ಭಾಗ್ಯನಗರ : ಐಪಿಎಲ್ ಬೆಟ್ಟಿಂಗ್ ,೧೦ ಜನರ ಬಂಧನ

ಕೊಪ್ಪಳ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂದೆ ಕೊಪ್ಪಳ ಜಿಲ್ಲೆಯಾದ್ಯಂತ ನಿರಂತರವಾಗಿ ನಡೆಯುತ್ತಿದೆ. ನಿನ್ನೆ ತಡ ರಾತ್ರಿ ಭಾಗ್ಯನಗರದ ಬೆಟ್ಟಿಂಗ ಅಡ್ಡಾದ ಮೇಲೆ ದಾಳಿ ಮಾಡಿದ ಪೋಲಿಸರು ೧೦ ಜನರನ್ನು ಬಂಧಿಸಿದ್ದಾರೆ .ಕೊಪ್ಪಳ ನಗರ ಠಾಣೆಯ ಪೊಲೀಸರು ಮಿಂಚಿನ ಕಾರ್ಯಚರಣೆ ಮಾಡಿದ್ದಾರೆ. ಸಿಪಿಐ ರವಿ ಉಕ್ಕುಂದ ಮತ್ತು ಸಿಬ್ಬಂದಿ ದಾಳಿ ಮಾಡಿ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದ ೧೦ ಆರೋಪಿಗಳನ್ನು ಬಂಧಿಸಿದ್ದಾರೆ.

ಭಾಗ್ಯನಗರದ ಪ್ರದೀಪ, ವಿನಾಯಕ, ಬಸವರಾಜ, ಆದಿರಾಜ, ಸಂತೋಷ, ರಾಕೇಶ, ಸಿದ್ದು, ವಿರೇಶ, ಲಿಂಗರಾಜ, ಶ್ರೀನಿವಾಸ ಬಂಧನಕ್ಕೊಳಗಾದವರು.

ಆರೋಪಿಗಳಿಂದ ೨ ಲಕ್ಷ ೨೮ ಸಾವಿರ ರೂ. ಸೇರಿದಂತರ ೦೯ ಮೊಬೈಲ್, ೨ ನೋಟ್ ಬುಕ್ ಜಪ್ತಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Please follow and like us:
error