You are here
Home > Koppal News > ಭಾಷಣ ಸ್ಪರ್ಧೆ : ಸರಸ್ವತಿ ವಿದ್ಯಾಮಂದಿರ ಶಾಲೆಗೆ ಪ್ರಥಮ,ದ್ವಿತೀಯ ಬಹುಮಾನ

ಭಾಷಣ ಸ್ಪರ್ಧೆ : ಸರಸ್ವತಿ ವಿದ್ಯಾಮಂದಿರ ಶಾಲೆಗೆ ಪ್ರಥಮ,ದ್ವಿತೀಯ ಬಹುಮಾನ


ಕೊಪ್ಪಳ : ಜಿಲ್ಲಾ ಅಂಚೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಬಹುಮಾನ ದೊರೆತಿದೆ. ಒಂದು ಹೊಸ ಲಂಚ ಮುಕ್ತ ಭಾರತ ನಿರ್ಮಾಣ ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ನಗರದ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸರಸ್ವತಿ ವಿದ್ಯಾಮಂದಿರದ ಕು.ಭೂಮಿಕಾ ಎನ್.ಬಸಟ್ಟೇರ್ ಪ್ರಥಮ ಬಹುಮಾನ ಹಾಗೂ ಬಸವರಡ್ಡಿ ರಾಮರಡ್ಡಿ ರೊಡ್ಡರ ದ್ವೀತಿಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಅಂಚೆ ಕಚೇರಿಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ಅಂಚೆ ಇಲಾಖೆಯ ಬಿ.ವಿ.ಅಂಗಡಿ, ಹನುಮಂತಪ್ಪ ಅಂಡಗಿ ಸೇರಿದಂತೆ ಇತರರು ಭಾಗವಹಿಸಿದ್ದರು. ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿಗಳು ಹಾಗೂ ಪೋಷಕರು ಅಭಿನಂದಿಸಿದ್ಧಾರೆ.

Top