ಮಕ್ಕಳ ವಿವಿಧ ಸ್ಪರ್ಧೆ : ಹೆಸರು ನೋಂದಾಯಿಸಲು ಸೂಚನೆ

ಕೊಪ್ಪಳ ಜ. : ಬೆಂಗಳೂರು ಬಾಲ ಭವನ ಸೊಸೈಟಿ ಹಾಗೂ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಭಾಗವಹಿಸುವ ಆಸಕ್ತ ಮಕ್ಕಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಇಲಾಖಾ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 05 ರಿಂದ 16 ವರ್ಷದ ವಯೋಮಿತಿಯಲ್ಲಿನ ಆಸಕ್ತಿವುಳ್ಳ ಸರಕಾರಿ ಶಾಲೆ/ ಸೌಲಭ್ಯ ವಂಚಿತ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಕಾರ್ಯಕ್ರಮದ ನಿಯಮಗಳು : ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದ ವಿವಿಧ ಸ್ಪರ್ಧೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಯಮಗಳು ಅನ್ವಯಿಸಲಿದ್ದು, ಅವುಗಳು ಇಂತಿವೆ. 05 ರಿಂದ 16 ವರ್ಷದ ಮಕ್ಕಳಿಗೆ ಈ ಸ್ಪರ್ಧೆ ಮಾತ್ರ. ಸ್ಪರ್ಧೆಯು ಮೂರು ಗುಂಪುಗಳನ್ನು ಒಳಗೊಂಡಿದ್ದು, ಒಂದನೇ ಗುಂಪು 05 ರಿಂದ 08 ವರ್ಷ, ಎರಡನೇ ಗುಂಪು 09 ರಿಂದ 12 ವರ್ಷ ಹಾಗೂ ಮೂರನೇ ಗುಂಪು 13 ರಿಂದ 16 ವರ್ಷ. ಸ್ಪರ್ಧೆಯು ನಾಲ್ಕು ವಿಭಾಗಗಳನ್ನು ಒಳಗೊಂಡಿದ್ದು, ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ, ವೇಶಭೊಷಣ (ಕನ್ನಡದ ಹೆಸರಾಂತ ಕವಿಗಳು/ ಸಾಹಿತಿಗಳ ವೇಷಭೊಷಣ ಧರಿಸುವುದು). ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ತೀರ್ಪುಗಾರರ ಆಯ್ಕೆಯೇ ಅಂತಿಮವಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಸರಕಾರಿ ಶಾಲೆ/ ಸೌಲಭ್ಯ ವಂಚಿತ ಮಕ್ಕಳಿಗೆ ಹೆಚ್ಚಿನ ಆದ್ಯೆತೆಯನ್ನು ನೀಡಲಾಗುವುದು. ಭಾಗವಹಿಸುವ ಮಕ್ಕಳಿಗೆ ಹಾಗೂ ಸಿಬ್ಬಂದಿಗಳಿಗೆ ಯಾವುದೇ ರೀತಿ ದಿನ ಭತ್ಯೆ ಹಾಗೂ ಪ್ರಯಾಣ ಭತ್ಯೆ ಇರುವುದಿಲ್ಲ.
ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳು ತಮ್ಮ ಹೆಸರನ್ನು ಜ. 30ರ ಸಾಯಂಕಾಲ 05-30 ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರ ಕಛೇರಿ, ಜಿಲ್ಲಾಡಳಿತ ಭವನ ಕೊಪ್ಪಳ ದೂ.ಸಂ. 08539-222703 ಕ್ಕೆ ಸಂಪರ್ಕಿಸಬಹುದಾಗಿದೆ

Please follow and like us:
error