ಭಾಗ್ಯನಗರದಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳ : ಆತಂಕದಲ್ಲಿ ಜನತೆ

ಇಂದು ಮತ್ತೆ ಎರಡು ಪ್ರಕರಣಗಳು ವರದಿ ?

ಕೊಪ್ಪಳ : ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳಿಂದಾಗಿ ಜನತೆ ಆತಂಕದಲ್ಲಿದ್ದಾರೆ. ಕಳೆದ ಒಂದು ವಾರದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಪ್ರಕರಣ ವರದಿಯಾಗುತ್ತಲೇ ಇದೆ. ಭಾಗ್ಯನಗರದ ನಿವಾಸಿಯೊಬ್ಬ ಕರೋನಾದಿಂದ ಸಾವನ್ನಪ್ಪಿದ್ದರಿಂದ ಜನತೆ ಮತಷ್ಟು ಆತಂಕ ಅನುಭವಿಸುವಂತಾಗಿದೆ. ನಿನ್ನೆ ನಾಲ್ಕು ಪ್ರಕರಣಗಳು ವರದಿಯಾಗಿದ್ದವು. ಇಂದು ಬೆಳಗ್ಗಿಯೇ ಎರಡು ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ ! ಶಾಸ್ತ್ರಿ ಕಾಲೋನಿಯಲ್ಲಿರುವ ಪೋಲಿಸ್ ಒಬ್ಬರಿಗೆ ಹಾಗೂ ಯತ್ನಟ್ಟಿ ರಸ್ತೆಯ ಟ್ಯಾಂಕಿನ ಬಳಿ ಮತ್ತೊರ್ವ ವ್ಯಕ್ತಿಯಲ್ಲಿ ಪಾಜಿಟಿವ್ ಪ್ರಕರಣ ಕಂಡುಬಂದಿದೆ. ಹೀಗಾಗಿ ಆ ಏರಿಯಾಗಳನ್ನು ಸೀಲಡೌನ್ ಮಾಡಲಾಗುತ್ತಿದೆ. ಇನ್ನು ಸಾಯಂಕಾಲದೊಳಗೆ ಎಷ್ಟು ಪ್ರಕರಣಗಳು ಬರುತ್ತವೆಯೋ ಎನ್ನುವ ಆತಂಕದಲ್ಲಿ ಜನತೆ ಇದ್ದಾರೆ. ಆತಂಕದ ಬದಲಿಗೆ ಮುನ್ನೆಚ್ಚರಿಕೆ ಕೈಗೊಂಡರೆ ಖಂಡಿತವಾಗಿಯೂ ರೋಗ ಬಾರದಂತೆ ತಡೆಗಟ್ಟಬಹುದು.

Please follow and like us:
error