ಬೆಳೆ ಸಾಲ ಮನ್ನಾ ಯೋಜನೆ : ಸ್ವಯಂ ಘೋಷಣಾ ಪತ್ರ ನೀಡಲು ಕೊನೆಯ ಅವಕಾಶ

ಕೊಪ್ಪಳ ಜ.  : ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಲು ಜ. ೧೫ ರವರೆಗೆ ಕೊನೆಯ ಅವಕಾಶವನ್ನು ಕಲ್ಪಿಸಲಾಗಿದೆ.  
ರಾಜ್ಯ ಸರ್ಕಾದರ ಮಹಾತ್ವಾಕಾಂಕ್ಷಿ ಯೋಜನೆಯಾದ ರೈತರ ಬೆಳೆ ಸಾಲ ಮನ್ನಾ ಯೋಜನೆ ಜಾರಿಯಲ್ಲಿದ್ದು, ರೈತರು ತಮ್ಮ ಸಾಲಕ್ಕೆ ಸಂಬಂಧಿಸಿದ ಆಧಾರಕಾರ್ಡ, ಪಡಿತರ ಚೀಟಿ ಹಾಗೂ ಸರ್ವೆ ನಂಬರಿನ ವಿವರಗಳನ್ನು ಸಂಬಂಧಪಟ್ಟ ಬ್ಯಾಂಕಿನಲ್ಲಿ ಹಾಗೂ ನಾಡಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಲ್ಲಿಸುವಂತೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಜಿಲ್ಲಾಡಳಿತವು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಮುಖಾಂತರ ರೈತರ ಮನೆ ಬಾಗಿಲೆಗೆ ತೆರಳಿ ಅವರಿಂದ ಸ್ವಯಂ ಘೋಷಣಾ ಪತ್ರಗಳನ್ನು ಪಡೆದು ಸ್ವತಃ ಇಲಾಖೆಯವರೆ ಬ್ಯಾಂಕಿಗೆ ಸಲ್ಲಿಸುವ ಕ್ರಮಕ್ಕೂ ಸಹ ಮುಂದಾಗಿದೆ. ಆದರೆ ರೈತರು ತಮ್ಮ ಘೋಷಣಾ ಪತ್ರಗಳನ್ನು ಸಲ್ಲಿಸಲು ಜ. ೧೫ ಕೊನೆಯ ದಿನವಾಗಿರುತ್ತದೆ.
ಜಿಲ್ಲೆಯ ವಿವಿಧ ಬ್ಯಾಂಕಗಳಲ್ಲಿ ಸಾಲ ಪಡೆದ ಒಟ್ಟು ರೈತರ ವಿವರ ಇಂತಿದೆ. ಜಿಲ್ಲೆಯ ವಿವಿಧ ಬ್ಯಾಂಕಗಳಲ್ಲಿ ಸಾಲ ಪಡೆದ ಒಟ್ಟು ರೈತರ ಸಂಖ್ಯೆ-೬೮೬೬೬, ಘೋಷಣಾ ಪತ್ರ ಸಲ್ಲಿಸಿದ ರೈತರ ಸಂಖ್ಯೆ-೪೯೯೦೭ (ಶೇ.೭೨.೬೮%), ಬಾಕಿ ಉಳಿದ ಸಂಖ್ಯೆ-೧೮೭೫೯, ಆಗಿದ್ದು, ಜಿಲ್ಲೆಯ ಪ್ರಮುಖ ಬ್ಯಾಂಕ್ (ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಲ್ಲಿ ೭೮೧೪, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ – ೬೬೨೨, ಸಿಂಡಿಕೇಟ್ ಬ್ಯಾಂಕ್‌ನಲ್ಲಿ-೧೯೫೨) ಗಳಲ್ಲಿ ರೈತರು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸದೇ ಇರುವುದು ಕಂಡುಬಂದಿದ್ದು, ಇತರ ಹೊರತಾಗಿ ಬೇರೆ-ಬೇರೆ ವಾಣಿಜ್ಯ ಬ್ಯಾಂಕಿನಲ್ಲಿಯೂ ಕೂಡ ರೈತರು ಸ್ವ-ಆಸಕ್ತಿಯಿಂದ ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸದೇ ಇರುವುದು ಕಂಡುಬಂದಿದ್ದು, ಜಿಲ್ಲೆಯ ಯಾವ ರೈತರು ಇದವರೆಗೂ ಸ್ವಯಂ ಘೋಷಣಾ ಪತ್ರ ಸಲ್ಲಿಸಿಲ್ಲವೋ ಅಂತಹ ರೈತರು ಜ. ೧೫ ರೊಳಗಾಗಿ ಪಡಿತರ ಚೀಟಿ, ಆಧಾರ ಕಾರ್ಡ ಝರಾಕ್ಸ್ ಪ್ರತಿ ಹಾಗೂ ಸರ್ವೇ ನಂಬರಿನ ಮಾಹಿತಿಯೊಂದಿಗೆ ಸ್ವಯಂ ಘೋಷಣಾ ಪತ್ರವನ್ನು ಸಂಬಂಧಪಟ್ಟ ಬ್ಯಾಂಕ ಅಥವಾ ನಾಡ ಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡಿ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್  ಮನವಿ ಮಾಡಿದ್ದಾರೆ.

Please follow and like us:
error