ಬೆಳೆ ಸಾಲ ಮನ್ನಾಯೋಜನೆಯಡಿ ನೊಂದಾಯಿಸಿಕೊಳ್ಳಿ : ಪಿ. ಸುನೀಲ್‌ಕುಮಾರ್

ಕೊಪ್ಪಳ ಡಿ. : ಕೊಪ್ಪಳ ಜಿಲ್ಲೆಯರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದ ಬೆಳೆ ಸಾಲ ಮನ್ನಾಯೋಜನೆಯಡಿ ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್‌ಅವರು ತಿಳಿಸಿದ್ದಾರೆ.
ಕರ್ನಾಟಕ ಸರಕಾರವು ವಾಣಿಜ್ಯ ಬ್ಯಾಂಕಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಒಂದುತಂತ್ರಾಂಶವನ್ನುತಂದಿದ್ದು, ಅದಕ್ಕಾಗಿ ಕೊಪ್ಪಳ ಜಿಲ್ಲೆಯಲ್ಲಿಜಾರಿ ಮಾಡಲು ಕೆಲ ನಿರ್ದೇಶನಗಳನ್ನು ನೀಡಿರುತ್ತದೆ. ಅದಕ್ಕಾಗಿಜಿಲ್ಲೆಯಎಲ್ಲಾರೈತ ಬಾಂಧವರು ಬೆಳೆ ಸಾಲ ಮನ್ನಾಯೋಜನೆಯಡಿ ನೊಂದಾಯಿಸಿಕೊಳ್ಳಬೇಕು.
ಬೆಳೆ ಸಾಲ ಪಡೆದ ಪ್ರತಿಯೊಬ್ಬರೈತರುತಾವು ಸಾಲ ಪಡೆದ ವಾಣಿಜ್ಯ ಬಾಂಕುಗಳಿಗೆ ಬಂದು ಡಿ.೧೫ ರಿಂದತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ.ಈ ಯೋಜನೆಯಡಿರೈತರುತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಿದ್ದು, ಈ ಯೋಜನೆಗೆ ಹೆಸರು ನೊಂದಾಯಿಸಲು ಡಿ. ೧೫ ರಿಂದ ೨೮ ರವರೆಗೆ ನಿಗಧಿಪಡಿಸಿದೆ. ಈ ಪ್ರಯುಕ್ತ ಬ್ಯಾಂಕುಗಳ ಕಾರ್ಯ ವೇಳೆಯ ಸಮಯದಯಾವುದೇ ದಿನದಲ್ಲಿ ಬಂದುರೈತರು ಸಾಲ ಪಡೆದ ಬ್ಯಾಂಕ್ ಶಾಖೆಗಳಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು. ಪ್ರತಿಯೊಬ್ಬ ಬೆಳೆ ಸಾಲ ಪಡೆದರೈತರುಕಡ್ಡಾಯವಾಗಿತಮ್ಮಆಧಾರಕಾರ್ಡ, ರೇಷನ್‌ಕಾರ್ಡ ನಕಲು ಪ್ರತಿಗಳನ್ನು ಮತ್ತುತಾವು ಸಾಲ ಪಡೆದ ಸರ್ವೆ ನಂಬರನ ಮಾಹಿತಿತಪ್ಪದೇ ಸಲ್ಲಿಸುವುದು.ಪಹಣಿ ಪತ್ರಿಕೆ ಸಲ್ಲಿಸುವಅವಶ್ಯಕತೆಇರುವುದಿಲ್ಲ.ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿ ದಿನ ಕನಿಷ್ಠ ೪೦ ರೈತರ ಹೆಸರುಗಳನ್ನು ನೊಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.ತದನಂತರರೈತರಿಗೆಕ್ರಮ ಬದ್ಧವಾಗಿಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‌ಗಳನ್ನು ನೀಡಿದ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ರೈತರ ಸ್ವಯಂದೃಢೀಕರಣ ಪತ್ರದೊಂದಿಗೆಆಧಾರ್‌ಕಾರ್ಡ, ಪಡಿತರ ಚೀಟಿಗಳ ನಕಲು ಮತ್ತು ಭೂಮಿಯ ಸರ್ವೆ ನಂಬರ ವಿವರಗಳನ್ನು ಒದಗಿಸಬೇಕು.
