ಭಾರತೀಯ ಸೇನೆಗೆ ಸೇರಬಯಸುವ ಅಲ್ಪಸಂಖ್ಯಾತರಿಗೆ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ : ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಭಾರತೀಯ ಸೇನೆಗೆ ಸೇರಲು ಆಸಕ್ತಿಯುಳ್ಳ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗೆ ವಸತಿ ಸಹಿತ ಉಚಿತ ತರಬೇತಿ ನೀಡಲಾಗುತ್ತಿದ್ದು, ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಭಾರತೀಯ ಭೂ ಸೇನೆ, ನೌಕಾದಳ, ವಾಯುದಳ ಮತ್ತು ಇತರೆ ರಕ್ಷಣಾ ದಳಗಳಿಗೆ ಸೇರಲು ಆಸಕ್ತಿಯುಳ್ಳ, ಅಲ್ಪಸಂಖ್ಯಾತರ ಸಮುದಾಯಗಳಿಗೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಜೋತೆಗೆ 45 ದಿನಗಳ ಉಚಿತ ಪೂರ್ವಭಾವಿ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ಸಂಸ್ಥೆಯ ಪ್ರತಿಯೊಬ್ಬ ಅಭ್ಯರ್ಥಿಗೆ 45 ದಿನಗಳ ಅವಧಿಗೆ ಅಂದರೆ ತರಬೇತಿ ಅವಧಿಯಲ್ಲಿ ವಿಮೆ ಸೌಲಭ್ಯವಿರುವುದು. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಸ್ಟೈಪೆಂಡ್ ನೀಡುವುದಿಲ್ಲ. ತರಬೇತಿಯನ್ನು ಪ್ರತಿ ವಿದ್ಯಾರ್ಥಿಗೆ ಒಮ್ಮೆ ಮಾತ್ರ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಆನ್‍ಲೈನ್‍ನಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು. ಆನ್ ಲೈನ್ ಅರ್ಜಿ ಫಾರಂನ ಪ್ರಿಂಟ್ ಔಟ್‍ವನ್ನು ಅಗತ್ಯಗಳಾದ ಅಭ್ಯರ್ಥಿಯ ಆಧಾರ ಕಾರ್ಡ, ಎಸ್.ಎಸ್.ಎಲ್.ಸಿ, ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ. (ಇದ್ದಲ್ಲಿ), ಡೈವಿಂಗ್ ಲೈಸೆನ್ಸ್/ ವೋಟರ್ ಐಡಿ/ ರೇಷನ್ ಕಾರ್ಡ/ಪಾನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎರಡು ಭಾವ ಚಿತ್ರ, ವಾಸಸ್ಥಳ ಪ್ರಮಾಣ ಪತ್ರ (ತಹಶೀಲ್ದಾರ ಕಛೇರಿಯಿಂದ ಪಡೆದ) ಎಲ್ಲಾ ಧಾಖಲಾತಿಗಳು ದೃಢೀಕೃತವಾಗಿರಬೇಕು. ಈ ದಾಖಲೆಗಳ ಜೊತೆಗೆ ಸಂಬಂಧಪಟ್ಟ ತಾಲೂಕು (ವಾಸವಿರುವ) ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಸಲ್ಲಿಸಬೇಕು. ಆನ್‍ಲೈನ್‍ನಲ್ಲಿ ನೋಂದಯಿಸಲು ಅಪ್ಲಿಕೇಶನ್ ಲಿಂಕ್ ವೆಬ್‍ಸೈಟ್ hಣಣಠಿ://goಞಜom.ಞಚಿಡಿ.ಟಿiಛಿ.iಟಿ ನಲ್ಲಿ ಆಪ್ಲಿಕೇಶನ್ ದೊರೆಯುವುದು. ಅರ್ಜಿ ಸಲ್ಲಿಸಲು ಡಿಸೆಂಬರ್. 15 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಇಲ್ಲಿಗೆ ಅಥವಾ ದೂ.ಸಂಖ್ಯೆ 08539-225070 ಕ್ಕೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ವಿವರ ಕಛೇರಿಯ ವೈಬ್‍ಸೈಟ್ ತಿತಿತಿ.ಜom.ಞಚಿಡಿಟಿಚಿಣಚಿಞಚಿ.gov.iಟಿ/ಞoಠಿಠಿಚಿಟ ನಲ್ಲಿಯೂ ಸಹ ಮಾಹಿತಿ ಲಭ್ಯವಿರುತ್ತದೆ ಎಂದು ಇಲಾಖಾ ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಜಿಲ್ಲಾ ಅಧಿಕಾರಿ ಮಹಿಮೂದ್ ತಿಳಿಸಿದ್ದಾರೆ.