ಬೂದಗುಂಪಾ, ಕೂಕನಪಳ್ಳಿ ಎರಡೂ ಕಡೆ ಕುರಿ ಸಂತೆ ನಡೆಸಲು ಆಗ್ರಹ

ಕೊಪ್ಪಳ : ಹಿಂದೆ ಜಿಲ್ಲಾಧಿಕಾರಿಗಳು ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಬೂದಂಪ ಗ್ರಾಮದಲ್ಲಿ ಕುರಿ ಸಂತೆ 
ನಡೆಯುತ್ತಿತ್ತು ಮತ್ತು ಮುಂದು ಕೂಡ ಅದೇ ರೀತಿಯಲ್ಲಿ ಕುರಿಸಂತ ಮುಂದುವರಿಯುತ್ತದೆ ಕೊಳ್ಳುವವರು ಹಾಗೂ ಮಾರುವವರು ಶುಕ್ರವಾರದಂದು ನಡೆಯುವ ಕುರಿ ಮೇಕೆಗಳ ಸಂತ ಕೂಕನಪಳ್ಳಿ ಮತ್ತು ಬೂದುಗುಂಡಾ ಗ್ರಾಮದಲ್ಲಿ ಎರಡು ಕಡೆಯಲ್ಲಿ ಒಂದೇ ದಿನ ನಡೆಯುತ್ತಿರುವುದರಿಂದ ಕೊಳ್ಳುವವರು ಹಾಗೂ ಮಾರಾಟ ಮಾಡುವವರು ಯಾವುದೇ ರೀತಿಯ ಪ್ರಶ್ನೆ ಆತಂಕ ಪಡದೆ ಮತ್ತು ಆತಂಕ ಪಡುವಂತಹ ವ್ಯವಸ್ಥೆ ಕೂಡ ಇರುವುದಿಲ್ಲ ಕಾರಣ ಮಾರಾಟಗಾರರು ಮತ್ತು ಕೊಳ್ಳುವವರು ತಮಗೆ ಇಷ್ಟ ಬಂದಲ್ಲಿ ವ್ಯವಹಾರಗಳನ್ನು ಮಾಡುತ್ತಾರೆ , ಬೂದಗುಂಪಾ ಸಂತೆಯಲ್ಲಿ ಮಾರಾಟ ಮಾಡುವುದರಿಂದ ಎಲ್ಲಾ ರೀತಿಯ ಅನುಕೂಲಗಳು ಆಗುತ್ತಿರುವುದು ಈ ಹಿಂದೆ ಜನರೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ . ಆದ್ದರಿಂದ ಯಾವುದೇ ರೀತಿಯಲ್ಲಿ ಆತಂಕ ಪಡದೆ ವ್ಯಾಪಾರಸ್ಥರು ಶುಕ್ರವಾರದ ದಿನ ಬೂದಗುಂಡಾ ಗ್ರಾಮದ ಸಂತೆಗೆ ಬಂದು ತಮ್ಮ ವ್ಯವಹಾರಗಳನ್ನು ಎಂದಿನಂತೆಯೇ ಮುಂದುವರಿಸಬಹುದು ಇದಕ್ಕೆ ಬೂದಗುಂಪಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ವಿರುತ್ತದೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಂಘ ಸಂಸ್ಥೆಗಳು ಕೂಡ ಕೈಜೋಡಿಸುತ್ತವೆ . ಕಾರಣ ಬೂದಗುಂಪಾದಲ್ಲಿ ಕೊಳ್ಳುವವರು ಮತ್ತು ಮಾರಾಟ ಮಾಡುವವರ ಇಚ್ಛೆ ಗೆ ಅನುಸಾರವಾಗಿ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಬೂದಗುಂಪಾ ದಲ್ಲಿ ನಡೆಯುವ ಸಂತೆಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಹನುಮಂತಪ್ಪ ಚಿಂಚಲಿ ಜಿಲ್ಲಾಧ್ಯಕ್ಷರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘ ಆಗ್ರಹಿದರು. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ಕರಡಿ ಸಂಗಣ್ಣ ಸಂತೆಯನ್ನು ಬೂದಗುಂಪಾದಿಂದ ಕೂಕನಪಳ್ಳಿಗೆ ವರ್ಗಾಯಿಸಲು ಪತ್ರ ಬರೆದಿದ್ದಾರೆ. ಇದು ಸರಿಯಲ್ಲ ಕುರಿಗಾರರು, ವ್ಯಾಪಾರಿಗಳು ತಮಗೆ ಅನುಕೂವಾಗುವ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಫಕೀರಪ್ಪ ಎಮ್ಮಿ,  ಸೀಮಣ್ಣ ಗಬ್ಬೂರ  ಪತ್ರಿಕಾಗೋಷ್ಠಿಯಲ್ಲಿ  ಆಗ್ರಹಿಸಿದ್ದಾರೆ.

Please follow and like us:
error