ಭಾವನೆಗಳಲ್ಲಿ ಕವಿತೆ ಜೀವಂತವಾಗಿದೆ- ಅಲ್ಲಮಪ್ರಭು ಬೆಟ್ಟದೂರ್

ಕೊಪ್ಪಳ-18,ಕನ್ನಡದ ಜೋತೆ ಇಂಗ್ಲೀಷ್ ಕಾವ್ಯದ ವ್ಯಾಮೋಹ ಆದಿ ಕಾಲದಿಂದಲೂ ಇದೆ. ಸಮಾಜದಲ್ಲಿ ಮಾನವನ ಕಷ್ಟ- ಸಂತೋಷದ ಭಾವನೆಗಳನ್ನು ಕಾವ್ಯವು ಮಾನವತವಾದವಾಗಿ ನಿರೂಪಿಸುವಲ್ಲಿ ಸಹಾಯವಾಗಿದೆ. ಕುವೆಂಪು ಅವರ ದೃಷ್ಟಿ ಕೋನದಲ್ಲಿ ಆಂಗ್ಲ ಭಾಷೆಗಿಂತ ಮಾತೃ ಭಾಷೆ ಕನ್ನಡದಲ್ಲಿ ಕಾವ್ಯಗಳಿಗೆ ಹೆಚ್ಚು ಮಹತ್ವ ಇದೆ ಎಂದು ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರು ಶ್ರೀ ಅಲ್ಲಮಪ್ರಭು ಬೆಟ್ಟದೂರ್ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಮತ್ತು ಕವಿ ಗೋಷ್ಠಿ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಶ್ರೀ ಬಸಮ್ಮ ಕಾತರಕಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಲೇಜು ಶಿಕ್ಷಣವೆಂಬುದು ಒಂದು ಅದ್ಭುತವಾದ ನೆನಪಿನ ಹಂದರವಿದಂತೆ ತಮ್ಮ ಜೀವನದ ಕಹಿ-ಸಂತೊಷದ ಘಟನೆಯನ್ನು ಹೇಳುತ್ತಾ ವಿಧ್ಯಾರ್ಥಿಯ ಜೀವನದಲ್ಲಿ ಕಾವ್ಯವನ್ನು ಬಲ್ಲವನು ಭವಿಷತ್ತಿನಲ್ಲಿ ಸಾಧನೆಗೈಯಲು ಸಹಾಯವಾಗುವುದು ಮತ್ತು ರಸಿಕತೆಯು ಇಡೀ ಜೀವನ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತರಲಕಟ್ಟಿಯ ಮುಖ್ಯೋಪಾಧ್ಯಯ ಶರಣು ಕುರ್ನಾಲ್ ಮಾತನಾಡಿ ದೇಶದ ಮುಂದಿನ ಭಾವಿ ಪ್ರಜೆಗಳು ವಿದ್ಯಾರ್ಥಿಯ ಜೀವನದೊಂದಿಗೆ ತಮ್ಮ ಮುಂದಿನ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಹೊಣೆ ಅವರ ಮೇಲೆ ಇರುತ್ತದೆ. ಶಿಕ್ಷರಾಗಿ ವಿದ್ಯಾರ್ಥಿಯ ಭವಿಷ್ಯತ್ತಿಗೆ ಮಾರ್ಗಸೂಚಿಯಾಗಿರುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಅಡ್ಮೀಸ್ಟೇಟರ್ ವೆಂಕಟರೆಡ್ಡಿ ಕೊಳ್ಳಿ ಮಾತನಾಡಿ ಸಾಂಸ್ಕøತಿಕ ಕಾರ್ಯಕ್ರಮದ ಜೋತೆಗೆ ಶೈಕ್ಷಣಿಕ ಕಾರ್ಯಕ್ರಮವನ್ನು ಸಂಸ್ಥೆಯು ಹಮ್ಮಿಕೊಳ್ಳಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು, ಸಂಸ್ಥೆಗೆ ಶೇಖಡವಾರು ಹೆಚ್ಚು ಫಲಿತಾಂಶವನ್ನು ಪಡೆದು ಸಂಸ್ಥಗೆ ಕೀರ್ತಿತರುವರೆಂದು ಈ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೊನೆಯದಾಗಿ ಕುಮಾರಿ. ಸಾನಿಯಾ ವಂದಿಸಿದಳು, ಕುಮಾರಿ ನೀರಜಾ ನಿರೂಪಿಸಿದಳು. ಕುಮಾರಿ ಸಂಗೀತ ಸ್ವಾಗತಿಸಿದಳು ಮತ್ತು ಉಪನ್ಯಾಸಕರಾದ ಮಂಜುನಾಥ್, ಶ್ರೀಕಾಂತ್,ನಿರುಪಾದಿ, ಶಿವಯ್ಯ, ಶ್ರೀಮತಿ ಗೀತಾ, ಕುಮಾರಿ ಸಲ್ಮಾ, ಸಿದ್ದು ಪಾಟೀಲ್, ನಾಗರಾಜ, ಸಂಪತ್ ಆಕಳವಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Please follow and like us:
error