ಬ್ರೀಟಿಷರ ಕನಸಿನಲ್ಲೂ ಕಾಡಿದ ಕದನ ಕವಿ ಟಿಪ್ಪು ಸುಲ್ತಾನ : ಎಂ. ನಂಜುಂಡಸ್ವಾಮಿ

ಕೊಪ್ಪಳ ನ. ಬ್ರೀಟಿಷರ ಕನಸಿನಲ್ಲೂ ಕಾಡಿದ ಕದನ ಕವಿ ಹಜರತ್ ಟಿಪ್ಪು ಸುಲ್ತಾನ್ ಎಂದು ಬೆಂಗಳೂರಿನ ಅಪರ ಪೊಲೀಸ್ ಆಯುಕ್ತರಾದ ಎಂ. ನಂಜುಂಡಸ್ವಾಮಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಒಬ್ಬ ಕನ್ನಡ ನಾಡಿನ ದೊರೆ ಯಾಗಿದ್ದರು. 40 ಸಾವಿರ ಚದರು ಅಡಿ ಇದ್ದ ಮೈಸೂರು ಸಾಮ್ರಾಜ್ಯವನ್ನು 80 ಸಾವಿರ ಚ.ಅ.ಕ್ಕೆ ವಿಸ್ತರಿಸಿದರು. ಹೈದರ ಅಲಿಯ ಗಂಡುಗಲಿ ಮಗ, ದ್ರಾವಿಡ ದೇಶದ ಇತಿಹಾಸದಲ್ಲಿ ಹೊಳೆಯುವ ರತ್ನ ಹಜರತ್ ಟಿಪ್ಪು ಸುಲ್ತಾನ್. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಚಿನ್ನ, ನಮ್ಮ ಕರುನಾಡಿನ ಯುವಕರ ನರ-ನಾಡಿಯಲ್ಲಿ ವೀರತ್ವ ತುಂಬುವವರೇ ಟಿಪ್ಪು ಸುಲ್ತಾನ. ಇಂತಹ ಮಹಾನ ವ್ಯಕ್ತಿಯನ್ನು ನೆನಪಿಸಿಕೊಳ್ಳದಿದ್ದರೆ ನಾವು ನಮ್ಮ ತಾಯಿ ನಾಡಿನ ಪ್ರೀತಿಯನ್ನು ಮರೆತಂತೆ. ನಮಗಾಗಿ ತನ್ನ ಪ್ರಾಣವನ್ನು ಕೊಟ್ಟಿದವರನ್ನು ದೂರು ಮಾಡಿದಂತೆ. ಹೈದರ ಅಲಿ ಮತ್ತು ಫತಿಮಾ ಫಕ್‍ರುನ್ನಿಸಾ ದಂಪತಿಗಳಿಗೆ ಟಿಪ್ಪು ಸುಲ್ತಾನ ಕ್ರಿ.ಶ. 1750 ರಲ್ಲಿ ಜನಿಸಿದರು. ಜನ್ಮ ದಿನಾಂಕ ಕೆಲವೆಡೆ ನವೆಂಬರ್. 10 ಮತ್ತು 20 ಎಂದು ಇತಿಹಾಸದಲ್ಲಿದೆ. ತಂದೆ ಹೈದರ ಅಲಿ ಅವಿದ್ಯಾವಂತರಾಗಿದ್ದರೂ ಸಹ ಗಾಜಿಗಾನ ಮತ್ತು ಗೋವರ್ದನ ಪಂಡಿತ್ ಹೀಗೆ ಅನೇಕ ವಿದ್ವಾಂಸರಿಂದ ಟಿಪ್ಪುವಿಗೆ ಉತ್ತಮವಾದ ಶಿಕ್ಷಣವನ್ನು ನೀಡಿದರು. ಟಿಪ್ಪುವಿಗೆ ಕನ್ನಡ ಬರುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಾರೆ ಆದರೆ, ಟಿಪ್ಪು ಸುಲ್ತಾನ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಿದ್ದರು ಮತ್ತು ವ್ಯವಹಾರಿಸುತ್ತಿದ್ದರು. ಇದಕ್ಕೆ ಶೃಂಗೇರಿ ಮಠಕಕ್ಕೆ ಕನ್ನಡದಲ್ಲಿ ಬರೆದ ಪತ್ರಗಳು ಸಾಕ್ಷೀಯಾಗಿವೆ. ಟಿಪ್ಪು ಸುಲ್ತಾನರು ಕನ್ನಡದ ಜೊತೆ ಬಹಳಷ್ಟು ಅಂದರೆ, ಉರ್ದು, ಅರೆಬಿಕ್, ಪಾರ್ಸಿ, ಮಳಿಯಾಲಂ, ತಮಿಳು, ತೆಲಗು, ಇಂಗ್ಲೀಷ್ ಮತ್ತು ಫ್ರೇಂಚ್ ಭಾಷೆಗಳು ಸಹ ಬಲ್ಲವರಾಗಿದ್ದರು. ಟಿಪ್ಪು ಸುಲ್ತಾನರವರು ದನ-ಕರುಗಳನ್ನು ಕಂಡರೂ ಸಹ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಪಶುಗಳ ಅಭಿವೃದ್ಧಿಗಾಗಿ ಅಮೃತ ಪಾಹಲ್ ಎಂಬ ವ್ಯವಸ್ಥೆಯನ್ನು ತಂದು ಪಶು ಸಂಗೋಪನೆಯನ್ನು ಅಂದೇ ಸ್ಥಾಪಿಸಿದ್ದರು. ಟಿಪ್ಪು ಸುಲ್ತಾನ ಮೈಸೂರು ಸಾಮ್ರಾಜ್ಯದಲ್ಲಿ ವ್ಯಾಪಾರ ವಹಿವಾಟುಗಳನ್ನು ಹೆಚ್ಚಿಸಿದ್ದರು. ರೈತರು ತೆರಿಗೆಯನ್ನು ಪಾವತಿಸದೇ ಇದ್ದಲ್ಲಿ, ರೈತರು ತಮ್ಮ ಹೊಲದ ರಸ್ತೆ ಪಕ್ಕದಲ್ಲಿ ಮಾವು ಮತ್ತು ಹಲಸೆ ಹಣ್ಣುಗಳ ಗಿಡಗಳನ್ನು ಬೆಳೆಯ ಬೇಕು ಎಂಬ ದಂಡವನ್ನು ನೀಡುತ್ತಿದ್ದರು. ಇಂದಿನ ಕೆ.ಆರ್.ಎಸ್ ಆಣೆಕಟ್ಟಿನ ಕನಸು ಕಾಣಿದ್ದು ಮತ್ತು ಸಣ್ಣದಾದ ಆಣೆಕಟ್ಟನ್ನು ನಿರ್ಮಿಸಿದ್ದು ಟಿಪ್ಪು. ಭೂಸುಧಾರಣೆ ನೀತಿಯನ್ನು ಜಾರಿ ಮಾಡಿ, ಉಳ್ಳವರ ಕಪಿಮುಸ್ಟಿಯಿಂದ ಭೂಮಿಯನ್ನು ಕಸಿದುಕೊಂಡು ಬಡ ಹಾಗೂ ನಿರ್ಗತಿಕ ಜನರಿಗೆ ಭೂಮಿಯನ್ನು ಒದಗಿಸಿದರು. ಈ ಕಾರಣದಿಂದ ಇಂದು ಟಿಪ್ಪು ಸುಲ್ತಾನರಿಗೆ ವೀರೊಧಿಸಲಾಗುತ್ತಿದೆ. ಟಿಪ್ಪು ಸುಲ್ತಾನ ದೊಡ್ಡ-ದೊಡ್ಡ ಅರಮನೆಯಲ್ಲಿ ಇರದೇ ಒಂದು ಚಿಕ್ಕ ಅರಮನೆಯಲ್ಲಿ ವಾಸವಾಗಿದ್ದರು. ಔರತ್ ನಿಂದ ಮೌಜನ್ ಎಂಬುವವರು ಮೈಸೂರು ಸಾಮ್ರಾಜ್ಯಕ್ಕೆ ಬಂದಾಗ ಬಾಲಕ ಟಿಪ್ಪು ಹುಲಿ ಮರಿಯೊಂದಿಗೆ ಆಟವಾಡುತ್ತಿರುವುದು ಕಂಡು ಟಿಪ್ಪು ಸುಲ್ತಾನರಿಗೆ “ಮೈಸೂರು ಹುಲಿ” ಎಂದು ಕರೆದರು. ಈಗಿರುವ ಮೈಸೂರು ಸಿಲ್ಕ್ ಸಿರೆಗಳ ಉದ್ಯಮವನ್ನು ಪ್ರಾರಂಭಿಸಿದ್ದು, ಬ್ರೀಟಿಷರ ರುಂಡವನ್ನು ಕಡೆದ ಏಕೈಕ ದೊರೆ ಟಿಪ್ಪು. ಬ್ರೀಟಿಷರಿಗೆ ಸಿಂಹಸ್ವಪ್ನರಾಗಿದ್ದ ಟಿಪ್ಪು