ವಾಣಿಜ್ಯ ಬ್ಯಾಂಕ್ ಸಾಲಾ ಮನ್ನಾಕ್ಕೆಅರ್ಹತೆ : ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದಿರುವರೈತರಿಗೆಬೆಳೆಸಾಲ ಮನ್ನಾಯೋಜನೆಯ ಲಾಭ ಪಡೆಯಲುಇರಬೇಕಾದಅರ್ಹತೆಗಳನ್ನ ಸರಕಾರದಿಂದ ನಿಗದಿಪಡಿಸಲಾಗಿದ್ದು, ಅವುಗಳು ಇಂತಿವೆ. ೦೧-೦೪-೨೦೦೯ ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು ಮತ್ತು ೩೧-೧೨-೨೦೧೭ರ ವರೆಗೆ ಬಾಕಿ ಇರುವ ಬೆಳೆ ಸಾಲಗಳು ಅಂದರೆ ಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್.ಪಿ.ಎ (ನಾನ್ ಪರ್‌ಫಾರ್ಮಿಂಗ್‌ಅಸ್ಸೇಟ್) ಸಾಲಗಳು ಅರ್ಹವಾಗಿರುತ್ತವೆ.ಕೇವಲ ವೈಯಕ್ತಿಕ ಬೆಳೆ ಸಾಲ ಪಡೆದರೈತರು ಮಾತ್ರಅರ್ಹರಿರುತ್ತಾರೆ.ಒಂದುಕುಟುಂಬವು (ಅಂದರೆಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ ೨.೦೦ ಲಕ್ಷದ ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲುಅರ್ಹರಿರುತ್ತಾರೆ.ಇದಕ್ಕಾಗಿ ದಿನಾಂಕ: ೦೫-೦೭-೨೦೧೮ ಕ್ಕಿಂತ ಮುಂಚಿತವಾಗಿ ಪಡೆದರೇಷನ್‌ಕಾರ್ಡನ್ನುಕಡ್ಡಾಯವಾಗಿ ಸಲ್ಲಿಸಬೇಕುಅಂದಾಗ ಮಾತ್ರ ಪರಿಗಣಿಸಲಾಗುವುದು. ಯಾವರೈತರು ವಾರ್ಷಿಕಆದಾಯತೆರಿಗೆ ಪಾವತಿದಾರರೋ ಮತ್ತುರಾಜ್ಯ, ಕೇಂದ್ರ ಸರಕಾರಿ, ಅರೆ ಸರಕಾರಿ, ಸರಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ (ಪಿ.ಎಸ್.ಯು-ಪಬ್ಲೀಕ್ ಸೆಕ್ಟರ್‌ಅಂಡರ್‌ಟಾಕಿಂಗ್) ಕಾರ್ಯನಿರ್ವಹಿಸುತ್ತಿರುವ ನೌಕರರು ಈ ಬೆಳೆ ಸಾಲ ಮನ್ನಾಯೋಜನೆಯಡಿಅರ್ಹರಿರುವುದಿಲ್ಲ.ಕೇಂದ್ರ ಮತ್ತುರಾಜ್ಯ ಸರಕಾರದಿಂದ ಪ್ರತಿ ಮಾಹೆ ೧೫,೦೦೦/- ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಈ ಯೋಜನೆಯಡಿಅರ್ಹರಿರುವುದಿಲ್ಲ.ಈ ಮಿತಿಯು ಮಾಜಿ ಸೈನಿಕರಿಗೆಅನ್ವಯಿಸುವುದಿಲ್ಲ.ಸಹಕಾರಿ ಬ್ಯಾಂಕಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆ ಸಾಲ ಮನ್ನಾಯೋಜನೆಯಡಿಅರ್ಹರಿರುವುದಿಲ್ಲ.ಅರ್ಹರಿರುವಎಲ್ಲಾರೈತರಿಗೆ ಸಾಲ ಮನ್ನಾಯೋಜನೆಯಡಿತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೊಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಲಾಗಿದ್ದು, ರೈತರುಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತರೀತಿಯಿಂದ ಸರತಿ ಸಾಲಿನಲ್ಲಿ ನಿಂತುತಮ್ಮ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಇದರ ಲಾಭವನ್ನು ಪಡೆಯಲುಕೋರಿದೆ.ಪ್ರತಿ ಬ್ಯಾಂಕ್ ಶಾಖೆಯಲ್ಲಿಒಬ್ಬಗ್ರಾಮ ಲೆಕ್ಕಾಧಿಕಾರಿ ಹಾಗೂ ಪೋಲೀಸ್ ಬಂದೋಬಸ್ತನ್ನುಕೂಡ ನೀಡಲಾಗಿದೆ.ಬೆಳೆ ಸಾಲ ಮನ್ನಾಯೋಜನೆಯನ್ನು ಯಶಸ್ವಿಗೊಳಿಸಲು ಕೋರಿದೆ.ರೈತರಿಗೆಯಾವುದಾದರೂಗೊಂದಲ ಅಥವಾ ಸಂದೇಹಗಳಿದ್ದಲ್ಲಿ, ಜಿಲ್ಲಾಧಿಕಾರಿಗಳ ಕಛೇರಿಯ ಸಹಾಯವಾಣಿ ಸಂಖ್ಯೆ: ೦೮೫೩೯-೨೨೦೮೫೪ ಕ್ಕೆ ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಈ ಎಲ್ಲಾ ಸೂಚನೆಗಳನ್ನು ಪಾಲಿಸಿ, ಬೆಳೆ ಸಾಲ ಮನ್ನಾಯೋಜನೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲೆಯರೈತರಲ್ಲಿಕೋರಿದೆ.
