ಮಗನನ್ನು ಸಿನೆಮಾ ಹೀರೋ ಮಾಡಲು ಜಮೀನು ಮಾರಲು ಹೊರಟ ಪೋಷಕರು

– ಮಗನ ಸಿನಿಮಾ ಹುಚ್ಚಿಗೆ ತಂದೆತಾಯಿ ತಮಗೆ ಇರುವ ಜಮೀನನ್ನೇ ಮಾರಾಟ ಮಾಡಲು ಮುಂದಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ‌. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್  ಗ್ರಾಮದ ನಿವಾಸಿಗಳಾಗಿರುವ ಯಮನೂರಸಾಬ ಹಾಗೂ ಜನ್ನತ್‍ಬಿ ನದಾಫ್.
ತಮ್ಮ ಮಗನ ಆ ಕನಸಿಗೆ ಇನ್ನೊಂದಿಷ್ಟು ರಂಗುತುಂಬಿಸಿದ್ಳಸಲು ಮುಂದಾಗಿರುವವರು.     ಈ ದಂಪತಿಗಳ ಮಗ ಶಂಶುದ್ದೀನ್ ಅಲಿಯಾಸ್ ಸಚ್ಚಿ. ಅಂತಹ ಹೇಳಿಕೊಳ್ಳುವಂತಹ ಆರ್ಥಿಕ ಸ್ಥಿತಿವಂತರೇನೂ ಅಲ್ಲ.

ಈ ಯುವಕನಿಗೆ ಸಿನಿಮಾದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ. ಹೀಗಾಗಿ, ಸ್ಥಳೀಯವಾಗಿ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದಾನೆ. ಅಲ್ಲದೆ, ಲೂಸ್‍ಮಾದ ಯೋಗಿಯ ಧೂಳಿಪಟ ಸಿನಿಮಾದಲ್ಲಿ ಬಣ್ಣಹಚ್ಚಿಕೊಂಡು ತೆರೆಮೇಲೆ ಕಾಣಿಸಿಕೊಂಡಿದ್ದಾನೆ. ಅಲ್ಲದೆ, ಸ್ಥಳೀಯವಾಗಿರುವ ಸಿನೆಮಾಗಳಾದ ಜವರಾಯ, ಕೋವೆಲ್, ಬೆಳ್ಳಕ್ಕಿ ಜೋಡಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ಈಗ ತಮ್ಮ ಮಗ ಸ್ವಂತ ಬ್ಯಾನರ್ ಅಡಿಯಲ್ಲಿ ಸಿನೆಮಾ ಮಾಡಲು ಹಠ ಹಿಡಿದಿದ್ದಾನೆ. ಇದರಿಂದಾಗಿ ಮಗನ ಆಸೆಯ ಹಠಕ್ಕೆ ತಂದೆ ತಾಯಿ ಆಸರೆಯಾಗಲು ಮುಂದಾಗಿದ್ದಾರೆ. ಸಿನಿಮಾ ಮಾಡುವ ಮಗನ ಕನಸನ್ನು ನನಸು ಮಾಡಲು ತಮಗಿರುವ ಮೂರುವರೆ ಎಕರೆ ಜಮೀನು ಮಾರಾಟ ಮಾಡಲು ಮುಂದಾಗಿದ್ದಾರೆ.   ಮಾತೆತ್ತಿದರೆ ಸಾಕು ಬರೀ ಸಿನೆಮಾ ಸಿನೆಮಾ ಎಂದು ಮಗ ಕನವರಿಸುತ್ತಾನೆ. ಅದೆಲ್ಲಾ ಬಿಟ್ಟು ಮದುವೆ ಮಾಡಿಕೊಂಡಿರು ಎಂದು ಹೇಳಿದರು ಕೇಳುತ್ತಿಲ್ಲ. ಹೀಗಾಗಿ ಆತನ ಆಸೆಯನ್ನು ಈಡೇರಿಸಲು ತಮ್ಮ ಪಾಲಿನ ಜಮೀನು ಮಾರತ್ತಿದ್ದೇವೆ ಎನ್ನುತ್ತಾರೆ ಶಂಶುದ್ಧೀನ್ ಅವರ ತಾಯಿ ಜನ್ನತ್‍ಬೀ.ಸಿನಿಮಾ ಎಂದೃಎ ಚಿಕ್ಕವಯಸ್ಸಿನಿಂದಲೂ ರೆ ನನಗೆ ಪ್ರಾಣ. ಅಭಿನಯದ ಗೀಳು. ಹೀಗಾಗಿ, ನನ್ನ ಬಳಿ ಸಾಮರಸ್ಯ ಸಾರುವ ಒಂದು ಕತೆ ಇದೆ. ಅದನ್ನು ಸಿನೆಮಾ ಮಾಡಬೇಕು ಎಂಬುದು ನನ್ನ ಬಯಕೆ. ಅದಕ್ಕೆ ನನ್ನ ತಂದೆ ತಾಯಿಗಳು ಜಮೀನು ಮಾರಾಟ ಮಾಡಿ ಹಣ ಕೊಡುತ್ತಾರೆ. ಒಂದೊಳ್ಳೆ ಸಿನೆಮಾ ಮಾಡಿ ನಾನು ಬೆಳೆಯುತ್ತೇನೆ ಎಂದು ಶಂಶುದ್ಧೀನ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.ತಮ್ಮೂರ ಹುಡುಗನ ಈ ಕನಸಿಗೆ ಗ್ರಾಮಸ್ಥರು ಹಾಗೂ ಆತನ ಗೆಳೆಯರು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆದರೆ, ಅವುಗಳಿಗೆ ಪ್ರೋತ್ಸಾಹದ ಕೊರತೆ ಇದೆ. ಅಲ್ಲದೆ, ಸಿನೆಮಾ ರಂಗದಲ್ಲಿ ಕೋಟಿಗಟ್ಟಲೆ ಬಂಡವಾಳ ಹಾಕಿ ಕೈಸುಟ್ಟುಕೊಂಡಿರುವ ಉದಾಹರಣೆ ಗೊತ್ತಿದ್ದರೂ ಈ ದಂಪತಿ ಮಾತ್ರ ತಮ್ಮ ಮಗನ ಕನಸಿಗೆ ಜಮೀನು ಮಾರಾಟ ಮಾಡುತ್ತಿರುವುದು ಮೆಚ್ಚಲೆ ಬೇಕು.ಗ್ರಾಮೀಣ ಭಾಗದ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಿದೆ

Please follow and like us:
error