ಸುಲ್ತಾನ 1799 ರಲ್ಲಿ ಮರಣವನ್ನು ಹೊಂದಿರದೇ ಇದ್ದರೆ 1947 ರವರೆಗೆ ಭಾರತ ದೇಶವು ನಮ್ಮ ಆಳ್ವಿಕೆಯಲ್ಲಿ ಇರುತ್ತಿರಲಿಲ್ಲ ಎಂದು ಬ್ರೀಟಿಷರ ದೊರೆಗಳು ತಮ್ಮ ಪುಸ್ತಕಗಳಲ್ಲಿ ಈ ವಾಕ್ಯವನ್ನು ಉಲ್ಲೇಖಿಸಿದ್ದಾರೆ. ದೇವಸ್ಥಾನಗಳಿಗೆ ಆಭರಣಗಳನ್ನು ಮತ್ತು ದೇವಸ್ಥಾನ ಪಾಲಕರಿಗೆ ವಸ್ತ್ರಾಭರಣಗಳನ್ನು ನೀಡುತ್ತಿದ್ದರು ಟಿಪ್ಪು. ಮರಾಠರಿಂದ ದಾಳಿಗೊಳಪಟ್ಟ ಶೃಂಗೇರಿ ಮಠಕ್ಕೆ ಪುನಃ ಅಭಿವೃದ್ಧಿಪಡಿಸಿದ ಟಿಪ್ಪು ಸುಲ್ತಾನ ಸೌಹಾರ್ದತೆಯ ಪ್ರತಿಕರು. ತಂತ್ರಜ್ಞಾನಗಳನ್ನು ಉಪಯೋಗಿಸಿ ಕ್ಷೀಪಣಿಗಳನ್ನು ಪ್ರಪ್ರಥಮ ಬಾರಿಗೆ ಕಂಡುಹಿಡಿದಿದ್ದರು. ಟಿಪ್ಪು ವೀರ ಮರಣ ಹೊಂದಿದ ನಂತರ ಕಾಂಗ್ರಾವ್ ಎಂಬ ಬ್ರೀಟಿಷರ ದೊರೆ ಮೊದಲು ಟಿಪ್ಪು ಅರಮನೆಯಲ್ಲಿದ್ದ ಕ್ಷೀಪಣೆಗಳನ್ನು ಒಶಪಡಿಸಿಕೊಂಡು, ಅದೇ ಮಾದರಿಯಲ್ಲಿ ‘ಕಾಂಗ್ರಾವ್ ರಾಕೇಟ್ಸ್’ಗಳನ್ನು ಸ್ಥಾಪಿಸಿದನು. ಟಿಪ್ಪು ಸುಲ್ತಾನರ ಖಡ್ಗ ಹಾಗೂ ಅರಮನೆಯಲ್ಲಿದ್ದ ಇನ್ನೂ ಅನೇಕ ವಸ್ತುಗಳನ್ನು ಬ್ರೀಟಿಷರು ಕೊಂಡೊಯ್ದು ಇಂಗೇಡ್‍ನ ಒಂದು ಮ್ಯೂಜಿಯಂನಲ್ಲಿ ಇಟ್ಟಿದ್ದಾರೆ. ಅವುಗಳು ಇಂದಿಗೂ ಕಾಣಬಹುದಾಗಿದೆ ಎಂದು ಬೆಂಗಳೂರಿನ ಅಪರ ಪೊಲೀಸ್ ಆಯುಕ್ತರಾದ ಎಂ. ನಂಜುಂಡಸ್ವಾಮಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಹಜರತ್ ಟಿಪ್ಪು ಸುಲ್ತಾನರವರ ಕುರಿತು ನಾವೆಲ್ಲರು ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲೆ ಕಲಿತಿದ್ದೇವೆ. ಹೋರಾಟದ ಮೂಲಕ ದೇಶಕ್ಕೆ, ನಾಡಿಗೆ ಹೊಸ-ಹೊಸ ತಂತ್ರಜ್ಞಾನಗಳನ್ನು ನೀಡಿದ್ದಾರೆ. ಸಾಮಾಜ್ಯದ ರಕ್ಷಣೆಗಾಗಿ ವಿರೋಧಿಗಳಾದ ಬ್ರೀಟಿಷ ಕಡೆ ತನ್ನ ಸ್ವಂತ ಮಕ್ಕಳನ್ನೇ ಒತ್ತೆ ಇಟ್ಟ ಇತಿಹಾಸ ಟಿಪ್ಪು ಅವರದ್ದು. ಬ್ರೀಟಿಷರ ನಿದ್ದೆಗೆಡಿಸಿದಲ್ಲದೇ ಅವರ ಕನಸಿನಲ್ಲೂ ಪದೇ-ಪದೇ ಬಂದು ಬಯ ಹುಟ್ಟಿಸುವರೇ ಟಿಪ್ಪು