ಭತ್ತದ ನಾಡಿನಲ್ಲಿ ಕನ್ನಡದ ಕಲರವ

ಗಂಗಾವತಿ : ಭತ್ತದ ನಾಡು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸಾಹಿತ್ಯ ಜಾತ್ರೆ ನಡೆಯುತ್ತಿದೆ. 6ನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿರೋ ಹಾಸ್ಯ ದಿಗ್ಗಜ ಪ್ರಾಣೇಶ್ ಬೀಚಿಯವರನ್ನ ರಥಯಾತ್ರೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆ ಹತ್ತಿರ ಕರೆದ್ಯೊಯಲಾಗ್ತಿದೆ. ಈ ವೇಳೆ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳಾದ ಕಂಸಾಳೆ, ಮದ್ದಳೆ ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ತಂಡಗಳು ಭಾಗವಹಿಸಿ ಮೆರವಣಿಗೆಯ ಮೆರಗನ್ನ ಹೆಚ್ಚಿಸಿವೆ. ಅಲ್ದೇ ಚನ್ನಬಸವ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಶುರುವಾಗಿದ್ದು, ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೋಂಡಿದ್ದಾರೆ.