You are here
Home > Koppal News > ಭಾಗ್ಯನಗರ ಸರಕಾರಿ ಪ್ರೌಢಶಾಲೆ ವಿಧ್ಯಾರ್ಥಿಗಳಿಗೆ ಕರಾಟೆ ಕೌಶಲ್ಯ ತರಬೇತಿ

ಭಾಗ್ಯನಗರ ಸರಕಾರಿ ಪ್ರೌಢಶಾಲೆ ವಿಧ್ಯಾರ್ಥಿಗಳಿಗೆ ಕರಾಟೆ ಕೌಶಲ್ಯ ತರಬೇತಿ

ಭಾಗ್ಯನಗರದ ಸರಕಾರಿ ಪ್ರೌಢಶಾಲೆ ೯ನೇ ತರಗತಿ ವಿಧ್ಯಾರ್ಥಿಗಳಿಗೆ ಆರ್.ಎಂ.ಎಸ್.ಎ. ಯೋಜನಾ ಅಡಿಯಲ್ಲಿ ಸ್ವರಕ್ಷಣಾ ಕೌಶಲ್ಯ ಕಲೆಯಾದ ಕರಾಟೆ ತರಬೇತಿಗೆ ಚಾಲನೆ ನೀಡಲಾಯಿತು.

ವಿಧ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದ ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆ ಅವಶ್ಯಕತೆ ಇದ್ದು, ತಮ್ಮನ್ನು ತಾವು ಪ್ರತಿಕೂಲ ಸನ್ನಿವೇಶಗಳಲ್ಲಿ ರಕ್ಷಿಸಿಕೊಳ್ಳುವಷ್ಟು ಸಮರ್ಥರನ್ನಾಗಿ ಮಾಡುವುದು ಅವಶವಾಗಿದೆ ಎಂದರು. ಕರಾಟೆ ಕಲೆ ತನ್ನದೇ ಆದ ವಿಭಿನ್ನ ತಂತ್ರಗಳನ್ನು ಹೊಂದಿದ್ದು, ಶ್ರದ್ಧೆ, ನಿರಂತರ ಪರಿಶ್ರಮದಿಂದ ಕರಾಟೆ ಅಭ್ಯಾಸಮಾಡಲು ಅಂತರ್ಶಕ್ತಿ ಸಾಮರ್ಥ್ಯವನ್ನು ಜಾಗೃತಗೊಳಿಸಿ ವಿಶೇಷ ಶಕ್ತಿ ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ದೈಹಿಕ ಶಿಕ್ಷಕ ಎಂ.ಎಂ.ಮುಜಗೊಂಡ ಮಾತನಾಡಿ ಕರಾಟೆ ಕಲೆಯಲ್ಲಿ ಕಿಕ್ ಪಂಚ್, ಬ್ಲಾಕ್ ಮಾಡುವ ಮೂಲಕ ಮತ್ತು ಎದುರಾಳಿಗೆ ಪ್ರತಿರೋಧ, ಪ್ರತಿದಾಳಿ ನಡೆಸುವ ಮೂಲಕ ಅಪಾಯದ ಪರಸ್ಥಿತಿಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಂಡು ಪಾರಗಬಹುದು, ಕರಾಟೆ ಕಲಿಯುವುದರಿಂದ ದೈಹಿಕವಾಗಿ,ಮಾನಸಿಕವಾಗಿ ಸಧೃಢರಾಗುವುದಲ್ಲದೇ ಏಕಾಗ್ರತೆಗೂ ಸಹಕಾರಿಯಾಗಲಿದೆ ಎಂದರು. ಮತ್ತು ಅಂತರ್‌ರಾಷ್ಟ್ರೀಯ ಕರಾಟೆ ಪಟುವಾದ ಶ್ರೀನಿವಾಸ ಪಂಡಿತ ಅವರ ಮಾರ್ಗದರ್ಶನದಲ್ಲಿ ವಿಧ್ಯಾರ್ಥಿಗಳು ಕರಾಟೆ ತರಬೇತಿ ಪಡೆಯುತ್ತೀರುವುದು ಸಂತೋಷದ ವಿಷಯ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕರಾಟೆ ಎಂದರೆ ಮುಕ್ತ ಹಸ್ತದ ಒಂದು ಯದ್ಧ ಕಲೆ. ಕರಾಟೆ ಈಗ ಸ್ಪೋರ್ಟ್ಸ್ ಕರಾಟೆ ಆಗಿದ್ದು, ೨೦೨೦ ರಲ್ಲಿ ನಡೆಯುವ ಓಲಿಂಪಿಕ್ ಗೇಮ್ ನಲ್ಲಿ ಕರಾಟೆಯೂ ಸೇರ್ಪಡೆಯಾಗುತ್ತೀರುವುದು ವಿಶೇಷವಾಗಿದೆ ಎಂದು ಕರಾಟೆ ಕೋಚ್ ಶ್ರೀನಿವಾಸ ಪಂಡಿತ ಹೇಳಿದರು. ಕರಾಟೆ ಒಂದು ಶಿಸ್ತಿನ ಕಲೆಯಾಗಿದ್ದು, ಕರಾಟೆಯಲ್ಲಿ ವೇಗ, ಉಸಿರಿನ ನಿಯಂತ್ರಣ, ವರಸೆ, ಸಮಯ ಪ್ರಙ , ಕ್ರಮಬದ್ಧವಾಗಿ ತರಬೇತಿ, ಹಾಗೂ ವ್ಯಾಯಮ ಮಾಡುವುದರಿಂದ ವ್ಯಕ್ತಿಯ ಮನೋಧೈರ್ಯ, ಮಾನಸಿಕ ಶಕ್ತಿ ಮತ್ತು ಸರ್ವತೋಮುಖ ಬೆಳವಣಿಗೆಗೆ ಕರಾಟೆ ಕಲೆ ಉಪಯುಕ್ತವಾಗಲಿದೆ ಎಂದರು.

Top