ಬೆಳೆ ಕಟಾವು ಸಮೀಕ್ಷೆ ಕೈಗೊಳ್ಳದಿದ್ದಲ್ಲಿ ಶಿಸ್ತು ಕ್ರಮ : ಪಿ. ಸುನೀಲ್ ಕುಮಾರ್

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆ ಕಟಾವು : ಸಭೆ

ಕೊಪ್ಪಳ ಜ. : ಬೆಳೆ ಕಟಾವುಯಡಿ ನಿಗದಿತ ಅವಧಿಯೊಳಗೆ ಸಮೀಕ್ಷೆ ಕೈಗೊಳ್ಳದಿದ್ದಲ್ಲಿ ಮತ್ತು ನಷ್ಟಗೊಳಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಜಿಲ್ಲೆಯ ಗ್ರಾ.ಪಂ. ಪಿಡಿಓ, ತಾ.ಪಂ. ಇಓ., ತಹಶೀಲ್ದಾರ, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆ ಕಟಾವು ಕುರಿತು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಸೋಮವಾರದಂದು ಆಯೋಜಿಸಲಾದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಅನುಕೂಲಕ್ಕಾಗಿ “ಬೆಳೆ ದರ್ಶಕ ಆ್ಯಪ್” ಇದೆ. ಇದರ ಉದ್ದೇಶಗಳು ಮೊದಲಿಗೆ ರೈತರಿಗೆ ತಿಳಿಸಬೇಕು. ಬೆಳೆ ನಷ್ಟ, ಕಟಾವು ಇತ್ಯಾದಿ ಕುರಿತು ಕೆಲ ಅಧಿಕಾರಿಗಳು ಅಂದಾಜು ಪಟ್ಟಿಯನ್ನು ನೀಡುತ್ತಿದ್ದಾರೆ. ಬೆಳೆ ನಷ್ಟವಾಗಿದ್ದಲ್ಲಿ ಸರ್ವೆ ಮಾಡಿ ಪಟ್ಟಿ ತಯಾರಿಸಬೇಕು. ಯಾವುದೇ ಸಮಸ್ಯೆಗಳೊಂದಿಗೆ ರೈತರು ಕರೆ ಮಾಡಿದಾಗ ಅದಕ್ಕೆ ಶೀಘ್ರ ಸ್ಪಂಧಿಸಬೇಕು. ಈ ಕುರಿತು ಕೃಷಿ ಇಲಾಖೆ ಮತ್ತು ಅಂಕಿ ಸಂಖ್ಯೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ರೈತರ ಕರೆಗಳಿಗೆ ಸ್ಪಂಧಿಸದಿರುವವರ ಮಾಹಿತಿಯನ್ನು ಪಡೆದು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಿ. ಅಲ್ಲದೇ ಅಧಿಕಾರಿಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುವುದರ ಕುರಿತು ಹೋಬಳಿವಾರು ಪರಿಶೀಲಿಸಲಾಗುವುದು. ನೀರ್ಲಕ್ಷ್ಯತನ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಳೆ ಕಟಾವು ನಮೂನೆ-1 ರಲ್ಲಿ ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕು. ಮೂಲ ಕಾರ್ಯಕರ್ತರು ಕಡ್ಡಾಯವಾಗಿ ಬೆಳೆ ಕಟಾವಿನ ಸಮೀಕ್ಷೆಗೆ ಹೋಗಬೇಕು. ಸಮೀಕ್ಷೆಗೆ ನಿಗದಿ ಪಡಿಸಿದ ಬೆಳೆಗಳ ಮೇಲೆ ಸಮೀಕ್ಷೆಯನ್ನು ಮಾಡಬೇಕು. ಯಾವುದೇ ಬದಲಾವಣೆ ಮಾಡುವಂತಿಲ್ಲ. ಬೆಳೆ ಕಟಾವಿನ ಸಮೀಕ್ಷೆ ಕುರಿತು ಕಂಪನಿಯವರಿಗೆ ಕಡ್ಡಾಯವಾಗಿ ತಿಳಿಸುವುದು ಮೂಲ ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಮ್ಯಾನುವಲ್‍ಗೆ ಅವಕಾಶ ಇರುವದಿಲ್ಲ. ಇಳುವರಿಯನ್ನು ದಾಖಲಾತಿ ಮಾಡುವಾಗ ಎಚ್ಚರಿಕೆವಹಿಸಿ. ರೈತರ ಅನುಮತಿ ಪಡೆಯದೇ ಬೆಳೆ ಕಟಾವು ನಿರ್ವಹಿಸಬಾರದು. ಬೆಳೆ ಇದ್ದುಕೊಂಡು ಯಾವುದೇ ಕಾರಣಕ್ಕೂ ಬೆಳೆ ನಷ್ಟಗೊಳಿಸುವಂತಿಲ್ಲ. ಒಂದು ವೇಳೆ ಹಂಚಿಕೆಯಾದ ವಿಮಾ ಘಟಕದಲ್ಲಿ ಬೆಳೆ ಬಿತ್ತನೆ ಯಾಗಿರದೇ ಇದ್ದಲ್ಲಿ, ಸಂಬಂಧಿಸಿದ ತಾಲೂಕಿನ ತಹಶೀಲ್ದಾರರು ಹಾಗೂ ಸಹಾಯಕ ಕೃಷಿ ನಿರ್ದೇಶಕರಿಂದ ದೃಢೀಕರಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ. ರೈತರ ಜೊತೆ ಸಂಪರ್ಕವಿರಿಸಿಕೊಂಡು ನಿಗದಿತ ಅವಧಿಯೊಳಗೆ ಬೆಳೆ ಸಮೀಕ್ಷೆಯನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರ್‍ರಾಜಾ ಅವರು ಮಾತನಾಡಿ, ಬೆಳೆ ಸಮೀಕ್ಷೆ, ನಷ್ಟ ಪರಿಹಾರ ನೀಡುವ ಪ್ರಕ್ರೀಯೆಗಳಲ್ಲಿ ತಡವಾದರೆ ರೈತರಿಗೆ ತುಂಬಾ ನಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಫಸಲ್ ಭಿಮಾ ಯೋಜನೆಯಡಿ ವಿಶ್ವಾಸ ಕಡಿಮೆ ಯಾಗುತ್ತಿದ್ದೆ ಇದ್ದಕ್ಕೆ ಯಾರು ಹೋಣೆ. ನಮಗೆ ಸೌಭಾಗ್ಯ ಸಿಕ್ಕಿದ್ದು, ನಾವೇಲ್ಲರು ನೌಕರರಾಗಿದ್ದೇವೆ. ಇದರಿಂದ ನಮಗೆ ಪ್ರತಿ ತಿಂಗಳು ವೇತನ ದೊರೆಯುತ್ತಿದೆ. ಅನ್ನದಾತರಿಗೆ ನಿರ್ಧಿಷ್ಠ ವೇತನ ಇಲ್ಲ. ಅವರು ಬೆಳೆದ ಬೆಳೆಗೆ ಸಿಗುವ ಬೆಲೆಯೇ ಅವರ ವೇತನ. ಸರ್ಕಾರವು ನೀಡುವ ಬೇಂಬಲ ಬೆಲೆ, ಬೆಳೆ ನಷ್ಟ ಪರಿಹಾರಗಳಂತಹ ಸೌಲಭ್ಯಗಳು ಸದುಪಯೋಗವಾಗಬೇಕಾದರೆ ನಿಗದಿತ ಅವಧಿಯೊಳಗೆ ಸರ್ಕಾರದ ಎಲ್ಲಾ ಪ್ರಕ್ರೀಯೆಗಳು ಪೂರ್ಣಗೊಳ್ಳಬೇಕು. ಆದ್ದರಿಂದ ಎಲ್ಲಾ ಅಧಿಕಾರಿಗಳು ಈ ವಿಚಾರಗಳನ್ನು ಸೂಕ್ಷ್ಮವಾಗಿ ನೋಡಿ. ಸಮಯಕ್ಕೆ ಸರಿಯಾಗಿ ರೈತರಿಗೆ ಮಾಹಿತಿ ನೀಡಿ ಮತ್ತು ಅವರ ಸಮಸ್ಯೆಗಳಿಗೆ ಸ್ಪಂಧಿಸಿ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಬೆಳೆ ಕಟಾವು ನಮೂನೆ-1 ರಲ್ಲಿ ಕೈಗೊಳ್ಳುವ ಸಂದರ್ಭದಲ್ಲಿ ಪ್ರತಿ ಪ್ರಯೋಗಕ್ಕೆ ಕನಿಷ್ಠ ಐದು ಸರ್ವೆ ನಂಬರಗಳನ್ನು ದಾಖಲಿಸಬೇಕು. ಯಾವುದೇ ಬೆಳೆ ಕಟಾವು ಪ್ರಯೋಗಗಳನ್ನು ಮಾನವಾಧಾರಿತ ಪದ್ಧತಿಯಲ್ಲಿ ಕೈಗೊಳ್ಳಲು ಅವಕಾಶವಿಲ್ಲ. ಬೆಳೆ ಲಭ್ಯವಿಲ್ಲದ ಪಕ್ಷದಲ್ಲಿ ಮಾತ್ರ ಈ ಮಾಹಿತಿಯನ್ನು ಸಂರಕ್ಷಣೆ ವೆಬ್‍ಸೈಟ್ ನಲ್ಲಿ ಲಭ್ಯವಿರುವ ಬೆಳೆವಾರು ವಿಮಾ ಕಂತು ಪಾವತಿಸಿದ ರೈತರ ಮಾಹಿತಿಯೊಂದಿಗೆ ತಾಳೆ ನೋಡಿ ಸಂಬಂಧಿಸಿದ ಹೋಬಳಿ ಅಥವಾ ಗ್ರಾ.