ಭಾಗ್ಯನಗರ : ಉದ್ದಿಮೆ ಪರವಾನಿಗೆ ಪಡೆದುಕೊಳ್ಳಲು ಸೂಚನೆ

bhagyanagar_pattana_panchayat ಭಾಗ್ಯನಗರದಲ್ಲಿ ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ವ್ಯಾಪಾರಸ್ಥರು, ಉದ್ದಿಮೆಯ ೨೦೧೭-೧೮ನೇ ಸಾಲಿಗೆ ಉದ್ದಿಮೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಂಡು ಉದ್ದಿಮೆ ನಡೆಸಬೇಕೆಂದು ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ.
ಈಗಾಗಲೇ ಉದ್ದಿಮೆ ಪರವಾನಿಗೆ ಪಡೆದುಕೊಂಡವರು ಚಾಲ್ತಿ ಸಾಲಿಗೆ ನವೀಕರಣ ಮಾಡಿಸಿಕೊಂಡು ಉದ್ದಿಮೆಯನ್ನು ನಡೆಸಬೇಕು. ಒಂದು ವೇಳೆ ಲೈಸನ್ಸ್ ಪಡೆಯದೇ ಅಥವಾ ನವೀಕರಣ ಮಾಡಿಸಿಕೊಳ್ಳದೇ ಉದ್ದಿಮೆಯನ್ನು ನಡೆಸುತ್ತಿದ್ದಲ್ಲಿ, ಕರ್ನಾಟಕ ಪುರಸಭೆ ಕಾಯ್ದೆ ೧೯೬೪ ರನ್ವಯ ದಂಡವನ್ನು ವಿಧಿಸಲಾಗುವುದು. ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಲು, ನಿಗದಿತ ನಮೂನೆಯಲ್ಲಿ ಅರ್ಜಿ, ಚಾಲ್ತಿ ಸಾಲಿನ ಆಸ್ತಿಕರ ಹಾಗೂ ಚಾಲ್ತಿ ತಿಂಗಳಿನ ನೀರಿನ ಕರ ಪಾವತಿಸಿದ ರಶೀದಿಗಳನ್ನು, ವಿದ್ಯುತ್ ಬಿಲ್, ಆಧಾರ್ ಕಾರ್ಡ, ಮಳಿಗೆ ಅಥವಾ ಕಟ್ಟಡದ ಪೋಟೊ, ಅರ್ಜಿದಾರರ ಪಾಸ್ ಪೋರ್ಟಸೈಜ್ ಭಾವಚಿತ್ರ, ಬಾಡಿಗೆ ಕರಾರು ಪತ್ರ, ಒಪ್ಪಿಗೆ ಕರಾರು ಪತ್ರ ಇತರೆ ದಾಖಲೆಗಳೊಂದಿಗೆ ಲಗತ್ತಿಸಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬಹುದು .

Leave a Reply