ಬೆಳೆದು ನಿಂತ ಬಾಳೆ ನಾಶ ಮಾಡಿದ ದುಷ್ಕರ್ಮಿಗಳು

ಹಳೇ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಬಾಳೆಗಿಡಗಳನ್ನು ಕಡಿದು ನಾಶ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿರುಪಾಕ್ಷಪ್ಪ ಬಹ್ದೂರಬಂಡಿ ಎಂಬುವವರ ಹೊಲದಲ್ಲಿ ಬಾಳೆ ಗಿಡ ನಾಶ ಮಾಡಲಾಗಿದೆ. ಸುಮಾರು ೨೫೦ ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ದುಷ್ಕರ್ಮಿಗಳು ನಾಶ ಪಡಿಸಿದ್ದು, ಎರಡು ಎಕರೆ ಜಮೀನಿನಲ್ಲಿ ೩ ಸಾವಿರ ಬಾಳೆ ಗಿಡಗಳನ್ನು ನೆಡಲಾಗಿತ್ತು. ಆದ್ರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ರೈತನ ಬೆಳೆಯನ್ನೆ ನಾಶ ಮಾಡಿದ್ದಾರೆ. ಏಳು ತಿಂಗಳಿಂದ ರೈತ ವೀರುಪಾಕ್ಷಪ್ಪ ಬೆಳೆಯನ್ನು ಕಾಪಾಡಿಕೊಂಡ ಬಂದಿದ್ದ. ಆದ್ರೆ ಇದೀಗ ದುಷ್ಕರ್ಮಿಗಳ ಮಾಡಿದ ಅವಾಂತರಕ್ಕೆ ರೈತನ ಬದುಕು ಮುರಾಬಟ್ಟಿಯಾಗಿದೆ. ಇನ್ನು ಘಟನೆಯ ವಿಷಯ ತಿಳಿದ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.