ಬೈಕ್ ಮತ್ತು ಬಸ್  ನಡುವೆ ಡಿಕ್ಕಿ ಇಬ್ಬರ ಸಾವು

ಕೊಪ್ಪಳ : ಬೈಕ್ ಮತ್ತು ಕೆಸ್.ಆರ್.ಟಿ.ಸಿ ಬಸ್  ನಡುವೆ 

ಡಿಕ್ಕಿಯಾಗಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಗಾವತಿ ತಾಲೂಕಿನ ಶ್ರೀರಾಮನಗರ್ ಬಳಿ ಘಟನೆ ನಡೆದಿದ್ದು ಮೃತರನ್ನು ಸತೀಶ್ ( 28) ಹಾಗೂ ಜಾಫರ್ (30)  ಎಂದು ಗುರುತಿಸಲಾಗಿದೆ.. ಸತೀಶ್ ಹಾಗೂ ಜಾಫರ್ ಇಬ್ಬರು ಮೆಡಿಕಲ್ ರೆಪ್ರೆಸೆಂಟೇಟಿವ್ಸ್. ಗಂಗಾವತಿ ಇಂದ ಕಾರಟಗಿಗೆ ತೆರಳುತ್ತಿದ್ದ  ದುರ್ಘಟನೆ ಸಂಭವಿಸಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Please follow and like us:
error