ಬೇಡಿಕೆ ಮೇರೆಗೆ ಮೇ. 19 ರ ವರೆಗೆ ಮಾವುಮೇಳ ಮುಂದುವರಿಕೆ

ಕೊಪ್ಪಳ ಮೇ. 15 : ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆಯಿಂದ ಕೊಪ್ಪಳ ನಗರದಲ್ಲಿ ಆಯೋಜಿಸಲಾದ ಮಾವು ಮೇಳವನ್ನು ಮೇ 19 ಭಾನವಾರದವರೆಗೆ ಮುಂದುವರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ರೈತರ ಹಾಗೂ ಗ್ರಾಹಕರ ಬೇಡಿಕೆ ಮೇರೆಗೆ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಇದೇ ಮೇ.19 ಭಾನುವಾರದರೆಗೂ (ನಾಲ್ಕುದಿನಗಳ ಮಟ್ಟಿಗೆ) ಮುಂದುವರೆಸಲಾಗುವುದು. ಜಿಲ್ಲೆಯ ಗ್ರಾಹಕರು ಹಾಗೂ ಮಾವು ಬೆಳೆಗಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

Related posts