ಭಯೋತ್ಪಾದನೆ ವಿರೋಧಿ ದಿನ ಆಚರಣೆ : ಜಿಲ್ಲಾಡಳಿತದಿಂದ ಪ್ರತಿಜ್ಞಾವಿಧಿ ಸ್ವೀಕಾರ

ಕೊಪ್ಪಳ ಮೇ. : ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಭಯೋತ್ಪಾದನೆ ವಿರೋಧಿ ದಿನ ಆಚರಣೆ ಅಂಗವಾಗಿ ಇಂದು (ಮೇ.21) ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಪ್ರತಿಜ್ಷಾವಿಧಿ ಸ್ವೀಕರಿಸಲಾಯಿತು. ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ನೆರೆದಿದ್ದ ಅಧಿಕಾರಿಗಳಿಗೆ ಭಯೋತ್ಪಾಧನೆ ವಿರೋಧಿ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಹೇಮಂತ ಕುಮಾರ, ಪ್ರ.ದ.ಸ. ಮಹಾವೀರ, ನಾಗರಾಜ್, ಕಾರ್ತಿಕ್ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

Please follow and like us:
error