ಬೈಕ್ ಗೆ ಟಿಪ್ಪರ್ ಡಿಕ್ಕಿ ಮಹಿಳೆ ಸ್ಥಳದಲ್ಲೆ ಸಾವು

ಗಂಗಾವತಿ : ಟಿಪ್ಪರ್ ಹರಿದು ಮಹಿಳೆಯೋರ್ವರು ಸ್ಥಳದಲ್ಲೆ  ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.  ಅನ್ನಪೂರ್ಣಮ್ಮ ( 33) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಗಂಗಾವತಿ ತಾಲೂಕಿನ ಗೋನಾಳ ಬಳಿ ನಡೆದ ಘಟನೆ. ಮೃತರು ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದವರು. ಕನಕಗಿರಿಯಿಂದ ಮಲ್ಲಾಪುರಕ್ಕೆ ತೆರಳುವಾಗ ರಾಜ್ಯ ಹೆದ್ದಾರಿಯಲ್ಲಿ ನಡೆದ ಘಟನೆ ನಡೆದಿದೆ. ತಮ್ಮನೊಂದಿಗೆ ಹೋಗುತ್ತಿದ್ದ ಮೃತ ಅನ್ನಪೂರ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿದ್ದ 2 ಮಕ್ಕಳು, ತಮ್ಮ ಪಾರಾಗಿದ್ದಾರೆ. ರಸ್ತೆ ಭಾಗದಲ್ಲಿ ಭತ್ತದ ಹುಲ್ಲು ಹಾಕುವುದು ಹಾಗೂ ರಾಶಿ ಹಾಕುವುದರಿಂದ ಪದೇ ಪದೇ ಈ ಭಾಗದಲ್ಲಿ ಈ ರೀತಿಯ ದುರ್ಘಟನೆಗಳು ನಡೆಯುತ್ತಲೇ ಇವೆ. ಆದರೂ ಸಂಬಂಧಪಟ್ಟವರೂ ಯಾರೂ ಇತ್ತಕಡೆ ಗಮನ ಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Please follow and like us:
error