ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ರೈತ ಸಂಘಗಳ ಆಕ್ರೋಶ


ಕೊಪ್ಪಳ ಜೂನ್.೧೯: ಭೂ ಸುಧಾರಣೆ ಕಲಂ ೭೯ ಎ ಮತ್ತು ಬಿ ಯನ್ನು ತೆಗೆದು ಹಾಕುವುದರೊಂದಿಗೆ ಕಾಯ್ದೆಯ ತಿದ್ದುಪಡಿ ಮಾಡಿರುವ ಸರಕಾರದ ವಿರುದ್ಧ ಹೋರಾಟ ರೂಪಿಸಲು ಇಂದು ರೈತಪರ ಸಂಘಟನೆಗಳ ಸಭೆ ಭಾಗ್ಯನಗರದಲ್ಲಿ ಜರುಗಿತು. ಸಭೆಯಲ್ಲಿ ಎಲ್ಲಾ ರೈತ ಸಂಘಗಳ ಮುಖಂಡರು ಭಾಗವಹಿಸಿದ್ದರು. ಈ ಸಭೆಯಲ್ಲಿ ಎ.ಪಿ.ಎಂ.ಸಿ ತಿದ್ದುಪಡಿಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ತಿದ್ದುಪಡಿ ಕುರಿತು ಚರ್ಚೆ ನಡೆಸಿ ಸಭೆ ತೀವ್ರವಾದ ವಿರೋಧ ವ್ಯಕ್ತಪಡಿಸಿತು.
ಸಭೆಯಲ್ಲಿ ರೈತ ಸಂಘಟನೆಗಳ ಸಮನ್ವಯ ಸಮಿತಿಯನ್ನು ರಚಿಸಲಾಯ್ತು. ಸಮಿತಿಯ ಪ್ರಧಾನ ಸಂಚಾಲಕರಾಗಿ ವಿಠ್ಠಪ್ಪ ಗೋರಂಟ್ಲಿ ಹಾಗೂ ಅಲ್ಲಮಪ್ರಭು ಬೆಟ್ಟದೂರು ಅವರನ್ನು ಆಯ್ಕೆ ಮಾಡಲಾಯ್ತು. ಸಂಚಾಲಕರಾಗಿ ಜೆ.ಭಾರದ್ವಾಜ, ನಜೀರಸಾಬ ಮೂಲಿಮನಿ, ಡಿ.ಎಚ್.ಪೂಜಾರ್, ಮದ್ದಾನಯ್ಯ ಹಿರೇಮಠ, ಶಿವಣ್ಣ ಭೀಮನೂರ, ಮರಿಯಪ್ಪ ಸಾಲೋಣಿ, ಫಕೀರರೆಡ್ಡಿ ಹ್ಯಾಟಿ, ಭೀಮಸೇನ ಕಲಕೇರಿ, ತಿಪ್ಪಯ್ಯ ಹಿರೇಮಠ, ಗಣೇಶರೆಡ್ಡಿ ಕನಕಗಿರಿ, ಸುಂದರರಾಜ ಕಾರಟಗಿ, ಶರಣಯ್ಯ ಮುಳ್ಳೂರ ಮಠ, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಖಾಸೀಂ ಸರದಾರ, ಬಾಳಪ್ಪ ಕೊಡದಾಳ, ಮಹಾಂತೇಶ ಕೊತಬಾಳ, ಹನುಮಂತಪ್ಪ ಎಳೆನೀರು, ಮಮತಾಜಬೇಗಂ, ಪುಷ್ಪಾಮೇಸ್ತಿ ಅವರನ್ನು ಆಯ್ಕೆ ಮಾಡಲಾಯ್ತು. ದಿ:೨೪-೦೬-೨೦೨೦ರಂದು ಸಂಚಾಲಕ ಸಮಿತಿ ಪುನಃ ಸಭೆ ಸೇರಿ ಮುಂದಿನ ಹೋರಾಟದ ರೂಪರೇಷೆ ನಿರ್ದರಿಸಲಿದೆ.
ರೈತ ಸಮನ್ವಯ ಸಮಿತಿಯ ಪ್ರಧಾನ ಸಂಚಾಲಕರು  ತಿಳಿಸಿದ್ದಾರೆ.

Please follow and like us:
error