ವಾಣಿಜ್ಯ ಬ್ಯಾಂಕ್‌ಸಾಲ ಪಡೆದಿರುವರೈತರ ವಿವಿರ : ಸರ್ಕಾರದಆದೇಶ ದಿನಾಂಕ:೦೬.೦೯.೨೦೧೮ ರಲ್ಲಿ ಕೊಪ್ಪಳ ಜಿಲ್ಲೆಯ ಬೆಳೆ ಸಾಲ ಪಡೆದಿರುವರೈತರ ಸಾಲ ಮನ್ನಾ ಮಾಡುವ ಸದುದ್ದೇಶದಿಂದಜಿಲ್ಲೆಯಲ್ಲಿರುವ ೧೪೭ ವಾಣಿಜ್ಯ ಬ್ಯಾಂಕ್ ಗಳಲ್ಲಿ ಬೆಳೆ ಸಾಲ ಪಡೆದಿರುವ ೬೭೫೦೭ ರೈತರ ಸಾಲ ಮನ್ನಾ ಮಾಡುವದೂಷ್ಠಿಯಿಂದಕಾರ್ಯತಂತ್ರರೂಪಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದಿರುವರೈತರ ವಿವರಇಂತಿದೆ.

ಪ್ರತಿ ೫೦೦ ಕ್ಕಿಂತ ಹೆಚ್ಚಿನ ಸಂಖ್ಯೆಇರುವ ಬ್ಯಾಂಕಿನಲ್ಲಿರೈತರುತಮ್ಮ ದಾಖಲೆಗಳನ್ನು ಸಲ್ಲಿಸಿ ಹೆಸರು ನೊಂದಾಯಿಸಲು ನೂಕು ನುಗ್ಗಲು ಉಂಟಾಗದಂತೆಅಗತ್ಯ ಬಂದೋಬಸ್ತ ಒದಗಿಸಲು ಈಗಾಗಲೇಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಲಾಗಿದೆ.ಬ್ಯಾಂಕಗಳಲ್ಲಿ ರೈತರು ಶಾಂತಿಯುತವಾಗಿ ಸರತಿ ಸಾಲಿನಲ್ಲಿ ನಿಂತುತಮ್ಮ ದಾಖಲೆಗಳನ್ನು ಸಲ್ಲಿಸಲುಅನುಕೂಲಕರ ವಾತಾವರಣಕಲ್ಪಿಸಲುಒಬ್ಬಕಂದಾಯ ಇಲಾಖೆ ಸಿಬ್ಬಂದಿ ಹಾಜರಿರುವಂತೆಕಟ್ಟುನಿಟ್ಟಿನಆದೇಶ ಹೊರಡಿಸಲಾಗಿದೆ.ಸಂಬಂಧಿಸಿದ ತಹಶೀಲ್ದಾರರು ಕೂಡ ಪರಿಸ್ಥಿತಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರೈತರಿಗಾಗಿ ಸಹಾಯವಾಣಿತೆರೆಯಲಾಗಿದ್ದು, ರೈತರು ಸದುಪಯೋಗ ಪಡಿದುಕೊಳ್ಳಬಹುದಾಗಿದೆ.
ಸಹಕಾರಿಸಾಲ ಮನ್ನಾ : ಸರ್ಕಾರದಆದೇಶ ಮೂಲಕ ರಾಜ್ಯದ ಸಹಕಾರ ಸಂಸ್ಥೆಗಳು/ ಬ್ಯಾಂಕುಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ದಿನಾಂಕ ೧೦-೦೭-೨೦೧೮ ಕ್ಕೆ ಹೊಂದಿರುವ ಹೊರಬಾಕಿ ಮೊತ್ತದಲ್ಲಿಒಂದುರೈತಕುಟುಂಬಕ್ಕೆಗರಿಷ್ಠ ರೂ. ೧.೦೦ ಲಕ್ಷಗಳವರೆಗಿನ ಸಾಲವನ್ನು ಮನ್ನಾ ಮಾಡಿಆದೇಶ ಹೊರಡಿಸಿರುತ್ತದೆ.ಬೆಳೆ ಸಾಲ ಪಡೆದರೈತರು ಸರ್ಕಾರಿ, ಸಹಕಾರಿ ಮತ್ತುಇತರೆಕ್ಷೇತ್ರದ ನೌಕರರಾಗಿದ್ದು, ಪ್ರತಿ ತಿಂಗಳು ಒಟ್ಟಾರೆರೂ.೨೦೦೦೦/- ಕ್ಕಿಂತ ಹೆಚ್ಚಿನ ವೇತನ/ ಪಿಂಚಣಿ ಪಡೆಯುತ್ತಿದ್ದಲ್ಲಿ ಹಾಗೂ ಕಳೆದ ೩ ವರ್ಷಗಳಲ್ಲಿ ಒಂದು ವರ್ಷಆದಾಯತೆರಿಗೆ ಪಾವತಿಸಿದ್ದಲ್ಲಿ ಅಂತಹರೈತರಿಗೆ ಈ ಯೋಜನೆಅನ್ವಯವಾಗುವುದಿಲ್ಲ.ಆ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ದಿನಾಂಕ ೧೦-೦೭-೨೦೧೮ ಕ್ಕೆ ೨೩೯೭೬ ರೈತರ ರೂ.೧೨೧೬೮.೧೦ ಲಕ್ಷಗಳ ಹೊರಬಾಕಿ ಸಾಲವಿದ್ದು, ಆ ಪೈಕಿ ರೂ.೧.೦೦ ಲಕ್ಷಗಳವರೆಗಿನ ಸಾಲಮನ್ನಾ ಮೊತ್ತವು ರೂ.೧೦೪೧೦.೩೪ ಲಕ್ಷಇರುತ್ತದೆ.
