ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯ : ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕೊಪ್ಪಳ : ಕೃಷಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳ ಬೆಲೆ ಕುಸಿತವಾಗಿದ್ದು ಸರ್ಕಾರದಿಂದ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ೨೦೧೭-೧೮ನೇ ಸಾಲಿನಲ್ಲಿ ಮೆಕ್ಕೆಜೋಳ ಸಜ್ಜಿ, ಕಡಲೆ, ತೋಗರಿ ಈ ಬೆಳೆಗಳಿಗೆ ಬೆಲೆಗಳು ಸಂಪೂರ್ಣವಾಗಿ

ಕುಸಿತವಾಗಿದ್ದು ಮತ್ತು ಪ್ರಸಕ್ತಸಾಲಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು ಹಿಂಗಾರು ಮಳೆ ಹೆಚ್ಚಿನ ರೀತಿಯಲ್ಲಿ ಆಗಿದ್ದರಿಂದ ರೈತರು ಹಾನಿಗೊಳಗಾಗಿದ್ದಾರೆ ಪ್ರಸ್ತುತ ಮೆಕ್ಕೆಜೋಳಕ್ಕೆ ರೂ.೧೧೪೫ ಇದೆ, ಸಜ್ಜೆಗೆ ರೂ. ೧೦೪೦ ಮತ್ತು ತೊಗರಿ ಬೆಲೆ ರೂ.೨೫೦೦ ಇದೆ ರೈತರಿಗೆ ಬಂದ ಚೂರು ಪಾರು ಬೆಳೆಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಲೆಯೂ ಸಂಪೂರ್ಣವಾಗಿ ಕುಸಿದಿದ್ದು ರೈತರ ಬದುಕು ತುಂಬಾ ಕಷ್ಟಕರವಾಗಿದೆ ಆದ್ದರಿಂದ ಈ ಕೂಡಲೇ ಸರ್ಕಾರದ ಬೆಂಬಲ ಬೆಲೆಯನ್ನು ಸೇರಿಸಿ ಮೆಕ್ಕೆಜೋಳದ ಬೆಲೆ ರೂ.೧೫೫೦, ಸಜ್ಜೆಗೆ ರೂ.೧೫೫೦ ಮತ್ತು ತೊಗರಿ ಬೆಲೆ ೫೫೦೦ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ, ಜಿ.ಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ನಗರಸಭಾ ಸದಸ್ಯ ಅಪ್ಪಣ ಪದಕಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ತೆಗ್ಗಿನಮನಿ, ಬಿಜೆಪಿ ಮುಖಂಡರಾದ  ಸದಾಶಿವಯ್ಯ ಹಿರೇಮಠ, ದೇವರಾಜ ಹಾಲಸಮುದ್ರ, ಶಿವಯ್ಯ ಹಿರೇಮಠ, ಮಾಹಾಂತೇಶ ಕೊತಬಾಳ, ಮೌನೇಶ ಕಿನ್ನಾಳ ಹಾಗೂ ರೈತರು ಉಪಸ್ಥಿತರಿದ್ದರು.

Please follow and like us:
error