You are here
Home > Koppal News > ಭಾರತದ ದೇಶದ ಸ್ವತಂತ್ರ ತ್ಯಾಗಬಲಿದಾನದ ಸಂಕೇತ – ಕೆ.ಬಸವರಾಜ ಹಿಟ್ನಾಳ.

ಭಾರತದ ದೇಶದ ಸ್ವತಂತ್ರ ತ್ಯಾಗಬಲಿದಾನದ ಸಂಕೇತ – ಕೆ.ಬಸವರಾಜ ಹಿಟ್ನಾಳ.

ಕೊಪ್ಪಳ : ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ 72ನೇ ಸ್ವತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ ಅವರು ಬ್ರಿಟಿಸರ ವಿರುದ್ಧ ದೇಶದ ಸ್ವತಂತ್ರಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಸ್ವತಂತ್ರ ಸೇನಾನಿಗಳು ಭಾರತ ದೇಶವನ್ನು 1947 ಆಗಸ್ಟ್ 15 ರಂದು ನಮ್ಮ ದೇಶವನ್ನು ಸ್ವತಂತ್ರಗೊಳಿಸಿದರು. ಅವರ ಈ ತ್ಯಾಗದಿಂದ ನಾವು ಇಂದು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವನ್ನು ಹೊಂದಿದ್ದೇವೆ. ದೇಶದ ಸ್ವತಂತ್ರಕ್ಕೆ ಧಕ್ಕೆ ಬರದಹಾಗೆ ಅದನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಸ್ವತಂತ್ರ ಸೇನಾನಿಗಳ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ಭಾರತಿಯನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಗೌರವ ಹಾಗೂ ಹೆಮ್ಮೆಗಾಗಿ ಪ್ರತಿಯೊಬ್ಬರು ತಮ್ಮ ಪ್ರಾಣ ತ್ಯಾಗಕ್ಕೆ ಸಿದ್ದರಾಗಿರಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಎ.ಪಿ.ಎಂ.ಸಿ. ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ತಾ.ಪಂ.ಸದಸ್ಯ ಡಾ. ಸಿದ್ದಲಿಂಗಸ್ವಾಮಿ ಇನಾಮದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ ಭೂಮರಡ್ಡಿ, ಕಾಟನ್ ಪಾಷಾ, ಮುಖಂಡರುಗಳಾದ ಶಾಂತಣ್ಣ ಮುದಗಲ್, ಹನುಮರಡ್ಡಿ ಹಂಗನಕಟ್ಟಿ, ಬಾಷುಸಾಬ ಖತೀಬ್, ಅಪ್ಸರ್‍ಸಾಬ, ಸಿದ್ಲಿಂಗಸ್ವಾಮಿ ಹಿರೇಮಠ, ಶಕುಂತಲಾ ಹುಡೇಜಾಲಿ, ಇಂದಿರಾ ಭಾವಿಕಟ್ಟಿ, ರಾಮಣ್ಣ ಕಲ್ಲಣ್ಣವರ, ಮಾನ್ವಿಪಾಷಾ, ಗವಿಸಿದ್ದಪ್ಪ ಮುದಗಲ್, ಅನುಸೂಯಮ್ಮ ವಾಲ್ಮೀಕಿ, ನವೋದಯ ವಿರುಪಣ್ಣ, ನಾಗರಾಜ ಬಳ್ಳಾರಿ, ಪರಶುರಾಮ ಭೈರಾಪೂರ, ಅಜ್ಜಪ್ಪ ಸ್ವಾಮಿ, ಹುಸೇನಪೀರಾ ಮುಜಾವರ, ಬಸವರಾಜ ಶಹಾಪೂರ, ಶಿವಾನಂದ ಹೊದ್ಲೂರ, ಮುನೀರ ಸಿದ್ದೀಕಿ, ಶಂಕರಗೌಡ್ರ ಹಿರೇಗೌಡ್ರ, ವಾಹಿದ್ ಸೋಂಪೂರ, ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು

Top