ಕಂದಾಯಇಲಾಖೆಯು ಅಭಿವೃದ್ದಿಪಡಿಸಿದ ತಂತ್ರಾಂಶದಲ್ಲಿ ಸಾಲಮನ್ನಾ ಮಾಹಿತಿಯನ್ನು ಅಳವಡಿಸಲು ನಿರ್ದೇಶಿಸಿದ ಮೇರೆಗೆ ಕೊಪ್ಪಳ ಜಿಲ್ಲೆಯಒಟ್ಟು ೯೮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ೫೨ ಕಾಲಂಗಳಲ್ಲಿ ರೈತ ಸದಸ್ಯರ ಮಾಹಿತಿ ಹಾಗೂ ಫಲಾನುಭವಿ ರೈತ ಸದಸ್ಯರ ಸ್ವಯಂದೃಢೀಕರಣ ಫಾರಂಗಳನ್ನು ಪಡೆದುಡಾಟಾಎಂಟ್ರಿಕಾರ್ಯವನ್ನು ಪ್ರಾರಂಭಿಸಲಾಗಿರುತ್ತದೆ. ಸದರಿ ಮಾಹಿತಿಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅವರಿಗೆ ನೀಡಿದ ಲಾಗಿನ್‌ನಿಂದತಂತ್ರಾಂಶದಲ್ಲಿಅಪ್‌ಲೋಡ್ ಮಾಡಿದ್ದು, ನಂತರ ಡಿ.ಸಿ.ಸಿ. ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಸಹಕಾರಅಭಿವೃದ್ದಿ ಅಧಿಕಾರಿಗಳು ಮಾಹಿತಿಯನ್ನು ಪರಿಶೀಲಿಸಿ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಸಹಕಾರಿ ಬ್ಯಾಂಕ್‌ಸಾಲ ಪಡೆದಿರುವರೈತರ ವಿವಿರ : ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವರೈತರ ವಿವಿರಇಂತಿದೆ.ಕೊಪ್ಪಳಜಿಲ್ಲೆಯಲ್ಲಿ ದಿನಾಂಕ: ೧೦-೭-೨೦೧೮ ರಿಂದ ನವಂಬರ್ ೨೦೧೮ ರವರೆಗಿನಒಟ್ಟು ೨೮೯೩ ಫಲಾನುಭವಿಗಳ ಮಾಹಿತಿಯನ್ನುತಂತ್ರಾಂಶದಲ್ಲಿಅಪ್‌ಲೋಡ್ ಮಾಡಲಾಗಿದ್ದು, ಆರ್.ಡಿ.ಸಿ.ಸಿ ಬ್ಯಾಂಕುಗಳ ಶಾಖಾ ವ್ಯವಸ್ಥಾಪಕರು ಮತ್ತುತಾಲೂಕಾ ಸಹಕಾರಅಭಿವೃದ್ಧಿ ಅಧಿಕಾರಿಗಳು ಅನುಮೋದಿಸಿರುತ್ತಾರೆ.ಆ ಪೈಕಿ ೪೪೨ ರೈತರ ರೂ.೨೨೭.೧೯ ಲಕ್ಷಗಳ ಮೊತ್ತವು ಸರ್ಕಾರದಿಂದ ಫಲಾನುಭವಿ ರೈತ ಸದಸ್ಯರ ಉಳಿತಾಯ ಖಾತೆಗೆಜಮಾ ಮಾಡಲಾಗಿರುತ್ತದೆ. ವಿವರಈ ಕೆಳಗಿನಂತಿದೆ.

Please follow and like us:
error