ಬೇಟಿ ಬಚಾವೋ ಬೇಟಿ ಪಡಾವೋ : ಹೆಸರು ದುರುಪಯೋಗ

ಹೆಣ್ಣು ಮಕ್ಕಳಿಗೆ ರೂ. 2 ಲಕ್ಷ ನಗದು ನೀಡುವ ಕಾರ್ಯಕ್ರಮ ಇಲ್ಲ : ಈರಣ್ಣ ಪಂಚಾಳ್

ಕೊಪ್ಪಳ ಜು. : ಕೊಪ್ಪಳ ಜಿಲ್ಲೆಯಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಹೆಸರನ್ನು ದುರುಪಯೋಗ ಮಾಡುತ್ತಿರುವುದು ಕಂಡುಬರಿತ್ತಿದ್ದು, ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ರೂ. 2 ಲಕ್ಷ ನಗದು ನೀಡುವ ಯಾವುದೇ ತರಹತ ಯೋಜನೆ ಇರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್‌ರವರು ಸ್ಪಷ್ಟಪಡಿಸಿದ್ದಾರೆ.   
ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಸಾರ್ವಜನಿಕರೊಬ್ಬರು ಜುಲೈ. 23 ರಂದು ದೂರವಾಣಿ ಮೂಲಕ ಕರೆ ಮಾಡಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ಹೆಣ್ಣು ಮಕ್ಕಳಿಗೆ ರೂ. 2 ಲಕ್ಷ ನಗದು ನೀಡುತ್ತಾರೆಂದು ಸುಳ್ಳು ವದಂತಿ ಸಾರ್ವಜನಿಕರಿಗೆ ನೀಡಿರುತ್ತಾರೆ.  ಆದರೆ ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ರೂ. 2 ಲಕ್ಷ ನಗದು ನೀಡುವಂತಹ ಯಾವುದೇ ಕಾರ್ಯಕ್ರಮ ಇರುವುದಿಲ್ಲ.  ಮುಗ್ಧ ಹೆಣ್ಣು ಮಕ್ಕಳಿಗೆ ಸುಳ್ಳು ಭರವಸೆ ನೀಡಿ ಮೋಸ ಮಾಡುವುದು ಕಾನೂನು ಬಾಹಿರವಾಗಿರುತ್ತದೆ.  ಇಂತಹ ಘಟಣೆಗಳು ಜಿಲ್ಲೆಗಳಲ್ಲಿ ಮರುಗಳಿಸದಂತೆ ಪ್ರಧಾನ ಕಛೇರಿಯಯಿಂದ ಸಾರ್ವಜನಿಕರಿಗೆ ವಿಶೇಷ ಮಾಹಿತಿ ಹಾಗೂ ಸೂಚನೆಯನ್ನು ಹೊರಡಿಸಲಾಗಿದೆ.   
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿಯಲ್ಲಿ ರೂ. 2 ಲಕ್ಷ ನಗದು ಉತ್ತೆÃಜನ ನೀಡುವುದಾಗಿ ಕೆಲವು ಅನಧಿಕೃತ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ವ್ಯಕ್ತಿಗಳು ಹೆಣ್ಣು ಮಕ್ಕಳ ವೈಯಕ್ತಿಕ ಮಾಹಿತಿಯನ್ನು ನಮೂನೆಯಲ್ಲಿ ಪಡೆದು ವಂಚಿಸುತ್ತಿರುವುದು ಭಾತರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವಾಲಯ ಗಮನಕ್ಕೆ ಬಂದಿರುತ್ತದೆ.  
ಸಾರ್ವಜನಿಕರ ಗಮನಕ್ಕೆ;
  ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿಯಲ್ಲಿ ಯಾರಿಗೂ ನಗದು ವಿತರಣೆ ಮಾಡುವ ಕಾರ್ಯಕ್ರಮ ಇರುವುದಿಲ್ಲ.  ಅನಧಿಕೃತ ಸಂಸ್ಥೆಗಳು/ವ್ಯಕ್ತಿಗಳು ಈ ಯೋಜನೆಯಡಿ ಹಣವನ್ನು ನೀಡುವುದಾಗಿ ಭರವಸೆ ನೀಡಿ ಸಾರ್ವಜನಿಕರನ್ನು ಮೋಸ ಮಾಡುತ್ತಿವೆ.  ಈ ರೀತಿ ವಂಚನೆಯನ್ನು ಅಥವಾ ಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.  ಇಂತಹ ವಂಚನೆಗಳು ಬೆಳಕಿಗೆ ಬಂದಾಗಲೆಲ್ಲಾ ಎಫ್.ಐ.ಆರ್.ಗಳನ್ನು ಈಗಾಗಲೇ ನೋಂದಾಯಿಸಲಾಗಿದೆ.  ಇಂತಹ ವಂಚಕರ ಬಲೆಗೆ ಬೀಳದಂತೆ ಸಾರ್ವಜನಿಕರಿಗೆ ಸಲಹೆ ಅಥವಾ ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ವಂಚಕರು ನಮೂನೆಯಲ್ಲಿ ಕೋರುವ ಯಾವುದೇ ವೈಯಕ್ತಿಕ ವಿವರಗಳನ್ನು ಅಂದರೆ ಆಧಾರ್ ಕಾರ್ಡ, ಬ್ಯಾಂಕ್ ವಿವರಗಳು, ದೂರವಾಣಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐ.ಡಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಬಾರದು.  ನಿಮ್ಮ ಸ್ನೆÃಹಿತರು, ಸಂಬಂಧಿಕರು ಹಾಗೂ ನಿಮ್ಮನ್ನು ಸಂಪರ್ಕಿಸುವ ಎಲ್ಲರಿಗೂ ಇಂತಹ ವಂಚಕರ ವಿರುದ್ಧ ಜಾಗರೂಕರಾಗಿರಲು ಭಾತರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವಾಲಯವು ಸೂಚಿಸಿದೆ ಎಂದು ಪ್ರಕಟಣೆ ತಿಳಿಸಿದೆ. 

Please follow and like us:
error