You are here
Home > Koppal News > ಭಾಗ್ಯನಗರ : ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡದಂತೆ ಸೂಚನೆ

ಭಾಗ್ಯನಗರ : ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡದಂತೆ ಸೂಚನೆ

ಕೊಪ್ಪಳ ಅ. ೧೫  ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡದಂತೆ ಸಾರ್ವಜನಿಕರಿಗೆ ಪ.ಪಂ. ಮುಖ್ಯಾಧಿಕಾರಿ ಸೂಚನೆ ನೀಡಿದ್ದಾರೆ.
ಸಕ್ಷಮ ಪ್ರಾಧಿಕಾರದ ವಿನ್ಯಾಸ ಮಂಜೂರಿ ಪಡೆಯದ ಖಾಸಗಿ ವಿನ್ಯಾಸಗಳಲ್ಲಿ ಕಟ್ಟಡ ಅನುಮತಿ ಪ್ರಕರಣಗಳಿಗೆ ತಾಂತ್ರಿಕ ಅಭಿಪ್ರಾಯ ನೀಡದಿರಲು ಪ್ರಾಧಿಕಾರಕ್ಕೆ ಸರಕಾರ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ತಾಂತ್ರಿಕ ಅಭಿಪ್ರಾಯ ನೀಡುತ್ತಿಲ್ಲ. ಆದರೆ ಭಾಗ್ಯನಗರ ಪಟ್ಟಣದ ವ್ಯಾಪ್ತಿಯ ಕೆಲವರು ಕಟ್ಟಡ ಅನುಮತಿಗೆ ಅರ್ಜಿಸಲ್ಲಿಸಿ, ಅದು ನಿರಾಕರಣೆಯಾಗುವುದೆಂದು ತಿಳಿದಿದ್ದರೂ ಇನ್ನು ಕೆಲವರು ನಿರಾಕರಣೆ ಹಿಂಬರಹ ಪಡೆದಿದ್ದರೂ ಸಹ ಅನಧಿಕೃತವಾಗಿ ಕಟ್ಟಡಗಳನ್ನು ಮಾಡಿಕೊಳ್ಳುತ್ತಿರುವುದು ತಿಳಿದು ಬಂದಿದೆ. ಅವರಿಗೆ ಸರಕಾರದ ನಿರ್ಧಾರಗಳನ್ನೂ ತಿಳಿಸಲಾಗಿದೆ. ಆದಾಗ್ಯೂ ಸಹ ಅನಧಿಕೃತವಾಗಿ ಕಟ್ಟಡಗಳನ್ನು ಮಾಡಿಕೊಳ್ಳುವುದು ಸರಿಯಲ್ಲ.
ಕೆಲವರು ಅಕ್ರಮ/ ಸಕ್ರಮ ಕಾಯ್ದೆಯಲ್ಲಿ ಸಕ್ರಮ ಮಾಡಿಕೊಂಡಲಾಯಿತು ಎಂಬ ಅಭಿಪ್ರಾಯ ಹೊಂದಿರುವುದಾಗಿ ತಿಳಿದು ಬಂದಿದೆ. ಸಂಪೂರ್ಣ ಅನಧೀಕೃತ ಕಟ್ಟಡಕ್ಕೆ ಈ ಕಾಯ್ದೆ ಸಹಕಾರಿಯಾಗುವುದಿಲ್ಲ. ಕಾರಣ ಯಾರು ತಪ್ಪು ಮಾಹಿತಿ ಹೊಂದಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಬಾರದು ಎಂದು ಸೂಚಿಸಲಾಗಿದೆ. ನಂತರವೂ ಇಂತಹ ಬೆಳವಣಿಗೆಗಳನ್ನು ಮಾಡಿದಲ್ಲಿ ಅನಗತ್ಯವಾಗಿ ನಿಯಮಗಳನುಸಾರ ಕ್ರಮ ಎದುರಿಸಿ ತೊಂದರೆ ಎದುರಿಸಬೇಕಾಗುತ್ತದೆ. ನ್ಯಾಯಾಲಯದ ಅನೇಕ ಪ್ರಕರಣಗಳು ಅನಧಿಕೃತ ಕಟ್ಟಡಗಳ ವಿರುದ್ದವಾಗಿದೆ. ಕಾರಣ ಯಾರು ಸಹ ಸರ್ಕಾರದಿಂದ ನಿಯಮಗಳನ್ನು ರೂಪಿಸುವವರೆಗೆ ಅಥವಾ ಪರ್ಯಾಯ ನಿರ್ದೇಶನ ಬರುವವರೆಗೆ ಅನಧಿಕೃತ ಕಟ್ಟಡಗಳನ್ನು ಪ್ರಾರಂಭಿಸಬಾರದೆಂದು ಸ್ಪಷ್ಟಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Top