ಭಾಗ್ಯನಗರ ಮೇಲ್ಸೆತುವೆ 368 ಮೀ. ಇಳಿಮುಖವಾಗಿ ನಿರ್ಮಿಸಲು, ಜಮೀನು ಸ್ವಾಧೀನಕ್ಕೆ ಆದೇಶ

ಭಾಗ್ಯನಗರ ರೈಲ್ವೆ ಗೇಟ್-೬೨ ಮೇಲ್ಸುತುವೆ ಕಾಮಗಾರಿ ಸಂಬಂಧಿಸಿದಂತೆ ಮಾಧ್ಯಮ ವರದಿಗಳಿಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸ್ಥಳ ಪರಿಶೀಲನೆ ಮಾಡಿತ್ತು. ಅಲ್ಲದೇ ರೈಲ್ವೆ ಇಲಾಖೆಯು ಫೆಬ್ರುವರಿ ತಿಂಗಳಲ್ಲಿ ಕಾಮಗಾರಿಗಾಗಿ ಪೂರ್ಣ ಜಮೀನು ನೀಡಲು ಆಗ್ರಹ ಮಾಡಿತ್ತು. ಈ ಹಿಂದೆ ೩೪೦ ಮೀಟರ‍್ ವರೆಗೆ ಜಮೀನನ್ನು ರೈಲ್ವೆ ಇಲಾಖೆಗೆ ಜಿಲ್ಲಾಡಳಿತ ಹಸ್ತಾಂತರ ಮಾಡಿತ್ತು. ಇದರಂತೆ ಕಾಮಗಾರಿಯೂ ನಡೆದಿತ್ತು. ಈ ಕಾಮಗಾರಿ ಅವೈಜ್ಞಾನಿಕವಾಗಿದೆ ಏರು ಮುಖವಾಗುತ್ತೆ ಇದರಿಂದ ಜನರಿಗೆ ತೊಂದರೆಯಾಗುತ್ತೆ ಎಂದು ಸ್ಥಳಿಯರು ಆತಂಕ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದರು.
  ಭಾಗ್ಯನಗರದ ಉತ್ತರ ದಿಕ್ಕಿನಲ್ಲಿ ರಸ್ತೆ ಕಾಮಗಾರಿ ೩೭೫ ಮೀ ಆಗಬೇಕಾದ ರಸ್ತೆಯನ್ನು ೩೪೦ ಕ್ಕೆ ಇಳಿಸಲಾಗಿತ್ತು. ರಸ್ತೆ ಏರು ಮುಖವಾಗುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತೆ ಎಂದು ಭಾಗ್ಯನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಪ್ರಭಾವಿಗಳ  ಒತ್ತಡಕ್ಕೆ ಮಣಿದು ರೈಲ್ವೆ ಗೇಟ್-೬೨ ಮೇಲ್ಸುತುವೆ ಕಾಮಗಾರಿಯನ್ನು ೩೪೦ ಮೀ. ಗೆ ಇಳಿಸಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳು ಹಾಗು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದ್ದರು. ಪರಿಶೀಲನೆ ನಂತರ ನಕ್ಷೆಯ ಪ್ರಕಾರ ಕಾಮಗಾರಿ ಮುಂದುವರಿಸಲು, ಜಮೀನು ವಶಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಎಂ ಕನಗವಲ್ಲಿ ಆದೇಶ ಮಾಡಿದ್ದಾರೆ. ೩೪೦ ಮೀ. ಮೇಲ್ಸುತುವೆ ಕಾಮಗಾರಿಯನ್ನು ೩೬೮ ಮೀ ಇಳಿಮುಖವಾಗಿ ನಿರ್ಮಿಸುವಂತೆ ಆದೇಶ. ಮಾಡಿದ್ದಾರೆ ಇದಕ್ಕೆ ಭಾಗ್ಯನಗರದ ನಿವಾಸಿಗಳು ಸಂತಸ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. Thanku DC Madum M. Kanagavalli
Please follow and like us:
error

Related posts