ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ- ಅಮರೇಶ ಕರಡಿ


ಕೊಪ್ಪಳ: ಅ೧೫: ಪ್ರತಿ ವರ್ಷವು ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸೋಣ ಭಾರತ ದೇಶದ ಹೆಮ್ಮೆಯ ನಾಯಕರ ಕನಸು ನನಸು ಮಾಡೊಣ ಎಂಬ ಭಾವನೆ ಬೆಳಿಸಿಕೊಳ್ಳೊಣ ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ನಿವೆಲ್ಲರೂ ದೇಶಭಿಮಾನ ಬೆಳಿಸಿಕೊಳ್ಳಬೇಕು ಈ ನಾಡಿನ ಸತ್ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಹೇಳಿದರು. ಅವರಿಂದು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಫ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೭೧ನೇ ಸ್ವಾತಂತ್ರ್ಯ ದಿನಾಚರನೆಯ ಕಾರ್ಯಕ್ರಮ ಧ್ವಜಾರೋಹಣ ನೆರವೆರಿಸಿ ಮಾತನಾಡುತ್ತಿದ್ದರು.
೧೯೪೭ ಅಗಷ್ಟ ಮದ್ಯ ರಾತ್ರಿಯೆಂದು ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷ ಕಪಿಮುಷ್ಠಿಯಿಂದ ಭಾರತಾಂಬೆಯನ್ನು ಬಿಡಿಸಲೆಂದು ಗಾಂಧಿಜೀ, ಸರದಾರ ವಲ್ಲಭಾಯಿ ಪಟೇಲ, ಲಾಲಬಹದ್ದೂರ ಶಾಸ್ತ್ರೀ, ಗೋಖಲೆ ಎಂಬ ಇನ್ನೂ ಅನೇಕ ಸ್ವಾತಂತ್ರ್ಯ ಹೊರಟಗಾರರು ದುಡಿದು ಅಮರವಾಗಿ ತಮ್ಮ ತ್ಯಾಗ ಬಲಿದಾನಗಳ ಮೂಲಕ ವಿಶ್ವಪ್ರೇಮ ಸಾರಿದರು. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂತ ಈ ಗಳಿಗೆಯಲ್ಲಿ ಹಳಿತನಿಂದ ಹೊಸತಿಗೆ ಕಾಲಿಡುತ್ತಿದ್ದಿವೆ. ಭಾರತವು ತನ್ನನ್ನೂ ತಾನು ಮತ್ತೆ ಕಂಡುಕೊಳ್ಳತ್ತಿದೆ ಎಂಬ ಭಾವನೆಯನ್ನು ಮಹಾನ್ ದೇಶಭಕ್ತರು ಜಗತ್ತಿಗೆ ಸಾರಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರದಾನ ಕಾರ್ಯದರ್ಶಿಗಳಾದ ಆರ್.ಎಚ್. ಅತ್ತನೂರ ಹಾಗೂ ಶಾಲೆಯ ಮುಖ್ಯೋಪಾಧ್ಯಯರಾದ ರೇಣುಕಾ ಅತ್ತನೂರ ಹಾಗೂ ಶಾಲೆಯ ಶಿಕ್ಷಕರು, ಮಕ್ಕಳು, ಹಾಗೂ ಪಾಲಕರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಯೋಗ, ಹಾಗೂ ಇತರೆ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದ ನಿರೂಪನೆ ಆಶಾ ವಾಯ್, ಸ್ವಾಗತ ಜಿ.ಎಸ್ ಗೌಡರ ವಂದನಾರ್ಪಣೆ ದೈಹಿಕ ಶಿಕ್ಷಕರು ಎಮ್.ಬಿ ಪೊಲಿಸ ಪಾಟಿಲ ಮಾಡಿದರು.

 

Please follow and like us:
error