ಭಾಗ್ಯನಗರ ಕೈಮಗ್ಗ ನೇಕಾರರು ನೇಯ್ದ ಸೀರೆಗಳ ಖರೀದಿಸಲು ಮುಖ್ಯಮಂತ್ರಿಗೆ ಸಂಸದ ಸಂಗಣ್ಣ ಕರಡಿ ಪತ್ರ

ಭಾಗ್ಯನಗರದ ಕೈಮಗ್ಗ ನೇಕಾರರು ನೇಯ್ದಿ ದ ಸೀರೆಗಳು ಕೋವಿಡ್ 19 ಪರಿಣಾಮದಿಂದಾಗಿ ಮಾರಾಟವಾಗದೇ ಉಳಿದ ಸೀರೆಗಳನ್ನು ಸರಕಾರದ ವತಿಯಿಂದ ಖರೀದಿಸಲು  ಮುಖ್ಯಮಂತ್ರಿಗೆ  ಪತ್ರ.

ಕೊಪ್ಪಳ ಜಿಲ್ಲಾ, ಭಾಗ್ಯನಗರದ ಮಗ್ಗದ ಸೀರೆಗಳು ತಮ್ಮ ವೈಶಿಷ್ಠತೆಯಿಂದಾಗಿ ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಪ್ರಸಿದ್ಧಿಯನ್ನು ಹೊಂದಿದ್ದು,
ಈ ಉದ್ಯಮವನ್ನು ನಂಬಿಕೊಂಡು 5000 ನೇಕಾರರು 2500 ಮಗ್ಗಗಳಲ್ಲಿ ದುಡಿದು ಬದುಕನ್ನು ಕಟ್ಟಿಕೊಂಡಿದ್ದಾರೆ.

