ಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ಸಭೆ

ನಿರೀಕ್ಷಿತ ಪ್ರಮಾಣದಲ್ಲಿ ಸೇರದ ಜನ … ಖಾಲಿ ಖುರ್ಚಿಗಳಿಗೆ ಭಾಷಣ.. ಸಂಘಟಕರಿಗೆ ನಿರಾಸೆ

Koppal ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಕೊಪ್ಪಳದಲ್ಲಿಂದು ಜನಾಗ್ರಹ ಸಭೆ ನಡೆಯಿತು. ಕೊಪ್ಪಳದ ಶಿವಶಾಂತವಿರ ಮಂಗಲ ಭವನ ಆವರಣದಲ್ಲಿ ಸಭೆ ನಡೆಯಿತು. ವಿಶ್ವ ಹಿಂದು ಪರಿಷತ್ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ರೂಪಿಸಲು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕೊಪ್ಪಳ ಜಿಲ್ಲೆಯ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಾಚಾರ್ಯಭೂಷಣ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು – ವಿಜಯಮಹಾಂತ ಮಹಾಸ್ವಾಮಿಗಳು ,ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ,ಮಹಾದೇವ ದೇವರು ,ಶ್ರೀ ರಾಮಕೃಷ್ಣಾಶ್ರಮದ ಚೈತನ್ಯಾನಂದ ಸ್ವಾಮಿಗಳು , ಮರುಳಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆದವಟ್ಟಿ ಹಿರೇಮಠ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿ ವಹಿಸಿದ್ದರು. ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕರು ಶಿವಾನಂದ ಬಡಿಗೇರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಹಿರೇಮಠ ಹಾಗೂ ಸಂಸದ ಕರಡಿ ಸಂಗಣ್ಣ, ಶಾಸಕರಾದ್ ಪರಣ್ಣ್ ಮುನವಳ್ಳಿ , ಹಾಲಪ್ಪ ಆಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸದರಿಗೆ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಜನಾಗ್ರಹ ಸಭೆಯಲ್ಲಿ ನಿರೀಕ್ಷಿಸದಷ್ಟು ಜನರು ಬಾರದೇ ಇದ್ದದ್ದು ಸಂಘಟಕರಿಗೆ ನಿರಾಸೆಯನ್ನುಂಟು ಮಾಡಿತು. ಖಾಲಿ ಖುರ್ಚಿಗಳಿಗೆ ಭಾಷಣ ಮಾಡುವ ಪರಿಸ್ಥಿತಿ ಅತಿಥಿಗಳದ್ದಾಗಿತ್ತು. ಹತ್ತೂವರೆಗೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ ೧೨ ಗಂಟೆಗೆ ಆರಂಭವಾಗಿತ್ತು.

Please follow and like us:
error