ಭೂಮಿ ಕರಾಟೆ ಫೌಂಡೇಶನ್‍ಗೆ 2 ಚಿನ್ನ 01 ಬೆಳ್ಳಿ

ಕೊಪ್ಪಳ : ನವ್ಹಂಬರ ರಂದು ಧಾವಣಗೇರಿಯಲ್ಲಿ ಕರ್ನಾಟಕ ವಾಡೋಕಾಯ್ ಕರಾಟೆ ಡು ಅಸೋಸಿಯೇಶನ್ ರವರು ನಡೆಸಿದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೇಯಲ್ಲಿ ನಗರದ ಭೂಮಿ ಕರಾಟೆ ಫೌಂಡೇಶನ್ ವಿದ್ಯಾರ್ಥಿಗಳಾದ ಕತಾದ ವಿಭಾಗದಲ್ಲಿ ತಿರುಮಲೇಶ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಕುಮಿತೆ ವಿಭಾಗದಲ್ಲಿ ಮಂಜುನಾಥ ಕಲ್ಲನವರ ಪ್ರಥಮ ಸ್ಥಾನ ಚಿನ್ನದ ಪದಕ ಪಡೆದರು. ಕುಮಿತೆ ವಿಭಾಗದಲ್ಲಿ ಮಾರುತಿ ಇಂದರಗಿ ಭಾಗವಹಿಸಿ ಬೆಳ್ಳಿ ಪದಕ ಜೊತೆಗೆ ಪ್ರಮಾಣ ಪತ್ರವನ್ನು ಪಡೆದುಕೊಂಡರು ಇವರ ಜೊತೆ ಸಂಸ್ಥೆಯ ಅಧ್ಯಕ್ಷ ಮೌನೇಶ ಎಸ್. ವಡ್ಡಟ್ಟಿ, ತರಬೇತಿದಾರ ದೇವಪ್ಪ ಕಲ್ಲನವರ, ವಿಠ್ಠಲ್ ಹೆಚ್, ಸೋಮಲಿಂಗ್, ರಾಕೇಶ ಕುಂಬಾರ ಇದ್ದರು.

Please follow and like us:
error