ಮಕ್ಕಳಿಗೆ ಬುದ್ದಿ ಹೇಳುವ ಶಿಕ್ಷಕರ ಚುಟುಚುಟು ಡ್ಯಾನ್ಸ್ 

ಸಾಮಾಜಿಕ ಜಾಲಾಣಗಳಲ್ಲಿ ವ್ಯಾಪಕ ಚರ್ಚೆ
ಕೊಪ್ಪಳ : ನಗರದಲ್ಲಿ ಮೂರು ದಿನಗಳ ಹಿಂದೆ ಸೆ. 29ರಂದು ನಡೆದ ಶಿಕ್ಷಕರ ದಿನಾಚರಣೆ ದಿನಾಚರಣೆ  ಹಿನ್ನೆಲೆ ಶಿಕ್ಷಕರು ರಸ್ತೆಯಲ್ಲಿ ಚುಟುಚುಟು ಅಂತೈತಿ ಎಂಬ  ಬ್ಯಾಂಡ್ ಮ್ಯೂಸಿಕ್ ಗೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವುದು ಈಗ  ಚರ್ಚೆಗೆ ಗ್ರಾಸವಾಗಿದೆ. 
ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ನಡೆಯುತ್ತಿದ್ದು, ಮಕ್ಕಳಿ ಮಾದರಿ ಆಗಬೇಕಾದ ಶಿಕ್ಷಕರು ಕುಣಿದಿದ್ದು ಕೊಪ್ಪಳದಲ್ಲಿ ಮಕ್ಕಳ ಪಾಲಕರಲ್ಲಿ ಮುಜಗರ ಮೂಡಿಸಿದೆ.  ಶಿಕ್ಷಕರು ಚುಟುಚುಟು ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ನೋಡಿದವರು ಇದೆಂಥ ಕಾಲಪ್ಪ ಅಂತ ತಲೆ ತಲೆ ಬಡುಕೊಳ್ಳುತ್ತಿದ್ದಾರೆ.
ಇನ್ನು ವಿಚಿತ್ರ ಎಂದರೆ ಈ ಚುಟು ಚುಟು ಅಂತೈತಿ ಎಂಬ ಹಾಡಿಗೆ ಇಬ್ಬರು ಶಿಕ್ಷಕಿಯರು ಶಿಕ್ಷಕರೊಂದಿಗೆ ರಸ್ತೆಯಲ್ಲಿ ಸ್ಟೆಪ್ ಹಾಕಿರೋದು ಕೊಪ್ಪಳದ ಎಲ್ಲ ಶಾಲೆಗಳಲ್ಲಿ ಮಾತನಾಡಿಕೊಳ್ಳುವಂತ್ತಾಗಿದೆ.  ಈ ಹಾಡಿಗೆ ಡ್ಯಾನ್ಸ್ ಮಾಡಿರುವ ಶಿಕ್ಷಕರಲ್ಲಿ ಇಬ್ಬರು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುವವರು ಎನ್ನಲಾಗುತ್ತಿದೆ. ಒಬ್ಬರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ  ಮತ್ತೊಬ್ಬರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡಿಗೇರಿಸಿಕೊಂಡವರು ಸ್ಟೆಪ್ ಹಾಕಿದ್ದಾರೆ.
ಶಿಕ್ಷಕರ ಈ ರೀತಿಯ ಡ್ಯಾನ್ಸ್ ನೋಡಿ ಉತ್ತಮ ಶಿಕ್ಷಕರು ಸಹ ತಲೆತಗ್ಗಿಸುವಂತಾಗಿದೆ. ಹೀಗೆ ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಶಿಕ್ಷಕರು ಮಕ್ಕಳಿಗೆ ಶಾಲೆಯಲ್ಲಿ ಎಷ್ಟರ ಮಟ್ಟಿಗೆ ಶಿಕ್ಷಣ ಕಲಿಸುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
Please follow and like us:
error