ಮಂಗಳೂರು ಹೋರಾಟ ನಿರತರ ಮೇಲೆ ಪೊಲೀಸ್ ಗೋಲಿಬಾರ್: ಖಂಡನೆ- ಭಾರಧ್ವಾಜ್

ಗಂಗಾವತಿ: ಮಂಗಳೂರಿನಲ್ಲಿ ದಿನಾಂಕ: ೧೯.೧೨.೨೦೧೯ ರಂದು ನಡೆದ ಗೋಲಿಬಾರ್ ಪೊಲೀಸರ, ಅದರಲ್ಲಿ ಕಮೀಷನರ್ ಹರ್ಷರವರು ಮಾಡಿಸಿದ ನೇರ ಹತ್ಯೆಯಾಗಿದೆ ಎಂದು ಎ.ಐ.ಪಿ.ಎಫ್‌ನ ಹಿರಿಯ ಮುಖಂಡ ಭಾರಧ್ವಾಜ್ಖಂ ಡಿಸಿದ್ದಾರೆ.
ಅಸ್ಸಾಂ ರಾಜ್ಯದ ನಂತರ ಕರ್ನಾಟಕದಲ್ಲಿ ಎನ್.ಆರ್.ಸಿ ಹಾಗೂ ಸಿ.ಎ.ಎ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದಕ್ಷಿಣ ಭಾರತಲ್ಲಿಯೇ ಶಾಂತಿ, ಸೌಹಾರ್ಧತೆಗೆ ಹೆಸರಾದ ಕರ್ನಾಟಕವನ್ನು ಈಗ ಕಲ್ಲೋಲಿತ ಪ್ರದೇಶವನ್ನಾಗಿಸಲು ಸಂಚು ನಡೆದಿದೆ.
ಮಾನ್ಯ ಮುಖ್ಯಮಂತ್ರಿಯವರು ಹೋರಾಟ ನಿರತರ ಮೇಲೆ ಲಾಠಿಚಾರ್ಜ್ ಮಾಡಿದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ರೈಲ್ವೇ ಸಹಾಯ ಮಂತ್ರಿ ಸುರೇಶ ಅಂಗಡಿಯವರು ಧರಣಿ ನಿರತರು ಕಂಡಲ್ಲಿ ಗುಂಡು ಹಾಕಿ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ತಮ್ಮ ಜವಾಬ್ದಾರಿಯನ್ನು ಮರೆತು ಶಾಂತಿ ಕಾಪಾಡುವ ಬದಲಾಗಿ “ಪ್ರತಿಭಟನೆ ನಡೆಸುವುದಾದರೆ ಉತ್ತರ ಭಾರತಕ್ಕೆ ಹೋಗಿ” ಎಂದು ಹಗುರವಾಗಿ ಮಾತನಾಡುತ್ತಾರೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕದಲ್ಲಿ ಹೋರಾಟ ತೀವ್ರವಾಗುವ ಲಕ್ಷಣಗಳು ಕಾಣುತ್ತಿವೆ.
ಹೋರಾಟಕ್ಕೆ, ಕೆಲವು ಮನುವಾದಿಗಳು, ಸನಾತನವಾದಿಗಳು, ರಾಜ್ಯದ ಅಲ್ಪಸಂಖ್ಯಾತರನ್ನು ಭಯಭೀತರನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಬಿಜೆಪಿ ಸರ್ಕಾರಗಳಿಗೆ ಮಾರಕವಾಗುತ್ತದೆ.
ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಯುವ ನಿಟ್ಟಿನಲ್ಲಿ ಪ್ರತಿಷ್ಠೆಗೆ ಹೋಗದೆ ಧರಣಿ ನಿರತರನ್ನು ಧರಣಿ ಮಾಡಲು ಅವಕಾಶ ಮಾಡಬೇಕೆಂದು ಎ.ಐ.ಪಿ.ಎಫ್ ಸರ್ಕಾರವನ್ನು ಒತ್ತಾಯಿಸುತ್ತದೆ.

Please follow and like us:
error