗಿರೋ ಕರಡಿ ಸಂಗಣ್ಣ ಇದೀಗ ನಮಗೂ ಟಿಕೆಟ್ ನೀಡಿ ಅಂತ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅವರ ಕಾರ್ಯಕರ್ತರು ಕೂಡ ಸಾಥ್ ನೀಡಿದ್ದು. ಒಂದು ವೇಳೆ ಟಿಕೆಟ್ ನೀಡದೇ ಇದ್ರೆ, ಪಕ್ಷೇತರರಾಗಿ ಕಣಕ್ಕೀಳಿಯೋ ಸೂಚನೆ ನೀಡಿದ್ದಾರೆ. ಇದಕ್ಕೆಲ್ಲ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕೊಪ್ಪಳದ ಬಿಜೆಪಿ ಭವಿಷ್ಯ ನಿರ್ಧಾರವಾಗಲಿಲಿದೆ. ಕೊನೆಗೂ ಒತ್ತಡಕ್ಕೆ ಮಣಿದಿರುವ ಬಿಜೆಪಿ ಹೈಕಮಾಂಡ್ ಸಂಗಣ್ಣ ಕರಡಿಯವರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದೆ. ಬೆಂಗಳೂರಿನಲ್ಲಿ ಸಂದಾನ ಯಶಸ್ವಿಯಾಗದಿದ್ದರೆ ಸಂಸದರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವದು ಕುತೂಹಲಕರವಾಗಿದೆ.

Please follow and like us:
error