ಬೂದಗುಂಪಾ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಕೊಪ್ಪಳ: ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ವಿನಾಯಕ ನೇತ್ರಾ ಸೇವಾ ಸಂಸ್ಥೆ ಕೊಪ್ಪಳ, ಗ್ರಾಮ ಪಂಚಾಯಿತಿ ಕಾರ್ಯಲಯ ಬೂದಗುಂಪಾ, ವಿನಾಯಕ ಕಣ್ಣಿನ ಉಚಿತ ತಪಾಸಣೆ ಕೇಂದ್ರ ಕುಷ್ಟಗಿ, ಲಯನ್ಸ್ ಕಣ್ಣಿನ ಆಸ್ಪತ್ರೆ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಜು,೧೧ ಮಂಗಳವಾರ ದಿವಸ ತಾಲೂಕಿನ ಬೂದಗುಂಪಾ ಗ್ರಾಮದ ರಾಜೀವಗಾಂಧೀ ಸೇವಾ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
ಕಾರಣ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಸಾರ್ವಜನಿಕರು ಈ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು.
ವಿಶೇಷ ಸೂಚನೆ ಸಹಕಾರ ಇಲಾಖೆಯಿಂದ ಪಡೆದ ಯಶಸ್ವಿನಿ ಹಾಗೂ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಯ ಪ್ರಮಾಣ ಪತ್ರದ ಹೊಂದಿದ ಫಲಾನುಭವಿಗಳಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.
ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೂ ತಮ್ಮ ಹೆಸರುಗಳನ್ನು ನೊಂದಾಯಿಸುಕೊಳ್ಳಲಾಗುವುದು.
ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳನ್ನು ಬುಧುವಾರ ಬೆಳಗ್ಗೆ ಕೊಪ್ಪಳದ ಲಾಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ವಿಶೇಷ ನೇತ್ರ ತಜ್ಞರು ಅತ್ಯಾಧುನಿಕ ಪದ್ದತಿಯಿಂದ ಹೊಲಿಗೆ ರಹಿತ ಕಣ್ಣಿನ ಪೊರೆ ಆಪರೇಶನ್ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಬಸವರಾಜ ಪಲ್ಲೇದ ಅಧ್ಯಕ್ಷರು ವಿನಾಯಕ ನೇತ್ರಾ ಸೇವಾ ಸಂಸ್ಥೆ ಕೊಪ್ಪಳ (೯೮೪೫೦೩೪೯೧೭), ಕಾರ್ಯದರ್ಶಿ ಪ್ರಭು ಜಾಗ್ಯೀರದಾರ (೯೬೬೩೬೯೭೮೪೮), ಲಾಯನ್ಸ್ ಕಣ್ಣಿನ ಆಸ್ಪತ್ರೆ ಕೊಪ್ಪಳ (೦೮೫೩೯-೨೩೧೪೮೫) ಇವರುಗಳನ್ನು ಸಂರ್ಪಕಿಸಲು ಕೋರಲಾಗಿದೆ.

 

Please follow and like us:
error