ಭಾರತ್ ಬಂದ್ : ಎಡಪಕ್ಷ ,ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಕೊಪ್ಪಳ : ತೈಲ ಬೆಲೆ ಏರಿಕೆ ಖಂಡಿಸಿ ಇಂದು ಭಾರತ್ ಬಂದ್ ಗೆ ಕೊಪ್ಪಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.ಕೆಎಸ್ ಅರ್ ಟಿಸಿ, ಎಡಪಕ್ಷ ಹಾಗು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಮಾಡಿದರು.ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಬಸ್ ಓಡಾಟ ಸ್ಥಗಿತಗೊಳಿಸಿ ಕೆಎಸ್ ಆರ್ ಟಿಸಿ ಕಾರ್ಮಿಕರ ಸಂಘಟನೆ ಬೆಂಬಲಿಸಿತು.ಕೇಂದ್ರ ಸರ್ಕಾರ ಹಾಗು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಲಾಯಿತು. ಆಟೋ ಮಾಲೀಕರು, ಚಾಲಕರಿಂದ ಕೂಡ ಬಂದ್ ಗೆ ಬೆಂಬಲ.

ಕೇವಲ ಜವಹಾರ ರಸ್ತೆಯಲ್ಲಿ ಮಾತ್ರ ಅಂಗಡಿ ಮಂಗಟ್ಟುಗಳನ್ನು ಬಂದ ಮಾಡಿ ಬಂದ್ ಗೆ ಬೆಂಬಲ ಸಿಕ್ಕಿತು. ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.