ಬೆಳೆ ನಾಶಕ್ಕೆ ಪರಿಹಾರ ಒದಗಿಸಲು ಕಾಂಗ್ರೆಸ್ ಮುಖಂಡರು ಮನವಿ

 


ಕೊಪ್ಪಳ: ಕಳೆದ ಮೂರು ದಿನಗಳ ಹಿಂದೆ ಕೊಪ್ಪಳದ ಗಂಗಾವತಿ,ಕನಕಗಿರಿ, ಕಾರಟಗಿ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆಗೆ ಭತ್ತದ ಬೆಳೆ ಅಪಾರ ನಷ್ಟವಾಗಿದ್ದು, ಸೂಕ್ತ ಪರಿಹಾರ ಹಾಗೂ ಭತ್ತ ಕಟಾವು ಯಂತ್ರವನ್ನು ಒದಗಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಶಾಸಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಏಪ್ರಿಲ್ ೭ ರಂದು ಸಂಜೆ ಅಕಾಲಿಕ ಗಾಳಿ ಸಮೇತ ಮಳೆ ಸುರಿದ ಹಿನ್ನೆಲೆ ಅಪಾರ ಪ್ರಮಾಣ ಬೆಳೆ ನಷ್ಟವಾಗಿದೆ. ಸಾವಿರ ಎಕರೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದೆ. ಕಳೆದ ಸಾರಿ ಬೆಳೆ ನಷ್ಟವಾದಾಗ ನಾನು ವಿಶೇಷ ಪ್ಯಾಕೇಜ್ ಅಡಿ ಹೆಕ್ಟರ್ ಗೆ ₹ ೨೫ ಸಾವಿರ ನೀಡಲಾಗಿತ್ತು. ಕಳೆದ ಬಾರಿಗಿಂತ ಈ ಸಲ ಹೆಚ್ಚು ನಷ್ಟವಾಗಿದೆ. ಹೇಕ್ಟರ್ ಗೆ ₹೪೦ ಸಾವಿರ ನೀಡಬೇಕು ಹಾಗೂ ಕಟಾವು ಯಂತ್ರ ಒದಗಿಸಬೇಕು ಅಂತಾ ಒತ್ತಾಯಿಸಿ ಡಿಸಿ ಸುನೀಲ್ ಕುಮಾರ್ ಗೆ ಕಾಂಗ್ರೆಸ್ ಮುಖಂಡರ ಮನವಿ ಸಲ್ಲಿಸಿದ್ರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ, ಶಾಸಕರಾದ ಅಮರೇಗೌಡ ಬಯ್ಯಪೂರ, ರಾಘವೆಂದ್ರ ಕೆ ಹಿಟ್ನಾಳ ಮತ್ತು ರಾಜಶೇಖರ ಹಿಟ್ನಾಳ ,ಕಾಟನ್ ಪಾಷಾ ಕುರಗೋಡ ರವಿ ಸೇರಿದಂತೆ ಕಾಂಗ್ರೆಸ್ ‌ಕಾರ್ಯಕರ್ತರಯ ಇದ್ದರು.

Please follow and like us:
error