fbpx

ಭರ್ಜರಿ ಹೈಡ್ರಾಮಾ, ಕುದುರೆ ವ್ಯಾಪಾರ : ಶಾಸಕ ಅಮರೇಗೌಡ ಭಯ್ಯಾಪೂರ ಕುದುರೆ ಸವಾರಿಯಲ್ಲಿ ಬಿಜಿ !

ಕೊಪ್ಪಳ : ರಾಜ್ಯ ರಾಜಕೀಯದಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿದ್ದು ಇಡೀ ರಾಜ್ಯದ ರಾಜಕಾರಣಿಗಳು ಅದರಲ್ಲೇ ಮಗ್ನವಾಗಿದ್ದಾರೆ. ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಕುದುರೆ ಸವಾರಿಯಲ್ಲಿ ಬಿಜಿಯಾಗಿದ್ದರು.

ಮಹಾಬಲೇಶ್ವರದಲ್ಲಿ ಬಿಂದಾಸ್ ಕುದುರೆ ಸವಾರಿಯಲ್ಲಿ ನಿರತರಾಗಿದ್ದ ಕುಷ್ಟಗಿ ಶಾಸಕರಿಗೆ ಸಾತ್ ನೀಡಿದವರು ಮಾಜಿ ಶಾಸಕ , ಕಾಂಗ್ರೆಸ್ ಹಿರಿಯ ಮುಖಂಡ ಹಸನಸಾಬ್ ದೋಟಿಹಾಳ. ಮೊನ್ನೆಯಿಂದಲೇ ಮಹಾರಾಷ್ಟ್ರ ಪ್ರವಾಸದಲ್ಲಿರುವ ಶಾಸಕ ಬಯ್ಯಪೂರ ಮತ್ತವರ ತಂಡ ಸಂಕ್ರಾಂತಿ ನಿಮಿತ್ಯ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದೆ. ಹೀಗಾಗಿ ಅಮರೇಗೌಡ ಪಾಟೀಲ್ ಬಯ್ಯಫೂರವರು ಮಹಾರಾಷ್ಟ್ರಕ್ಕೆ ತೆರಳಿದ್ದಾರೆ. ಅಪರೇಷನ್ ಕಮಲಕ್ಕೊಳಗಾಗಿದ್ದಾರೆ ಮುಂಬಯಿಗೆ ತೆರಳಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿದ್ದವು.

ಯಾವುದೇ ರಾಜಕೀಯ ಊಹಾಪೋಹದ ಮಾತುಗಳಿಗೆ ತಲೆಕಡೆಸಿಕೊಳ್ಳದೆ ಪ್ರವಾಸದಲ್ಲಿ ಬ್ಯುಸಿಯಾಗಿರುವ ಶಾಸಕ ಬಯ್ಯಾಪೂರ ಆಪರೇಷನ್ ಕಮಲವೂ ಇಲ್ಲ ಏನೂ ಇಲ್ಲ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇಂದು ರಾತ್ರಿ ಬೆಂಗಳೂರಿಗೆ ಮರಳಿ ಬರಲಿದ್ದಾರೆ ಅಮರೇಗೌಡ ಬಯ್ಯಪೂರ

Please follow and like us:
error
error: Content is protected !!