ಭಾಗ್ಯನಗರ ಬಂದ್ ಯಶಸ್ವಿ

ರೈಲ್ವೆ ಮೇಲ್ಸೆತುವೆ ಕಾಮಗಾರಿ ವಿಳಂಭ ಹಿನ್ನಲೆ ಬಂದ್ ಮಾಡಿ ಪ್ರತಿಭಟನೆ.ನಡೆಸಲಾಯಿತು.ಭಾಗ್ಯನಗರ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು..ಕೊಪ್ಪಳ ನಗರಕ್ಕೆ ಮುಖ್ಯ  
ಕೊಂಡಿಯಾಗಿರುವ ರೈಲ್ವೆ ಮೇಲ್ಸೆತುವೆ ಕಾಮಗಾರಿ ವಿಳಂಭ ಹಿನ್ನೆಲೆ ಇಡೀ ಪಟ್ಟಣ ಬಂದ್ ಮಾಡಿ ಪ್ರತಿಭಟನೆ.ಕಾಮಗಾರಿ ಆರಂಭವಾಗಿ ಜಮೀನು ಸ್ವಾದೀನ ಮಾಡದ ಹಿನ್ನೆಲೆ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಲು ಒತ್ತಾಯಿಸಿ ನಡೆದ ಪ್ರತಿಭಟನಾ ಮೆರವಣಿಗೆ ಭಾಗ್ಯನಗರದ ಪಟ್ಟಣ ಪಂಚಾಯತ್ ಕಾರ್ಯಾಲಯದಿಂದ ಆರಂಬವಾಗಿ ಅಶೋಕ್ ಸರ್ಕಲ್ ಮುಖಾಂತರ ಹಾದು ಬಸವೇಶ್ವರ ಸರ್ಕಲ್ ತಲುಪಿತು. ಮೆರವಣಿಗೆ ಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.

ಸ್ಥಳಕ್ಕಾಗಮಿಸಿದ ಎಸಿಯವರಿಗೆ ಮನವಿ ಸಲ್ಲಿಸಲಾಯಿತು. ದಸರಾ ಹಬ್ಬದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.

Please follow and like us:

Leave a Reply