fbpx

ಭಾ.ಜ.ಪ ನಗರ ಮಹಿಳಾ ಮೊರ್ಚಾ ಕಾರ್ಯಕಾರಣಿ ಯಶಸ್ವಿ

 ನಗರದ ಪಾರ್ಥ ಹೋಟೆಲ್ ನಲ್ಲಿ : ೩/೫/೧೭  ಮದ್ಯಾಹ್ನ ೧ ಗಂಟೆಗೆ ನಗರ ಮಹಿಳಾ ಮೋರ್ಚಾ  

ಕಾರ್ಯಕಾರಣಿಯನ್ನು ದೀಪ ಬೆಳಗುವುದರ ಮುಖಾಂತರ ಭಾ.ಜ.ಪ ರಾಷ್ಟ್ರೀಯ ಪರಿಷತ್ತು ಸದಸ್ಯರಾದ ಸಿ.ವ್ಹಿ. ಚಂದ್ರುಶೇಖರ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರರಕ್ಕೆ ಜನಪರ ಕಾಳಜಿಯಿಲ್ಲ. ಹಿಂದನ ಭಾ.ಜ.ಪ ನೆತೃತ್ವದ ಸರ್ಕಾರ ಜಾರಿಗೊಳಿಸಿದ ಯೋಜನೆಗಳಾದ ರೈತರ ಸಾಲ ಮನ್ನಾ, ಸಂಧ್ಯಾ ಸುರಕ್ಷಾ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಎಸ್.ಸಿ & ಎಸ್.ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ನಗರೊತ್ಥಾನ ಯೋಜನೆ  ಮತ್ತು ಕೇಂದ್ರ ಸರ್ಕಾರ ಯಶಸ್ವಿಯಾಗಿ ಮೂರು ವರ್ಷ ಪೊರೈಸಿ ಅನುಷ್ಠನಗೊಳಿಸಿದ ಯೋಜನೆಗಳಾದ ಸುರಕ್ಷಾಭೀಮಾ ಯೋಜನೆ, ಅಟಲ್ ಪೆಂಷನ್ ಯೋಜನೆ, ಬೇಟಿ ಬಚಾವೋ ಬೇಟಿ ಫಡಾವೋ, ಜನೌಷಧಿ ಯೋಜನೆ, ಜೀವನಜ್ಯೋತಿ ಭೀಮಾ ಯೋಜನೆ, ಕೌಶಲ್ಯ ವಿಕಾಸ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ಮೇಕ್ ಇನ್ ಇಂಡಿಯಾ, ಮುದ್ರಾ ಬ್ಯಾಂಕ್ ಯೋಜನೆ, ಇನ್ನೂ ಅನೇಕ ಜನಪ್ರಿಯ ಯೋಜನೆಗಳು ಈ ದೇಶದ ವಾಸಿಗಳ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಲಾಗಿದೆ. ಬರುವ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ ಭಾ.ಜ.ಪ ವನ್ನು ಅಧಿಕಾರಕ್ಕೆ ತಂದು ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡುವ ಮಹತ್ತರದ ಜವಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳ ಮೇಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋರ್ಚಾದ ಜಿಲ್ಲಾಧ್ಯಕ್ಷಿಣಿಯಾದ ಶ್ರೀಮತಿ ಮಧುರಾ ಕರಣಂ ವಹಿಸಿ ಮಾತನಾಡಿ ಮಹಿಳಾ ಸಂಘಟನೆಯು ಪಕ್ಷದಲ್ಲಿ ಅತಿ ಪ್ರಮುಖವಾಗಿದ್ದು , ಮುಂಬರುವ ವಿಧಾನಸಭಾ ಚುನಾವಣೆಯ ಹಿತದೃಷ್ಟಿಯಿಂದ ಪ್ರತಿ ಬೂತ್ ಮಟ್ಟದಲ್ಲಿ ೫ ಜನ ಮಹಿಳಾ ಸಂಘಟಕರನ್ನು ನೇಮಿಸುವ ಕಾರ್ಯ ನಡೆದಿದೆ. ಮತ್ತು ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳಿಗಾಗಿ ಜಾರಿಮಾಡಿರುವ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಹಾಗೂ ರಾಜ್ಯ ಸರ್ಕಾರದ ವೈಪಲ್ಯವನ್ನು ಜನರ ಮುಂದಿಡುವ ಕೆಲಸವನ್ನು ಮಹಿಳಾ ಮೊರ್ಚಾ ಮಾಡಲಿದೆ ಎಂದರು. ಮುಖ್ಯ ಅತಿಥಿಗಳಾಗಿ ನಗರ ಮಹಿಳಾ ಮೊರ್ಚಾದ ಅಧ್ಯಕ್ಷಿಣಿಯಾದ ವಾಣಿಶ್ರೀ ಮಠದ, ನಗರಪ್ರಭಾರಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ರಾಜು ಬಾಕಳೆ ಮೋರ್ಚಾದ ವರದಿಯನ್ನು ವಾಚಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಚಂದ್ರುಶೇಖರ ಕವಲೂರು ಮಾತನಾಡಿದರು. ಮಹಿಳಾ ಮೊರ್ಚಾದ ಪ್ರಮುಖರಾದ ಹೇಮಲತಾ ನಾಯಕ, ಶೋಭಾ ನಗರಿ, ಶಾಮಲಾ ಕೋನಾಪೂರ, ವೀಣಾ ಬನ್ನಿಗೊಳ, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ ಹಕ್ಕಾಪಕ್ಕಿ, ಪ್ರ.ಕಾ ದೇವರಾಜ ಹಾಲಸಮುದ್ರ, ಉಮೇಶ ಕುರುಡೇಕರ್, ಇನ್ನೂ ಅನೇಕ ಮಹಿಳಾ ಮೋರ್ಚಾದ ಕಾರ್ಯಕರ್ತರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!