ಸುಲ್ತಾನರು. ಉಳುವವನೇ ಹೊಲದ ಒಡೆಯ ಎಂಬ ವ್ಯವಸ್ಥೆಯನ್ನು ಪ್ರಪ್ರಥಮ ಬಾರಿಗೆ ಜಾರಿಗೆ ತಂದಿರುವುದು ಹಾಗೂ ರೇಷ್ಮೆಯನ್ನು ನಮ್ಮ ನಾಡಿಗೆ ಪರಿಚಯಿಸಿದ್ದೇ ಟಿಪ್ಪು. ಇಂತಹ ಮಹಾನ ನಾಯಕರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ತುಂಬಾ ಸಂತೋಷವಾಗಿದೆ. ಕೊಪ್ಪಳ ನಗರದಲ್ಲಿರುವ ಟಿಪ್ಪು ಸುಲ್ತಾನ ಸರ್ಕಲ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ ಭೂ ಒಡೆತನ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರಿಗೆ 2 ಎಕರೆ ಕೃಷಿ ಭೂಮಿಯನ್ನು ನೀಡಲಾಗಿದೆ. ಸರ್ಕಾರವು ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.
ಸಮಾರಂಭದಲ್ಲಿ ಖಾದ್ರಿ-ವ-ತಸ್ಕೀನಿ ಖತಿಬ್ ವ ಇಮಾಮ್ ಯೂಸೂಫಿಯಾ ಮಸ್ಜಿದ್‍ನ ಮೌಲಾನಾ ಮುಫ್ತಿ ಮಹಮ್ಮದ್ ನಜೀರ್ ಅಹ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ತಹಶೀಲ್ದಾರ ಜೆ.ಬಿ. ಮಜ್ಗಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯರಾದ ಅಮಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಅಜೀಮ್ ಅತ್ತಾರ, ವೀರುಪಾಕ್ಷರೆಡ್ಡಿ ಮೊರನಾಳ, ಅಕ್ಬರ ಪಾಶಾ, ಮಹೆಬೂಬಸಾಬ ಅರಗಂಜಿ, ಗಣ್ಯರಾದ ಡಾ. ಲಕ್ಷ್ಮಣ ಹೂಗಾರ, ಅರ್ಜುನಸಾ ಕಾಟವಾ, ಮುಖಂಡರಾದ ಬಾಶುಸಾಬ ಖತೀಬ, ಇಬ್ರಾಹಿಂಸಾಬ ಅಡ್ಡೆವಾಲೆ, ಕಾಟನ್ ಪಾಶಾ, ಲಾಯಖ್ ಅಲಿ, ಮಹಮ್ಮದ ಹುಸೇನ ಮಂಡಲಗಿರಿ, ಗೌಸಸಾಬ ಸರದಾರ, ಮಹೆಬೂಬ್ ಮಚ್ಚಿ, ಯೂಸುಫ್ ಖಾನ್ ಸೇರೆದಂತೆ ಅನೇಕರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ ದೇಸಾಯಿ ಅವರು ಸರ್ವರನ್ನು ಸ್ವಾಗತಿಸಿದರು. ಸಿ.ಬಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Please follow and like us:
error