ಕರೋನಾ ಮಹಾಮಾರಿಯಿಂದಾಗಿ ಕೈಮಗ್ಗ ಹಾಗೂ ವಿದ್ಯುತ್‌ ಚಾಲಿತ ಮಗ್ಗಗಳ ಸೀರೆ ತಯಾರಿಕಾ ಉದ್ಯಮ ಲಾಕ್‌ಡ್‌ೌನ್‌ನಿಂದಾಗಿ ಅನಿವಾರ್ಯವಾಗಿ ಸ್ಥಗಿತಗೊಂಡಿರುತ್ತದೆ. ಇದರಿಂದಾಗಿ ಈಗಾಗಲೇ ತಯಾರಿಸಿ ಮಾರುಕಟ್ಟೆಗೆ ಹೋಗಬೇಕಾಗಿದ್ದ ರೂ.600/- ರಿಂದರೂ.950/-ರ ಬೆಲೆಯ 50,000ರಿಂದ 60,000 ಸೀರೆಗಳು ಅಂದರೆ ಅಂದಾಜು ರೂ.5ಕೋಟಿ(ಐದು ಕೋಟಿ ರೂಪಾಯಿ) ಮೌಲ್ಯದ ಸೀರೆಗಳು ಮಾರಾಟವಾಗದೆ ಹಾಗೆಯೇ ಉಳಿದಿರುತ್ತವೆ. ಮೇ ತಿ೦ಗಳ ನ೦ತರ ಮಾರಾಟವಾಗುವುದು ಕಠಿಣವಾಗಿರುತ್ತದೆ. ಒಂದು ಕಡೆ ಸಾಲ ಸೋಲ ಮಾಡಿ ಇದ್ದ ಬಂಡವಾಳವನ್ನೆಲ್ಲ ಹಾಕಿ ತಯಾರಕರ ಕೈ ಖಾಲಿಯಾಗಿದ್ದರೆ, ಇನ್ನೊ೦ದು ಕಡೆ ಇದೇ ಉದ್ಯಮವನ್ನು ನಂಬಿ ಬದುಕು ನಡೆಸುತ್ತಿದ್ದ ನೇಕಾರರಿಗೆ ದುಡಿಮೆ ಇಲ್ಲದೆ ಕುಟುಂಬವನ್ನು ನಡೆಸುವುದು ಕಷ್ಟಸಾಧ್ಯವಾಗಿರುತ್ತದೆ. ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿ೦ಗಳು ಮದುವೆ, ಮುಂಜಿ ಮುಂತಾದ ಶುಭ ಕಾರ್ಯಗಳ ಸೀಸನ್‌ ಆಗಿದ್ದು ಈ ಸಮಯದಲ್ಲಿ
ಸೀರೆಗಳಿಗೆ ಒಳ್ಳೆಯ ಬೇಡಿಕೆ ಇದ್ದು ಈ ಕಾಲವನ್ನೇ ನಂಬಿ ಇಲ್ಲಿಯವರೆಗೆ ತಯಾರು ಮಾಡಿದ ಸೀರೆಗಳನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಿ ತಯಾರಕರು ಹಾಗೂ ನೇಕಾರರು ಜೀವನ ಸಾಗಿಸುತ್ತಿದ್ದರು. ಆದರೆ. ಲಾಕ್‌ಡ್‌ೌನ್‌ ಕಾರಣದಿಂದಾಗಿ ಸೀಸನ್‌ ಕಳೆದುಕೊಂಡು, ತಯಾರಿಸಿದ ಸೀರೆಗಳು ಮಾರಾಟವಾಗದೆ ಮಗ್ಗದ ಉದ್ಯಮದ ಬದುಕು ದುಸ್ತರವಾಗಿದ್ದು ಮುಂದಿನ 6 ರಿಂದ 8 ತಿಂಗಳವರೆಗೆ ಸೀಸನ್‌ ಇಲ್ಲದಿರುವುದರಿಂದ ಭವಿಷ್ಯದ ಚಿ೦ತೆ ಸದರಿಯವರನ್ನು
ಕಾಡುತ್ತಿದೆ. ಬಡತನ ರೇಖೆಗಿ೦ತಲೂ ಕೆಳಗಿರುವ ಉದ್ಯಮದ ನೇಕಾರರು ತಮ್ಮ ಧುಡಿಮೆಯನ್ನೇ ನಂಬಿರುವ ಕುಟುಂಬದ ಸದಸ್ಯರನ್ನು ಕಾಳಜಿ ಮಾಡುವ ಚಿಂತೆಯಾದರೆ, ತಯಾರಿಸಿದ ಸೀರೆಗಳು ಮಾರಾಟವಾಗದೆ ಮಗ್ಗವನ್ನು ಪ್ರಾರಂಭಿಸಲಾಗದ ಸ್ಥಿತಿಯಲ್ಲ ಮಧ್ಯಮ ವರ್ಗದ ತಯಾರಕರಿರುತ್ತಾರೆ. ಈಗಾಗಲೇ ಸಣ್ಣ ಹಾಗೂ ಅತಿ ಸಣ್ಣ ತಯಾರಿಕಾ ಘಟಕಗಳು ಮುಚ್ಚಲ್ಪಟ್ಟಿದ್ದು, ಉಳಿದ ಅಲ್ಪ ಸ್ವಲ್ಪ ಘಟಕಗಳೂ ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ. ತಯಾರಿಸಿದ ಸೀರೆಗಳು ಮಾರಾಟವಾಗದಿದ್ದಲ್ಲಿ ಮುಂದೆ ಕಚ್ಛಾ ಮಾಲುಗಳನ್ನು ತಯಾರಕರು ಖರೀದಿಸಲಾಗದೆ ಇಡೀ ಗ್ರಾಮದ ಉದ್ಯಮವನ್ನೇ ನಿಲ್ಲಿಸಬೇಕಾದ ಅತಂತ್ರ ಪರಿಸ್ಥಿತಿಗೆ ತಲುಪಿರುತ್ತೇವೆ.

ಆದ್ದರಿಂದ ತಾವುಗಳು ದಯಮಾಡಿ ಈ ಬಗ್ಗೆ ತಾವುಗಳು ಹೆಚ್ಚಿನ ಆಸಕ್ತಿ ವಹಿಸಿ ಮಾರಾಟವಾಗದೆ ಉಳಿದಿರುವ ಅಂದಾಜು 5 ಕೋಟಿ ಮೌಲ್ಯದ ಸೀರೆಗಳನ್ನು ಸರ್ಕಾರದ ವತಿಯಿಂದ ಖರೀದಿ ಮಾಡಿ ಅದನ್ನು ಬಡವರಿಗೆ, ನಿರ್ಗತಿಕರಿಗೆ ಆಹಾರದ ಜೊತೆ ಅಗತ್ಯವಾದ ಸೀರೆಗಳನ್ನು ಹಂಚಿ, ಮಗ್ಗದ ಉದ್ಯಮವನ್ನೇ ನೆಚ್ಚಿರುವ ನೇಕಾರರ ಬದುಕನ್ನು ಕಟ್ಟಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಭಾಗ್ಯನಗರದ ಕೈಮಗ್ಗ ನೇಕಾರರು ನೇಯ್ದ ಸೀರೆಗಳ ಖರೀದಿಸಲು ಮುಖ್ಯಮಂತ್ರಿಗೆ ಸಂಸದ ಸಂಗಣ್ಣ ಕರಡಿ ಪತ್ರ

Please follow and like us:
error