ಬೇವಿನಹಳ್ಳಿ ಗ್ರಾಮ ಪಂಚಾಯತಿ ನೂತನಕಟ್ಟಡದಅಡಿಗಲ್ಲು ಸಮಾರಂಭ

– ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ   ಆರ್.ವಿ.ಗುಮಾಸ್ತೆಯವರಿಂದ

Koppal  ಬೇವಿನಹಳ್ಳಿ ಗ್ರಾಮದಲ್ಲಿಗ್ರಾಮಪಂಚಾಯತಿಯ ನೂತನಕಟ್ಟಡದ ಅಡಿಗಲ್ಲು ಸಮಾರಂಭವನ್ನುಕಿರ್ಲೋಸ್ಕರ್‌ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ   ಆರ್.ವಿ.ಗುಮಾಸ್ತೆಯವರು ನೆರವೇರಿಸಿದರು. ಹೊಸದಾಗಿರಚನೆಯಾದ ಬೇವಿನಹಳ್ಳಿ ಗ್ರಾಮ ಪಂಚಾಯಿತಿಯ ಸ್ವಂತಕಛೇರಿಯನ್ನು ಹೊಂದಲು ಬೇಕಾದಂತಹ ಭೂಮಿ ಖರೀದಿಸಲು ಕಿರ್ಲೋಸ್ಕರ್‌ಕಾರ್ಖಾನೆಯುಇತ್ತೀಚ್ಚಿಗೆಆರ್ಥಿಕ ಸಹಾಯ ಮಾಡಿತ್ತು.

ನೂತನಕಟ್ಟಡದ ಅಡಿಗಲ್ಲು ಸಮಾರಂಭದ ಬಳಿಕ ಮಾತನಾಡಿದ  ಆರ್.ವಿ.ಗುಮಾಸ್ತೆಯವರು ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ವಲಯದ ವಿದ್ಯಾರ್ಥಿಗಳ ವಿದ್ಯಾಭಾಸದ ಮಟ್ಟದಲ್ಲಿ ಸಾಕಷ್ಟು ಸುದಾರಣೆಯಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಹೊಂದಿ ತೇರ್ಗಡೆಯಾಗುತ್ತಿದ್ದಾರೆ, ಇದು ನಿಜಕ್ಕೂ ಪ್ರಶಂಸನೀಯ.ಗ್ರಾಮದಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು, ಪ್ಲ್ಯಾಸ್ಟಿಕ್ ನಿರ್ಮೂಲನೆಗೆ ಪಣತೊಡಬೇಕು, ಎಲ್ಲರೂ ಸಮುದಾಯದಅಭಿವೃದ್ಧಿಗೆ ಕೈಜೋಡಿಸಿದಲ್ಲಿ ಆ ಗ್ರಾಮವು ಮಾದರಿ ಗ್ರಾಮವಾಗಲು ಸಾಧ್ಯವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದಕಿರ್ಲೋಸ್ಕರ್‌ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಪಿ.ನಾರಾಯಣಇವರುಕಾರ್ಖಾನೆಯು ಸಮುದಾಯದ ಏಳಿಗೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಗ್ರಾಮಸ್ಥರುಇದರ ಸದುಪಯೋಗವನ್ನು ಪಡೆಯಬೇಕೆಂದುಕರೆ ನೀಡಿದರು.

ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾದ   ಬಸವರಾಜ ಕೊರವರ್, ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಮಂಜುನಾಥ್ ಪೂಜಾರ್, ಸದಸ್ಯರುಗಳಾದ ಶ್ರೀ ಬಸವರಾಜ ಮಡ್ಡಿ,   ರಾಘವೇಂದ್ರಜೋಷಿ,  ಮುರಳಿ ಬಸಿರಾಳ್, ಶ್ರೀಮತಿ ಗಂಗಮ್ಮ ಬೋವಿ, ಶ್ರೀ ಗಂಗಮ್ಮ ಬಾದರಬಂಡಿ,   ಮೈಲಾರಪ್ಪ,  ನಾಗರಾಜ ಬಾದರಬಂಡಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ   ಮೂರ್ತೆಪ್ಪ, ಪಂಚಾಯತಿಅಭಿವೃದ್ಧಿಅಧಿಕಾರಿಯಾದ ಶ್ರೀಮತಿ ಗೀತಾ ಹಾಗೂ ಗ್ರಾಮದ ಮುಖಂಡರಾದ  ಅಮರೇಗೌಡ ಪಾಟೀಲ್,   ಭೀಮಣ್ಣ ಮೂಲಿಮನಿ,  ಮಾರ್ಕಂಡೆಪ್ಪಅಜಗರ್,   ಮಾರ್ಕಂಡೆಪ್ಪಅಡಗಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ   ಯಮನೂರಪ್ಪಅಡಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Please follow and like us:
error