ಬ್ರಿಟಿಷ್ ರ ವಿರುದ್ದ ಹೋರಾಡಿದ ಮಹಾನ್ ನಾಯಕ ಟಿಪ್ಪು- ಸೀತಾರಾಂ ಯಚೋರಿ

Koppal ನೋಟ್ ಅಮಾನ್ಯಕರಣದಿಂದ ಬಂಡವಾಳ ಶಾಹಿಳಿಗೆ ಮಾತ್ರ ಲಾಭ.ಚುನಾವಣೆ ಗೆಲ್ಲುವುದಕ್ಕಾಗಿ ಮೋದಿ ಈ ಅಸ್ತ್ರವನ್ನು ಬಳಸಿದ್ದಾರೆ..

ಅಮಾನ್ಯಿಕರಣದಿಂದ ದೇಶದ ಕೋಟ್ಯಾಂತರ ಜನರಿಗೆ ನಷ್ಟವಾಗಿದೆ. ದೇಶ ಮುಂದುವರೆದಿದೆ ಎಂದು ಹೇಳ್ತಾರೆ ಆದರೆ ಹಿಂದುಳಿದಿದೆ.ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಬಡವರು ಕಾರ್ಮಿಕರು ವ್ಯಾಪಾರಸ್ಥರು ನರಳುತ್ತಿದ್ದಾರೆ…..

ನೋಟು ಅಮಾನ್ಯೀಕರಣ ರಫಲೆ ಹಗರಣಕ್ಕಿಂತ ದೊಡ್ಡದು.ಮೋದಿ ದೇಶದಲ್ಲಿ ಅತ್ಯಂತ ಹೊಲಸು ರಾಜಕೀಯ ಮಾಡುತ್ತಿದ್ದಾರೆ ಹಿಂದು ಮುಸ್ಲಿಂರ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಮತಗಳಿಗಾಗಿ ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು.ದೇಶ ಬಡವಾಗುತ್ತಿದೆ. ಹಾಗಾಗಿ ಸೆಕ್ಯುಲರ್ ಸರಕಾರ ಸ್ಥಾಪನೆಯಾಗಬೇಕಿದೆ. ಅಂತಹ ಸರಕಾರಕ್ಕಾಗಿ ಮೋದಿ ಸರಕಾರದ ವಿರುದ್ಧ ಹೋರಾಡಬೇಕಿದೆ…..

ಫಸಲ್ ಭಿಮಾ ಯೋಜನೆಯು ವಿಮಾಕಂಪನಿಗಳಿಗೆ ಲಾಭ ಇದರಿಂದ ರೈತರಿಗೆ ಲಾಭ ಇಲ್ಲ…

ರೈತರ ದುಡ್ಡು ವಿಮಾ ಕಂಪನಿಗಳಿಗೆ ಸೇರುತ್ತಿದೆ. ಈವರೆಗೆ ರೈತರ ಖಾತೆಗೆ ಎಷ್ಟು ಹಣ ಬಂದಿದೆ ಮೋದಿ ಹೇಳಬೇಕು. ದೇಶದಲ್ಲಿ ರೈತರ ಆತ್ಮಹತ್ಯೆ ಬಹಳಷ್ಟು ವೇಗವಾಗಿದೆ. ಮೋದಿಗೆ ಬಹುಶಃ ಇದರ ಬಗ್ಗೆ ಮಾಹಿತಿ ಇಲ್ಲ ಅನಿಸುತ್ತೆ. ಅವರೇನಿದ್ದರೂ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ದುಡಿಯುತ್ತಿದ್ದಾರೆ…

ರಫೆಲ್ ಹಗರಣ ಭೋಪೋರ್ಸ ಹಗರಣಕ್ಕಿಂತ ದೊಡ್ಡದು ಸುಮಾರು ೨೦ ಸಾವಿರದಿಂದ ೩೦ ಸಾವಿರ ಕೋಟಿಯವರೆಗೆ ಹಗರಣವಾಗಿದೆ. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಮಾಡಲು ಇಳಿದ ಮೋದಿ ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆ…

ಹಿಂದೆ‌ ಸಾವಿರ ರೂಪಾಯಿಯಿಂದ ನಡೆಯುತ್ತಿದ್ದದ್ದು ಎರಡು ಸಾವಿರದಿಂದ ನಡೆಯುತ್ತಿದೆ…

ಜಿಎಸ್ಟಿ ಕೂಡ ದೇಶಕ್ಕೆ ನಷ್ಟ ತಂದಿದೆ ಹೊರತು ಲಾಭ ತಂದಿಲ್ಲ. ಜಿಎಸ್ಟಿಯಿಂದ ಎಷ್ಟು ತೆರಿಗೆ ಹಣ ಸಂಗ್ರಹವಾಗಿದೆ ಎಂದು ಮೋದಿ ಹೇಳಲು ಸಿದ್ದವಿಲ್ಲ. ಜಿಎಸ್ಟಿ ಯಿಂದ ರಾಜ್ಯ‌ ಮತ್ತು ಕೇಂದ್ರ ಸರಕಾರಗಳ ನಡುವೆ ಸಾಮಾರಸ್ಯ ಕೆಟ್ಟಿದೆ. ಕೇರಳದಲ್ಲಾದ ಪ್ರವಾಹದ ಹಾನಿಗೆ ಕೇಂದ್ರದ ಮುಂದೆ ಬಿಕ್ಷೇ ಬೇಡುವ ಸ್ಥಿತಿ ರಾಜ್ಯ ಸರಕಾರಕ್ಕೆ ಬಂತು..

೫೯ ನಿಮಿಷಗಳಲ್ಲಿ ಕೋಟಿ ರೂ ಲೋನ್ ಎನ್ನುವುದು ಮೋದಿಯವರ ಮಾತಿನಂತೆಯೇ ಜುಮ್ಲಾ ಆಗಿದೆ..

ಟಿಪ್ಪು ಸುಲ್ತಾನ್ ರದು ಕರ್ನಾಟಕಕ್ಕೆ ಅಷ್ಟೇ ಅಷ್ಟೇ ಅಲ್ಲ ದೇಶಕ್ಕೂ ಕೊಡುಗೆ ಇದೆ. ಬ್ರಿಟಿಷ್ ರ ವಿರುದ್ದ ಹೋರಾಡಿದ ಮಹಾನ್ ನಾಯಕ ಟಿಪ್ಪು…

ಭೂತಕಾಲದ ಕತ್ತಲಲ್ಲಿ ಬದುಕುವುದು ಬೇಡ.. ಜಯಂತಿ ಆಚರಣೆ ಮಾಡುವುದು ಸೂಕ್ತವಾಗಿದೆ. ಇದನ್ನು ವಿರೋಧಿಸುವದು ತಪ್ಪು ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸಿಪಿಐಎಂ ಪ್ರದಾನ ಕಾರ್ಯದರ್ಶಿ
ಸೀತಾರಾಂ ಯಚೋರಿ ಕೊಪ್ಪಳದಲ್ಲಿ ಹೇಳಿಕೆ…

Please follow and like us:
error