ಮಟ್ಕಾ, ಇಸ್ಪೇಟ್ ಜೂಜಾಟ ದಾಳಿ : ಬಂಧನ

Koppal News ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕವಲೂರ ಗ್ರಾಮದ ತೆಕ್ಕೇದ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 09 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ರಾಮಪ್ಪ ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 5,340/- ರೂ ಗಳನ್ನು ವಶಪಡಿಸಿಕೊಂಡು 09 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ
ಮಟಕಾ ದಾಳಿ : ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮರ್ಲಾನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಕೇಶವ ತಂದೆ ರಾಮಣ್ಣ ಗಂಗಾವತಿ ಸಾ: ಹುಳ್ಕಿಹಾಳ ಕ್ಯಾಂಪ, ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶಿವರಾಜ ಇಂಗಳೆ ಪಿ.ಎಸ್.ಐ. ಡಿ.ಸಿ.ಐ.ಬಿ. ಘಟಕ ಜಿಲ್ಲಾ ಪೊಲೀಸ್ ಕಛೇರಿ ಕೊಪ್ಪಳ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 6,380=00 ಗಳನ್ನು ಜಪ್ತಿ ಪಡಿಸಿಕೊಂಡು ವಿಚಾರಿಸಲು ಮಟಕಾ ಪಟ್ಟಿಯನ್ನು ಇನ್ನೊಬ್ಬ ಆರೋಪಿ ಶ್ರೀನಿವಾಸ ತಂದೆ ರಾಮಚಂದ್ರ ಸಾ: ಸಾಲುಂಚಿಮರ ಈತನಿಗೆ ಕೊಡುವದಾಗಿ ತಿಳಿಸಿದ್ದು ಇಬ್ಬರ ವಿರುದ್ದ ಪ್ರಕರಣ ದಾಖಲಿಸದ್ದಾರೆ.

Please follow and like us:
error