ಭಾಗ್ಯನಗರದಲ್ಲಿ ಐದು ದಿನಗಳ ಕಥಾ ಕಮ್ಮಟ

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಸಹಜಾ ಟ್ರಸ್ಟ್ ಕೊಪ್ಪಳ ಸಹಯೋಗದಲ್ಲಿ ಐದು ದಿನಗಳ ಕಥಾ ಕಮ್ಮಟವು  ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದಲ್ಲಿ ಉದ್ಘಾಟನೆಗೊಂಡಿತು. 
ಕಥಾ ಕಮ್ಮಟವು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿಗಳಾದ  ವಿಠ್ಠಪ್ಪ ಗೋರಂಟ್ಲಿಯವರ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು. ಕಥೆ ಸಾಹಿತ್ಯ ಎಂಬುದು ಜನಜೀವನದಲ್ಲಿ ಹಾಸು ಹೊಕ್ಕಾಗಿದೆ. ಶಿವಾಜಿ ಮಾಹಾರಾಜ, ಶ್ರೀರಾಮ, ಸ್ವಾಮಿ ವಿವೇಕಾನಂದರವರಂತ ಮಹಾನ್ ವ್ಯಕ್ತಿಗಳ ಜೀವನವು ಕಥೆಗಳ ಸ್ಪೂರ್ತಿಯನ್ನು ಪಡೆದೇ ರೂಪುಗೊಂಡಿದೆ. ಹಾಗೆಯೇ ಇಂದಿನ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರತರುವಂತಹ ಇಂತಹ ಕಮ್ಮಟಗಳ ಮೂಲಕ ಹೊರ ಜಗತ್ತಿಗೆ ತೆರೆದುಕೊಳ್ಳಬೇಕಾಗಿದೆ.
ಕಥೆ ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ. ಆದರೆ ಕಥೆಯನ್ನು ರಚನೆ ಮಾಡುವ ಕೈಗಳು ಕಥಾಕೃಷಿ ಮಾಡುವದನ್ನು ಜಗತ್ತು ಕಾತುರದಿಂದ ಕಾಯುತ್ತಿದೆ. ಆದಿ ಕಾಲದಿಂದ ಕಥೆಯ ಪರಂಪರೆಯು ಮೌಖಿಕವಾಗಿ ಮತ್ತು ಲಿಖಿತವಾಗಿ ಎರಡೂ ರೀತಿಯಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದೆ ಮತ್ತು ಬದಲಾಯಿಸಿದೆ ಅಂತಹ ಶಕ್ತಿ ಕಥೆಗಳಲ್ಲಿ ಇದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ನಂತರ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ  ದಾನಪ್ಪ ಕವಲೂರು ಮಾಜಿ ತಾಲೂಕ ಪಂಚಾಯಿತಿ ಸದಸ್ಯರು ಕೊಪ್ಪಳ ಇವರು ಮಾತನಾಡಿ ಆಧುನಿಕ ಯುಗದಲ್ಲಿ ಟಿ.ವಿ, ಇಂಟರನೆಟ್, ಮೋಬೈಲ್‌ಗಳ ಬಳಕೆಯಿಂದ ಕಥಾಲೋಕವು ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು. ಹಾಗಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿದೆ. ಮನುಷ್ಯನ ಸಂಬಂಧಗಳು ಉನ್ನತ ಮಟ್ಟಕ್ಕೆ ಹೋಗಲು ಕಥೆಗಳ ಅವಶ್ಯಕತೆಯಿದೆ, ಇಂತಹ ಸಾಹಿತ್ಯ ಕಮ್ಮಟ ನಮ್ಮಂತ ಹಿಂದುಳಿದ ಜಿಲ್ಲೆಗಳಲ್ಲಿ ಆಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು
ಕಥಾ ಕಮ್ಮಟದ ಸಂಚಾಲಕಿಯಾದ ಶೀಲಾ ಹಾಲ್ಕುರಿಕೆಯವರು ಪ್ರಾಸ್ತಾವಿಕವಾಗಿ ಮಾತನಾಡಿ ಐದು ದಿನಗಳಲ್ಲಿ ವಿಶೇಷವಾದ ಹತ್ತು ಗೋಷ್ಟಿಗಳು ನಡೆಯಲಿದ್ದು ಹತ್ತು ಜನ ಸಂಪನ್ಮೂಲ ವ್ಯಕ್ತಿಗಳು ಗೋಷ್ಟಿಗಳನ್ನು ನಡೆಸಲಿದ್ದಾರೆ. ಇಲ್ಲಿ ತಾವೇ ಸ್ವಯಂ ಪ್ರೇರಿತರಾಗಿ ಮಕ್ಕಳು ಕಥಾ ರಚನೆಯನ್ನು ಮಾಡುವಂತೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಲಾಗುತ್ತದೆ. ವೇದಿಕೆಯ ಮೇಲೆ ಸರಕಾರಿ ಪ್ರೌಢಶಾಲಾ ಭಾಗ್ಯನಗರದ ಉಪ ಪ್ರಾಚಾರ್ಯರಾದ ಸುರೇಂದ್ರಗೌಡರವರು ಅಧ್ಯಕ್ಷತೆ ವಹಿಸಿದ್ದರು. ಶ್ರಿಮತಿ ಕವಿತಾ ಲಕ್ಷ್ಮಣ್ ಚಳಮರದ ಉಪಾಧ್ಯಕ್ಷರು ಪಟ್ಟಣ ಪಂಚಾಯತಿ ಭಾಗ್ಯನಗರ, ಶ್ರೀಮತಿ ಲಕ್ಷೀಬಾಯಿ ನಾಗುಸಾ ಮೇಘರಾಜ್ ಸದಸ್ಯರು ಪಟ್ಟಣ ಪಂಚಾಯತ್ ಭಾಗ್ಯನಗರ, ಶ್ರೀಮತಿ ಶಾರದಾ ಪಾನಘಂಟಿ ಸಮಾಜ ಸೇವಕರು ಭಾಗ್ಯನಗರ ಇವರುಗಳು ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ವಿಠ್ಠಪ್ಪ ಗೋರಂಟ್ಲಿಯವರು ಕಮ್ಮಟದ ಮೋದಲನೇ ಗೊಷ್ಠಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಲ್ಲಾ ಮಕ್ಕಳು ಮತ್ತು ಶಾಲಾ ಶಿಕ್ಷಕ ವೃಂದವು ಹಾಜರಾಗಿದ್ದರು. ಉದ್ಘಾಟನಾ ನಿರೂಪಣೆಯನ್ನು ಕುಮಾರಿ ವೆಣ್ಣಿಲಾ ಹಾಲ್ಕುರಿಕೆ ನಡೆಸಿದರು.

Please follow and like us:
error