ಭರ್ಜರಿ ಜನಸಾಗರದೊಂದಿಗೆ ಅನ್ಸಾರಿ ನಾಮಪತ್ರ ಸಲ್ಲಿಕೆ

ಕೊಪ್ಪಳ ಜಿಲ್ಲೆಯ ಪ್ರತಿಷ್ಠೀತ ಕಣವಾಗಿರೋ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ಬೆಳಗಿನ ಜಾವ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ನಾಮಪತ್ರ ಸಲ್ಲಿಸಿದರೆೆ ಇತ್ತ ನಾನು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಕಾಂಗ್ರೇಸ್ ಅಭ್ಯರ್ಥಿ ಇಕ್ಬಲ್ ಅನ್ಸಾರಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ್ರು. ಗಂಗಾವತಿಯ ತಮ್ಮ ನಿವಾಸದ ಮೂಲಕ ಕೃಷ್ಣದೇವರಾಯ ವೃತ್ತದವೆರಗೂ ನಡೆದ ೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದೇ ವೆಳೆ ಇಕ್ಬಾಲ್ ಅನ್ಸಾರಿ ಅವರ ಜೊತೆಗೆ ಕಾಂಗ್ರೇಸ್ ಪಕ್ಷದ ನಾಯಕರು ಸೇರಿದಂತೆ ಅವರ ಪುತ್ರ ಇಮ್ತಿಯಾಜ್ ಅನ್ಸಾರಿ ಸಾಥ್ ನೀಡಿದ್ರು. ಇದೇ ವೆಳೆ ಮಾತನಾಡಿದ ಅನ್ಸಾರಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರು. ಇನ್ನು ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಬೆಂಬಲಿಗರು ಮೆರವಣಿಗೆಯಲ್ಲಿ ಪಾಲ್ಗೊಂಡು ಇಕ್ಬಾಲ್ ಅನ್ಸಾರಿಯವರಿಗೆ ಜೈಕಾರ ಹಾಕಿದ್ರು.

Please follow and like us:
error