You are here
Home > Crime_news_karnataka > ಮಟಕಾ, ಅಕ್ರಮ ಮರಳು ಸಾಗಾಟದ ಮೇಲೆ ದಾಳಿ, ಜಪ್ತಿ

ಮಟಕಾ, ಅಕ್ರಮ ಮರಳು ಸಾಗಾಟದ ಮೇಲೆ ದಾಳಿ, ಜಪ್ತಿ

ಕೊಪ್ಪಳ : ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಮತ್ತು ಅಕ್ರಮ ಮರಳು ಸಾಗಾಟದ ಮೇಲೆ ದಾಳಿ ಮಾಡಲಾಗಿದೆ.

ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಬೂದಗುಂಪಾ ರಸ್ತೆಯ ಎಂ. ಆರ್. ಗ್ಯಾರೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಆಂಜನೇಯ ತಂದೆ ನಾರಾಯಣಪ್ಪ ಸಾ: ಕಾರಟಗಿ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 6,380=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ

ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಸೇವಾಲಾಲ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಬಸವರಾಜ ತಂದೆ ಬಾಳಪ್ಪ ಸಾ: ಯಲಬುರ್ಗಾ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ವಿನಾಯಕ ಪಿ.ಎಸ್.ಐ ಯಲಬುರ್ಗಾ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 900=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ

ಅಕ್ರಮ ಮದ್ಯ ಮಾರಾಟ ದಾಳಿ
ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ನಿಲೋಗಲ್ಲ ಗ್ರಾಮದ ಬಸರಿಗಿಡದ ಕಟ್ಟೆಯ ಹತ್ತಿರ ಆರೋಪಿತನಾದ ಶಂಕರಪ್ಪ ತಂದೆ ಬಸಪ್ಪ ಗುಳೇದ ಸಾ: ನಿಲೋಗಲ್ಲ ಈತನು ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ . ಶಿವರಾಜ ಪಿ.ಎಸ್.ಐ. ಬೇವೂರ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ರೂ. 990/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ಕುಕನೂರ ಪೊಲೀಸ್ ಠಾಣೆ ಪಟ್ಟಣದ ಕೆ.ಇ.ಬಿ. ಕಛೇರಿ ಹತ್ತಿರ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಆರೋಪಿತರು ಟ್ರ್ಯಾಕ್ಟರನಲ್ಲಿ ಮರಳನ್ನು ಸಾಗಾಟ ಮಾಡುವಾಗ ರಾಘವೇಂದ್ರ ಪಿ.ಎಸ್.ಐ ಕುಕನೂರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಆರೋಪಿತರು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು, ಟ್ರ್ಯಾಕ್ಟರ ವಶಪಡಿಸಿಕೊಂಡು ಚಾಲಕ ಮತ್ತು ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

Top