ಬೊಟಿಕ್, ಕಸೂತಿ ಮತ್ತು ಎಮ್‍ರೈಡರಿ ಮಾಹಿತಿ ನೀಡಲು ಉತ್ಪಾದಕರಿಗೆ ಸೂಚನೆ

ಕೊಪ್ಪಳ ಅ. ೆ): ಕೊಪ್ಪಳ : ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿರುವ ಬೊಟಿಕ್ ಎಮ್‍ರೈಡರಿ ಹಾಗೂ ಕಸೂತಿ ಘಟಕಗಳ ಮಾಹಿತಿಯನ್ನು ಕ್ರೂಢೀಕರಿಸಲಾಗುತ್ತಿದ್ದು, ಉತ್ಪಾದಕರು ಶೀಘ್ರ ಮಾಹಿತಿ ನೀಡುವಂತೆ ಇಲಾಖಾ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿರುವ ಬೊಟಿಕ್ ಎಮ್‍ರೈಡರಿ ಹಾಗೂ ಕಸೂತಿ ಘಟಕಗಳ ಮಾಹಿತಿಯನ್ನು ಜವಳಿ ಇಲಾಖೆಯಿಂದ ಕ್ರೂಢೀಕರಿಸಲಾಗುತ್ತಿರುವುದರಿಂದ ಉತ್ಪಾದಿಸುತ್ತಿರುವ ಉತ್ಪನ್ನಗಳ ಜೊತೆ ಕೂಡಲೇ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಪ್ಪಳ ಇವರಿಗೆ ಅ. 31 ರೊಳಗಾಗಿ ಮಾಹಿತಿ ನೀಡಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆ ಕಛೇರಿ ದೂರವಾಣಿ ಸಂಖ್ಯೆ 08539-230069 ಕ್ಕೆ ಸಂಪರ್ಕಿಸಲು ೆ ತಿಳಿಸಿದೆ.
=======