ಮಕ್ಕಳಲ್ಲಿ ಶಿಕ್ಷಣದ ಜೋತೆಗೆ ಕ್ರೀಡಾ ಹವ್ಯಾಸ ಬೆಳೆಸಿ-ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ


ಕೊಪ್ಪಳ:೦೭,ನಗರದ ೪ನೇ ವಾರ್ಡಿನ ಸರ್ಕಾರಿ ಮಾದ್ಯಮಿಕ ಶಾಲೆಯಲ್ಲಿ ೨೦೧೭-೧೮ನೇ ಸಾಲಿನ ೮ನೇ ತರಗತಿ ವಿಧ್ಯಾರ್ಥಿ-ವಿಧ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದ ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ ಯಾವೋಬ್ಬ ವಿಧ್ಯಾರ್ಥಿಯು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರವು ಮಕ್ಕಳಿಗೆ ಶಾಲೆಯಲ್ಲಿ ಬಿಸಿ ಊಟ ಶಾಲೆಯ ಸಮವಸ್ತ್ರ ಶೋ, ಅಪೌಶ್ಟಿಕ ನಿವಾರಣೆಗೆ ಕ್ಷೀರ ಭಾಗ್ಯ ಯೋಜನೆ ಮುಖಾಂತರ ವಾರಕ್ಕೆ ೫ ದಿನ ಮಕ್ಕಳಿಗೆ ಹಾಲು ಕೊಡುತ್ತಿದ್ದು, ಸರ್ಕಾರದ ಯೋಜನೆಗಳ ಸದುಪಯೋಗ ಮಾಡಿಕೊಂಡು ಪ್ರತಿಯೊಬ್ಬ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣದ ಜೋತೆಗೆ ಉತ್ತಮ ಕ್ರೀಡೆಯ ಹವ್ಯಾಸ ಬೆಳೆಸಿ ಅವರನ್ನು ಒಬ್ಬ ಉತ್ತಮ ಕ್ರೀಡಾ ಪಟುವನ್ನಾಗಿ ಮಾಡಬೇಕು. ಈ ೫೦ ವರ್ಷದ ಅವಧಿಯಲ್ಲಿ ಹೈದ್ರಾಬಾದ್ ಕರ್ನಾಟಕದಿಂದ ಕೇವಲ ಇಬ್ಬರು (ಯರ್ರೇಗೌಡ, ರಘುತ್ತಮ ನವಲಿ) ಇಬ್ಬರು ಕ್ರಿಕೇಟಿಗರು ಮಾತ್ರ ರಾಜ್ಯ ತಂಡದಲ್ಲಿ ಭಾಗವಹಿಸಿರುವುದು ನಮ್ಮ ಕ್ರೀಡಾ ಅಭಿವೃದ್ಧಿಗೆ ಮೂಖ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಯರಾದ ವಿಶ್ವನಾಥ ಬೆಲ್ಲದ, ಸಿ.ಆರ್.ಪಿ. ಸತೀಶ, ಶಿಕ್ಷಕರಾದ ಬಸವರಾಜ, ಶಿವಯೋಗಿ ಜಡಿ, ಶೋಭಾ, ಮಂಜುಳಾ, ಗೌಸಿಯಾ ಬೇಗಂ, ರೇಣುಕಾ ದೇವಿ, ಹಾಗೂ ಯುವ ಮುಖಂಡರುಗಳಾದ ಅನ್ವರಪಾಷಾ ಕವಲೂರು, ರಫಿ ಬೆಸ್ಕಿ, ಮಹಮ್ಮದ ಅಕ್ರಮ್, ಉಪಸ್ಥಿತರಿದ್ದರು.

Please follow and like us:
error