ಪಂ. ಮಟ್ಟದಲ್ಲಿ ಅಧಿಕಾರಿಗಳು ನೀಡಿದ ಪ್ರಮಾಣ ಪತ್ರಗಳನ್ನು ತಾಲೂಕಿನ ತಹಶೀಲ್ದಾರರು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ದೃಢೀಕರಿಸಿದ ನಂತರವೇ ಪ್ರಯೋಗಗಳನ್ನು ನಷ್ಟಗೊಳಿಸಬಹುದಾಗಿದೆ. ಈ ದೃಢೀಕರಣ ಪತ್ರಗಳನ್ನು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಬೆಳೆ ಕಟಾವು ಪ್ರಯೋಗಗಳು ನಷ್ಟವಾದಲ್ಲಿ ಬೆಳೆ ಇಳುವರಿ ಹಾಗೂ ಇನ್ನಿತರೆ ಮಾಹಿತಿಯನ್ನು ದಾಖಲಿಸುವಲ್ಲಿ ಮೂಲ ಕಾರ್ಯಕರ್ತರು ಯಾವುದೇ ತಪ್ಪುಗಳನ್ನು ಮಾಡಿದ ಸಂದರ್ಭದಲ್ಲಿ ಅವರೇ ಜವಾಬ್ದಾರರಾಗಿರುತ್ತಾರೆ. ಬೆಳೆ ಕಟಾವು ಪ್ರಯೋಗಗಳನ್ನು ನಮೂನೆ-1 ರಲ್ಲಿ ನಿಗದಿಪಡಿಸಿದ ದಿನಾಂಕದಂದೇ ಕೈಗೊಲ್ಳುವುದು ಕಡ್ಡಾಯವಾಗಿರುವುದರಿಂದ ಆಗಾಗ ನಮೂನೆ-1 ರಲ್ಲಿ ನೀಡಲಾದ ನಿರೀಕ್ಷಿತ ಕಟಾವು ದಿನಾಂಕವನ್ನು ಸಂಬಂಧಿಸಿದ ರೈತರಿಂದ ಪಡೆದು ನಮೂನೆ-1 ರಲ್ಲಿ ದಿನಾಂಕವನ್ನು ಅಪ್‍ಡೇಟ್ ಮಾಡಬೇಕು. ಅಪ್ಲೋಡ್ ಮಾಡಲಾದ ನಮೂನೆ-1 ಮತ್ತು 2 ಗಳಲ್ಲಿ ಇಳುವರಿ ಮಾಹಿತಿಯನ್ನು ಯಾವುದೇ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ ಮೂಲಕ ಕಾರ್ಯಕರ್ತರು ಇಳುವರಿ, ಬೆಳೆ ಪ್ರತಿಶತ, ಬೆಳೆಯ ತಳಿ, ನೀರಾವರಿಯ ಮೂಲ ಇತ್ಯಾದಿಗಲನ್ನು ದಾಖಲಿಸುವಾಗ ಜಾಗರೂಕತೆಯಿಂದ ದಾಖಲಿಸಬೇಕು. ಸಮೀಕ್ಷೆಯ ಸಮಯದಲ್ಲಿ ನಾಲ್ಕು ಪೋಟೋ ತೆಗೆಯುವುದು ಕಡ್ಡಾಯ ಮತ್ತು 20 ಸೇಕೆಂಡ್ ವಿಡಿಯೋ ಕಡ್ಡಾಯವಾಗಿರುತ್ತದೆ. ಈಗಾಗಲೇ ನಮೂನೆ-1 ರಲ್ಲಿ ಮಾಹಿತಿಯನ್ನು ನೀಡಲಾದ ಮೋಬೈಲ್ ತಂತ್ರಾಂಶದಲ್ಲಿ ಕಾಣಿಸಲಾದ ಸರ್ವೆ ನಂಬರಿನ ರೈತರು ಬೆಳೆ ಕಟಾವು ಮಾಡುವ ಒಂದು ದಿನ ಮುಂಚಿತವಾಗಿ ಸಮೀಕ್ಷಾ ಅಧಿಕಾರಿಗಳಿ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದರು.
ಸಭೆಯಲ್ಲಿ ಕೊಪ್ಪಳ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಶಬಾನ ಶೇಖ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ಜಿಲ್ಲೆಯ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾ.ಪಂ. ಪಿಡಿಓ, ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು