fbpx

ಮಂಜುನಾಥ ಗೊಂಡಬಾಳಗೆ ರಾಜ್ಯಮಟ್ಟದ ಕಲಾಲೋಕ ಪ್ರಶಸ್ತಿ


ಕೊಪ್ಪಳ, ಡಿ. ೧೨: ನಗರದ ಯುವ ಪತ್ರಕರ್ತ, ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳರ ಕಲಾ, ಸಾಹಿತ್ಯ ಮತ್ತು ಜಾನಪದ ಸಂಘಟನಾ ಕ್ಷೇತ್ರದ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಜಾನಪದ ಕಲಾಲೋಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ನಗರದ ತಾಲೂಕ ಪಂಚಾಯತ್‌ನಲ್ಲಿರುವ ಕಜಾಪ ಕಛೇರಿಯಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘಟಕ, ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಶರಣಪ್ಪ ವಡಗೇರಿ, ಶಿಕ್ಷಕ ಶ್ರೀನಿವಾಸ ಚಿತ್ರಗಾರ ಇತರರು ಸನ್ಮಾನಿಸಿದರು.

Please follow and like us:
error
error: Content is protected !!