ಭಯೋತ್ಪಾದನೆ ವಿರೋಧಿ ದಿನ ಆಚರಣೆ : ವಾರ್ತಾ ಇಲಾಖೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ

ಕೊಪ್ಪಳ ಮೇ. ): ಭಯೋತ್ಪಾದನೆ ವಿರೋಧಿ ದಿನ ಆಚರಣೆ ಅಂಗವಾಗಿ ಇಂದು (ಮೇ.21) ಜಿಲ್ಲಾಡಳಿತ ಭವನದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಜಿಲ್ಲಾ ವಾರ್ತಾಧಿಕಾರಿ ಜಿ. ಸುರೇಶ ಅವರು ಸಿಬ್ಬಂದಿ ಮತ್ತು ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಭಯೋತ್ಪಾದನೆ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, 1991ರ ಮೇ.21 ರಂದು ತಮಿಳುನಾಡಿನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಎಲ್.ಟಿ.ಟಿ ಗುಂಪಿನ ಮಹಿಳೆಯೊಬ್ಬರು ಆತ್ಮಾಹುತಿ ಬಾಂಬ್ ಸ್ಪೋಟಿಸಿಕೊಳ್ಳುವ ಮೂಲಕ ರಾಜೀವ್ ಗಾಂಧಿಯವರನ್ನು ಹತ್ಯೆಗೈಯುತ್ತಾರೆ. ಈ ಘಟನೆಯ ಸ್ಮರಣಾರ್ಥ ದೇಶದಲ್ಲಿ ಇನ್ನೊಮ್ಮೆ ಈ ರೀತಿಯ ಘಟನೆಗಳು ಮರುಕಳಿಸಬಾರದೆಂದು ಈ ದಿನದಂದು ದೇಶದೆಲ್ಲಡೆ ಭಯೋತ್ಪಾದನೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಅರುಣಾ ಭೋಗಿ, ಎಂ. ಪಾಂಡುರAಗ ಸೇರಿದಂತೆ ಕಚೇರಿ ಸಿಬ್ಬಂದಿ ಮತ್ತು ಅಪ್ರೆಂಟಿಸ್ ಅಭ್ಯರ್ಥಿಗಳು ಉಪಸ್ಥಿತರಿದ್ದರು

Please follow and like us:
error